Home Cinema ಪ್ರಭಾಸ್ ಅಭಿನಯದ ರಾಧೇಶ್ಯಾಮ್ ಫಸ್ಟ್ ಲುಕ್ ಔಟ್ ; ಬಾಹುಬಲಿಯ ಹೊಸ ಸಿನಿಮಾದ ಇಂಟ್ರೆಸ್ಟಿಂಗ್ ಖಬರ್

ಪ್ರಭಾಸ್ ಅಭಿನಯದ ರಾಧೇಶ್ಯಾಮ್ ಫಸ್ಟ್ ಲುಕ್ ಔಟ್ ; ಬಾಹುಬಲಿಯ ಹೊಸ ಸಿನಿಮಾದ ಇಂಟ್ರೆಸ್ಟಿಂಗ್ ಖಬರ್

195
0
SHARE

ಪ್ರಭಾಸ್ ಅಭಿನಯದ ಮುಂದಿನ ಚಿತ್ರ ರಾಧೇಶ್ಯಾಮ್ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಯೂವಿ ಕ್ರಿಯೆಷನ್ ಬ್ಯಾನರ್‌ನಡೀ ತಯಾರಾಗ್ತಿರೋ ರಾಧೇಶ್ಯಾಮ್ ಒಂದು ಫ್ರೆಶ್ ಪಿರಿಯಡಿಕಲ್ ಲವ್‌ಸ್ಟೋರಿ ಹೊಂದಿದೆ. ಚಿತ್ರದಲ್ಲಿ ಪೂಜಾ ಹೆಗ್ಡೆ ಪ್ರಭಾಸ್ ಪ್ರೇಯಸಿಯಾಗಿ ಮಿಂಚಿದ್ದಾರೆ. ಇದು ಪಕ್ಕಾ ಪ್ರಭಾಸ್ ಸಿನಿಕೆರಿಯರ್‌ಗೆ ಹೊಸ ಟರ್ನ್ ಕೊಡುತ್ತೆ ಎನ್ನುವ ಟಾಕ್ ಟಾಲಿವುಡ್ ಅಂಗಳದಲ್ಲಿ ಹರಿದಾಡ್ತಿದೆ. ಇದಕ್ಕೆ ತಕ್ಕಹಾಗೇ ಈ ರಾಧೇಶ್ಯಾಮ್ ಸಿನಿಮಾದ ಈ ಹೊಸ ಪೋಸ್ಟರ್ ಕೂಡ ಸಕತ್ ಹೈಪ್ ಗಿಟ್ಟಿಸಿಕೊಂಡಿದೆ.

ಪ್ರಭಾಸ್ ಮುಂದಿನ ಸಿನಿಮಾವಾಗಿರೋ ಈ ರಾಧೆ ಶ್ಯಾಮ್ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಇವೆ. ಆದರೆ ಲಾಕ್‌ಡೌನ್ ಹಿನ್ನಲೆಯಲ್ಲಿ ರಾಧೇಶ್ಯಾಮ್ ಚಿತ್ರತಂಡ ಕೊಂಚಮಟ್ಟಿಗೆ ತನ್ನ ಕೆಲಸಗಳಿಗೆ ಬ್ರೇಕ್ ಹಾಕಿಬಿಟ್ಟಿತ್ತು. ಆದರೆ ಈಗ ನಯಾ ಜೋಷ್‌ನಲ್ಲಿ ಪ್ರಭಾಸ್ ಹೊಸಚಿತ್ರದ ಕೆಲಸಗಳಿಗೆ ಚಾಲನೆ ಸಿಗಲಿದೆ.

 

ಚಿತ್ರದ ಪೋಸ್ಟರ್ ನಾಲ್ಕು ಭಾಷೆಗಳಲ್ಲಿ ರಿಲೀಸ್ ಆಗಿದೆ. ಹಿಂದಿ, ತಮಿಳು, ತೆಲುಗು ಹಾಗೂ ಮಾಲೆಯಾಳಂನಲ್ಲಿ ಪೋಸ್ಟರ್ ಬಿಡುಗಡೆಯಾಗಿದೆ. ಕನ್ನಡದಲ್ಲಿ ಸಿನಿಮಾ ಬರುತ್ತಾ ಎನ್ನುವ ಪ್ರಶ್ನೆಗೆ ಚಿತ್ರತಂಡವೇ ಕ್ಲಾರಿಟಿ ಕೊಡಬೇಕಾಗಿದೆ. ಎಲ್ಲವೂ ಪ್ಲಾನ್ ಪ್ರಕಾರವೇ ನಡೆದ್ರೆ ಶೂಟಿಂಗ್ ಕಂಪ್ಲೀಟ್ ಆಗಿ ಇದೇ ಡಿಸೆಂಬರ್‌ನಲ್ಲಿ ರಾಧೆ ಶ್ಯಾಮ್ ಸಿನಿಮಾ ತೆರೆಕಾಣುತ್ತೆ. ಒಬ್ಬ ಜ್ಯೋತಿಷಿಯ ಅವತಾರದಲ್ಲಿ ಪ್ರಭಾಸ್ ಹೇಗೆ ಕಾಣಿಸ್ತಾರೆ ಎನ್ನುವ ಸಸ್ಪೆನ್ಸ್ ಕೂಡ ದೊಡ್ಡಮಟ್ಟದಲ್ಲೇ ಇದೆ.

 

LEAVE A REPLY

Please enter your comment!
Please enter your name here