
ರಾಯಚೂರು: ಕಲುಷಿತ ನೀರು ಸೇವಿಸಿ ಮಹಿಳೆ ಸಾವು, 40ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು
ರಾಯಚೂರು: ರಾಯಚೂರು ನಗರಸಭೆ ಸರಭರಾಜು ಮಾಡಿದ ನೀರು ಸೇವಿಸಿ 7 ಜನರು ಸಾವನ್ನಪ್ಪಿ ಒಂದು ತಿಂಗಳು ಕಳೆದಿಲ್ಲ. ಅಷ್ಟರಲ್ಲಿಯೇ ಮತ್ತೊಂದು ಅಂಥದ್ದೆ ಘಟನೆ ನಡೆದಿದೆ. ಕಲುಷಿತ ನೀರು ಸೇವಿಸಿ ಎರಡು ಗ್ರಾಮದ ಜನರು ಆಸ್ಪತ್ರೆಗೆ ದಾಖಲಾಗಿದ್ರೆ ಮಹಿಳೆಯೊಬ್ಬರು ಲೋ ಬಿಪಿಯಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ.
ವಲ್ಕಂದಿನ್ನಿ ಮತ್ತು ಜೂಕೂರ ಗ್ರಾಮಗಳಲ್ಲಿ ಜನರು ಭಾನುವಾರ ಕಲುಷಿತ ನೀರು ಸೇವಿಸಿದ್ದರು. ಇದರಿಂದ ಸುಮಾರು 40ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದು, ಜೂಕೂರು ಗ್ರಾಮದ ಲಕ್ಷ್ಮೀ ಎಂಬ ಮಹಿಳೆ ಮೃತಪಟ್ಟಿದ್ದಾರೆ.