ರಾಜಣ್ಣನ ಹೇಳಿಕೆ ನೀಚ ಮತ್ತು ತುಚ್ಛ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ: ಪರಿಷತ್ ಸದಸ್ಯ ಟಿಎ ಶರವಣ

ಬೆಂಗಳೂರು

ಬೆಂಗಳೂರು: ಎಚ್ ಡಿ ದೇವೇಗೌಡರ ಕುರಿತ ರಾಜಣ್ಣ ಹೇಳಿಕೆಗೆ ಪರಿಷತ್ ಸದಸ್ಯ ಟಿಎ ಶರವಣ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಜೆಪಿ ಭವನದಲ್ಲಿ ಮಾತನಾಡಿದ ಅವರು, ಕನ್ನಡ ನಾಡಿನ ದಿಗ್ಗಜ ಚೇತನ ಜೆಡಿಎಸ್‌ ವರಿಷ್ಠ ಎಚ್‌.ಡಿ ದೇವೇಗೌಡ ಅವರ ಆಯುಷ್ಯದ ಬಗ್ಗೆ ಕಾಂಗ್ರೆಸ್‌ ನಾಯಕ ರಾಜಣ್ಣ ಹೀನಾಯ ಮಾತುಗಳು

ಅವರ ನೀಚ ಮತ್ತು ತುಚ್ಛ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ ಎಂದರು. ಹುಟ್ಟು-ಸಾವು ಪ್ರಕೃತಿ ನಿಯಮ. ಅದನ್ನು ಮೀರಿದವರು ಯಾರೂ ಇಲ್ಲ. ಇದು ವಾಸ್ತವದ ಸತ್ಯ. ಇಂತಹ ಜಗದ ನಿಯಮವನ್ನು ದೇವೇಗೌಡ ಅವರಿಗೆ ಸಮೀಕರಿಸಿ ಮಾತನಾಡಿರುವ ರಾಜಣ್ಣ ತಾವು ಶಾಶ್ವತ ವಾಗಿ ಈ ಭೂಮಿಯ ಮೇಳೆ ಚಿರಸ್ಥಾಯಿಯಾಗಿ ಉಳಿಯುತ್ತೇನೆ ಎಂಬ ಹುಚ್ಚುತನ, ಹುಸಿ ನಂಬಿಕೆಯಿಂದ ದುರಹಂಕಾರದ ಮಾತು ಗಳನ್ನು ಆಡಿರುವುದು ಖಂಡನಾರ್ಹ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.