Home District ಮಲೆನಾಡಿನಲ್ಲಿ ಕೊಂಚ ತಗ್ಗಿದ ಮಳೆ; ಜನರಲ್ಲಿದ್ದ ಆತಂಕ ದೂರ

ಮಲೆನಾಡಿನಲ್ಲಿ ಕೊಂಚ ತಗ್ಗಿದ ಮಳೆ; ಜನರಲ್ಲಿದ್ದ ಆತಂಕ ದೂರ

243
0
SHARE

ಶಿವಮೊಗ್ಗ. ಮಲೆನಾಡು‌‌‌ ಶಿವಮೊಗ್ಗ ಜಿಲ್ಲೆಯಲ್ಲಿ ವರುಣರಾಯ ಕೊಂಚ ಬಿಡುವು ನೀಡಿದ್ದಾನೆ.. ಕಳೆದ ಒಂದು ವಾರದಿಂದ ಎಡಬಿಡದೆ ಸುರಿಯುತ್ತಿದ್ದ ಮಳೆ, ಕೊಂಚ ಬಿಡುವು ನೀಡಿದ ಹಿನ್ನಲೆ ರೈತರು ಮೆಕ್ಕೆಜೋಳದ  ಬೆಳೆಗಳಿಗೆ ಕಳೆ ಕೀಳುವು ಕೆಲಸವನ್ನ ಮಾಡುತ್ತಿದ್ದಾರೆ. ಜಿಲ್ಲೆಯಾಧ್ಯಂತ ಸುರಿದ ಮಳೆಗೆ ತುಂಗಾ, ಭದ್ರಾ ಹಾಗೂ ಲಿಂಗನಮಕ್ಕಿ ಜಲಾಶಯಗಳ ಒಳ ಹರಿವಿನ ಪ್ರಮಾಣ ಹೆಚ್ಚಿತ್ತು. ಆದ್ರೆ ನಿನ್ನೆ ಒಳಹರಿವಿನ ಪ್ರಮಾಣ ಸಾಕಷ್ಟು ತಗ್ಗಿದೆ.

ತುಂಗಾ ಜಲಾಶಯದ ಮಟ್ಟ 587.63 ಮಿಟರ್ ಇದ್ದು ಜಲಾಶಯಕ್ಕೆ 187.5 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಜಲಾಶಯದಿಂದ 35 ಕ್ಯೂಸೆಕ್ ನೀರನ್ನ ನದಿಗೆ ಬಿಡಲಾಗುತ್ತಿದೆ. ಇನ್ನು ಭದ್ರಾ ಜಲಾಶಯದ ನೀರಿನ ಮಟ್ಟ 137.1 ಅಡಿ ಇದ್ದು. ಜಲಾಶಯದ ಒಳಹರಿವಿನ ಪ್ರಮಾಣ 3900 ಕ್ಯೂಸೆಕ್ ಇದ್ದು ಜಲಾಶಯದಿಂದ 161 ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ.

ಇನ್ನು ರಾಜ್ಯದ ಅತಿ ದೊಡ್ಡ ಜಲಾಶಯಗಳಲ್ಲಿ ಒಂದಾಗಿರುವ ಲಿಂಗನಮಕ್ಕಿ ಜಲಾಶಯದ ಹಿನ್ನಿರಿನ ವ್ಯಾಪ್ತಿ ಹಾಗೂ ಹೊಸನಗರ ತಾಲೂಕಿನಲ್ಲಿ ಮಳೆ ಕೊಂಚ ತಗ್ಗಿದ ಪರಿಣಾಮ 2579 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 7071 ಕ್ಯೂಸೆಕ್ ನೀರನ್ನ ಹೊರ ಹರಿಸಲಾಗುತ್ತಿದೆ. ಇನ್ನು ಕಳೆದ ವರ್ಷಕ್ಕೆ ಹೋಲಿಸಿಕೊಂಡರೆ ಜಲಾಶಯದಲ್ಲಿ ನೀರಿನ‌ ಸಂಗ್ರಹಣೆ ಹೆಚ್ಚಾಗಿದ್ದು ಜಲಾಶಯದ ನೀರಿನ‌ಮಟ್ಟ 1759.25 ಅಡಿಯಷ್ಟಿದೆ.

LEAVE A REPLY

Please enter your comment!
Please enter your name here