ಯಾದಗಿರಿ: ಜಿಲ್ಲಾದ್ಯಂತ ಕಳೆದ ರಾತ್ರಿ ಸುರಿದ ಮಳೆಯ ರೌದ್ರನರ್ತನಕ್ಕೆ ಯಾದಗಿರಿ ಜನ ನಲುಗಿ ಹೋಗಿದ್ದಾರೆ. ರಾತ್ರಿಯಿಡೀ ಸುರಿದ ಮಳೆಯ ಅರ್ಭಟಕ್ಕೆ ಜಿಲ್ಲೆಯ ಅನೇಕ ಗ್ರಾಮೀಣ ಭಾಗದ ರಸ್ತೆಗಳು ಕೊಚ್ಚಿಹೊಗಿದ್ದು, ಪ್ರಮುಖ ರಸ್ತೆಗಳ ಮೇಲೆ ಹರಿಯುತ್ತಿರುವ ನೀರಿನಿಂದ ವಾಹನಗಳು ಸೇರಿದಂತೆ ಜನ ಸಂಚಾರ ಸ್ಥಗಿತಗೊಂಡಿದೆ. ಇನ್ನ ಇತ್ತಿಚಿಗಷ್ಟೇ ರೈತರು ಬಿತ್ತನೆ ಮಾಡಿದ ಅಪಾರ ಪ್ರಮಾಣ ಮುಂಗಾರು ಹೆಸರು ಬೆಳೆ ಮಳೆಯಿಂದ ಹಾನಿಯಾಗಿದ್ದು ರೈತ ಸಂಕಷ್ಟಕಿಡಾಗುವಂತೆ ಮಾಡಿದೆ.
ಇನ್ನ ಜಿಲ್ಲೆಯ ಶಹಪುರ ಪಟ್ಟಣದಲ್ಲಿ ಮಳೆ ನೀರಿನಲ್ಲಿ ಕಾರುಗಳು ಜಲಾವೃತಗೊಂಡ್ಡಿದ್ದರೆ, ಸಗರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೀರು ಹೊಕ್ಕಿದ್ದು ರೋಗಿಗಳು ಪರದಾಡುವಂತಾಗಿದೆ. ಬಿಸಿಲಿನಿಂದ ಬಸವಳಿದ ಅನೇಕ ಹಳ್ಳಕೊಳ್ಳಗಳು ಸಹ ವರುಣರಾಯನ ನರ್ತನಕ್ಕೆ ತುಂಬಿ ಹರಿಯುತ್ತಿವೆ.
ರಾತ್ರಿಯಿಂದ ಜಿಲ್ಲೆಯ ಹಲವು ಭಾಗಗಳಲ್ಲಿ ಸುರಿದ ಮೇಘರಾಯನ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ಥಗೊಂಡಿದ್ದು, ರೈತರು ಬಿತ್ತಿದ ಬೆಳೆ ಕೂಡ ಹಾಳಗಿ ಅನ್ನದಾತನನ್ನ ಸಂಕಷ್ಟಕ್ಕೆ ತಳ್ಳಿದೆ.