ರಕ್ಷಾ ಬಂಧನಕ್ಕೆ ಮೋದಿಗೆ ಬಂತು ಪಾಕಿಸ್ತಾನಿ ಸಹೋದರಿಯಿಂದ ರಾಖಿ

ಅಂತರಾಷ್ಟ್ರೀಯ

ಇಸ್ಲಾಮಾಬಾದ್: ರಕ್ಷಾ ಬಂಧನದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಾಕಿಸ್ತಾನಿ ಸಹೋದರಿ ಕಮರ್ ಮೊಹ್ಸಿನ್ ಶೇಖ್ ರಾಖಿ ಕಳುಹಿಸಿದ್ದು, 2024 ರ ಸಾರ್ವತ್ರಿಕ ಚುನಾವಣೆಗೆ ಶುಭ ಹಾರೈಸಿದ್ದಾರೆ.

ಈ ಬಗ್ಗೆ ಮಾತನಾಡಿದ ಕಮರ್ ಮೊಹ್ಸಿನ್ ಶೇಖ್, ಈ ಬಾರಿ ನನ್ನ ಸಹೋದರಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವ ನಿರೀಕ್ಷೆಯಿದೆ. ಇದಕ್ಕಾಗಿ ನಾನು ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದ್ದೇನೆ ಎಂದರು.

ಮೋದಿ ಈ ಬಾರಿ ನನ್ನನ್ನು ದೆಹಲಿಗೆ ಕರೆಯುತ್ತಾರೆ ಎಂದು ನಾನು ಭಾವಿಸಿದ್ದು, ನಾನು ಎಲ್ಲಾ ಸಿದ್ಧತೆಗಳನ್ನು ಮಾಡಿದ್ದೇನೆ. ಕಸೂತಿ ವಿನ್ಯಾಸದೊಂದಿಗೆ ರೇಷ್ಮೆಯ ರಿಬ್ಬನ್ ಬಳಸಿ ನಾನೇ ಈ ರಾಖಿಯನ್ನು ತಯಾರಿಸಿದ್ದೇನೆ. ಇದರೊಂದಿಗೆ ಪತ್ರವನ್ನೂ ಬರೆದಿದ್ದು, ಅವರ ಉತ್ತಮ ಆರೋಗ್ಯ ಹಾಗೂ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಿದ್ದೇನೆ. ಜೊತೆಗೆ2024ರ ಚುನಾವಣೆಗೆ ಶುಭ ಹಾರೈಸಿದ್ದೇನೆ ಎಂದು ತಿಳಿಸಿದ್ದಾರೆ.

ಕಮರ್ ಮೋಹ್ಸಿನ್ ಶೇಖ್ ಅವರು ಕಳೆದ ವರ್ಷವೂ ರಕ್ಷಾ ಬಂಧನದ ನಿಮಿತ್ತ ಪ್ರಧಾನಿ ಮೋದಿ ಅವರಿಗೆ ರಾಖಿ ಹಾಗೂ ಪತ್ರವನ್ನು ಕಳುಹಿಸಿದ್ದರು.

Leave a Reply

Your email address will not be published.