ಆರ್ ಎಮ್‌ ಡಿ ಹೆಸರಿನ ನಕಲಿ ಪಾನ್ ಮಸಾಲ ನಕಲಿ ಮಾರಾಟ ದಂಧೆ

ಜಿಲ್ಲೆ

ಆರ್ ಎಮ್‌ ಡಿ ಹೆಸರಿನ ನಕಲಿ ಪಾನ್ ಮಸಾಲ ತಯಾರಿಸಿ ಬೆಳಗಾವಿ‌ ಜಿಲ್ಲೆ ಸೇರಿದಂತೆ ದೇಶಾದ್ಯಾಂತ ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆ ಹಚ್ಚುವಲ್ಲಿ ಬೆಳಗಾವಿ ಜಿಲ್ಲೆಯ ಪೊಲೀಸರು ಯಶಸ್ವಿಯಾಗಿದ್ದಾರೆ…
ಇದೇ ಮೇ ತಿಂಗಳಲ್ಲಿ ಖಾಸಗಿ‌ ಕಂಪನಿಯ ದೂರನ್ನು ಪರಿಗಣಿಸಿದ ಪ್ರಕರಣ ದಾಖಲಿಸಿದ ಪೋಲಿಸ್ ಅಧಿಕಾರಿಗಳು ಪ್ರತ್ಯೇಕ ತಂಡವನ್ನು ರಚನೆ ಮಾಡಿದ ಪೋಲಿಸ್ ಇಲಾಖೆ ತನಿಖೆ ವೇಳೆ ಆರೋಪಿಗಳು ಕೇವಲ ಆರ್‍ಎಮ್‍ಡಿ ಮಾತ್ರ ಅಲ್ಲದೇ ವಿವಿಧ ಪಾನಮಸಾಲಾ ಸೇರಿ ದೇಶಾಧ್ಯಂತ ಚಲಾವಣೆಯಲ್ಲಿರುವ ನಾನಾ ಕಂಪನಿಯ ಉತ್ಪನ್ನಗಳನ್ನು ಖೊಟ್ಟಿಯಾಗಿ ತಯಾರಿಸಿದ್ದು ಕಂಡು ಬಂದಿದೆ…‌ಸದಲಗಾ ಪಟ್ಟಣದಲ್ಲಿ ರೇಡ್ ಮಾಡಿ ಆರೋಪಿಯನ್ನು‌ ವಿಚಾರಣೆ ನಡೆಸಿದಾಗ ಗೊತ್ತಿಗುದ್ದು, ಸರ್ಕಾರಕ್ಕೆ ಆರೋಪಿಗಳಿಂದ ಕೋಟ್ಯಾಂತರ ರೂಪಾಯಿ ತೆರಿಗೆ ಹಣ ವಂಚನೆ ಆಗಿದ್ದು ಕಂಡು ಬಂದಿದೆ. ಸಾರ್ವಜನಿಕರ ಆರೋಗ್ಯಕ್ಕೂ‌ ನಕಲಿ ಪಾನ್ ಮಸಾಲಾದಿಂದ ಹಾನಿಯಾಗ್ತಾ ಇದೆ.. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ‌ ಮುಂದುವರೆಸಿದ ಅಧಿಕಾರಿಗಳು, ಹೈದರಾಬಾದ್ ಮೂಲದ ವ್ಯಕ್ತಿಯನ್ನು ವಶಕ್ಕೆ ಪಡೆದಯ ವಿಚಾರಣೆ ನಡೆಸಿ ಬೆಂಗಳೂರು ಹಾಗೂ ದೆಹಲಿಯಲ್ಲಿ ಕೂಡ ಇವರ ನಕಲಿ ಉತ್ಪಾದನೆಯ‌ ಕಾರ್ಖಾನೆಗಳ ಮೇಲೆ‌ ದಾಳಿ ನಡೆಸಿ ಎಲ್ಲ ಸಾಮಗ್ರಿ, ಯಂತ್ರೋಪಕರಣಗಳನ್ನು ವಶಕ್ಕೆ‌ ಪಡೆದಿದ್ದಾರೆ‌.. ಕರ್ನಾಟಕದ ಇಬ್ಬರು, ತೆಲಂಗಾಣದ ಓರ್ವ ಹಾಗೂ ದೆಹಲಿ ರಾಜ್ಯದ ಮೂರು ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಆರೋಪಿಗಳಿಂದ ಲಕ್ಷಾಂತರ ರೂ. ಮೌಲ್ಯದ ಯಂತ್ರೋಪಕರಣಗಳು ಹಾಗೂ ಲಕ್ಷಾಂತರ ರೂ. ಮೌಲ್ಯದ ಕಚ್ಛಾ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. 5 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು,

Leave a Reply

Your email address will not be published.