Home District ರಾಮಕೃಷ್ಣ ವಿದ್ಯಾಲಯದಲ್ಲಿ ಸರ್ಕಾರದ ಆದೇಶಕ್ಕಿಲ್ಲಾ ಕಿಮ್ಮತ್ತು; ಮಧ್ಯರಾತ್ರಿ ಹಾಸ್ಟೆಲ್ ನಿಂದ ತಪ್ಪಿಸಿಕೊಂಡು ಓಡಿ ಹೋದ ವಿದ್ಯಾರ್ಥಿಗಳು…!

ರಾಮಕೃಷ್ಣ ವಿದ್ಯಾಲಯದಲ್ಲಿ ಸರ್ಕಾರದ ಆದೇಶಕ್ಕಿಲ್ಲಾ ಕಿಮ್ಮತ್ತು; ಮಧ್ಯರಾತ್ರಿ ಹಾಸ್ಟೆಲ್ ನಿಂದ ತಪ್ಪಿಸಿಕೊಂಡು ಓಡಿ ಹೋದ ವಿದ್ಯಾರ್ಥಿಗಳು…!

521
1
SHARE

ಶಿವಮೊಗ್ಗ: ಸದಾ ಒಂದಿಲ್ಲೊಂದು ವಿವಾದಿಂದಲೇ ಸುದ್ದಿಯಲ್ಲಿರೋ ಹೊಸನಗರ ತಾಲೂಕಿನ ರಾಮಕೃಷ್ಣ ವಿದ್ಯಾಲಯ ಮತ್ತೊಂದು ವಿವಾದ ಮೂಲಕ ಸುದ್ದಿಗೆ ಬಂದಿದೆ. ರಾಮಕೃಷ್ಣ ವಿದ್ಯಾಲಯದ ಮುಖ್ಯ ಶಿಕ್ಷಕರು ಮತ್ತು ಸಿಬ್ಬಂದಿಗಳು ಮಕ್ಕಳ ಜೀವನದಲ್ಲಿ ಚೆಲ್ಲಾಟವಾಡುತ್ತಿದ್ದಾರೆ. ಕೊರೊನಾ ಹೆಚ್ಚುತ್ತಿರುವ ಹಿನ್ನಲೆಯಲ್ಲಿ 1ರಿಂದ 9 ನೇ ತರಗತಿ ವಿದ್ಯಾರ್ಥಿಗಳಿಗೆ ತರಗತಿ ನಡೆಸದಂತೆ ಸರ್ಕಾರ ಆದೇಶ ಹೊರಡಿಸಿದೆ. ಅದ್ರೆ ರಾಮಕೃಷ್ಣ ವಿದ್ಯಾಯಲಕ್ಕೆ ಈ ಮಾತ್ರ ಈ ಆದೇಶ ಅನ್ವಯಿಸೋದಿಲ್ವೇನೋ ಎನ್ನುವ ಅನುಮಾನ ಮೂಡಿದೆ.

ಹೊಸನಗರದ ಶ್ರೀ ರಾಮಕೃಷ್ಣ ವಿದ್ಯಾಲಯದಲ್ಲಿ ಹಣಕ್ಕಾಗಿ 9ನೇ ತರಗತಿ ವಿದ್ಯಾರ್ಥಿಗಳನ್ನು ಹಾಸ್ಟೆಲ್ನಲ್ಲಿ ಕೂಡಿ ಹಾಕಿದ್ದಾರೆ. ಅಷ್ಟೇ ಅಲ್ಲದೇ ಶಾಲಾ ಶುಲ್ಕ ಪಾವತಿಸಿ ಮಕ್ಕಳನ್ನ ಕರೆದು ಕೊಂಡು ಹೋಗುವಂತೆ ತಂದೆ ತಾಯಿಗೆ ಒತ್ತಡ ಹೇರಿದ್ದಾರೆ. ಖಾಸಗಿ ಶಾಲೆಗಳಲ್ಲಿ ಫೀಸ್ ಗಾಗಿ ಒತ್ತಡ ಹಾಕುವಂತಿಲ್ಲ ಎಂಬ ನಿಯಮವಿದ್ದರು ಕೂಡ ಇಲ್ಲಿ ವಿದ್ಯಾರ್ಥಿಗಳನ್ನು ಹಣಕ್ಕಾಗಿ ಕೂಡಿ ಹಾಕಿ ಚಿತ್ರಹಿಂಸೆ ನೀಡಿದ್ದಾರೆ. ಚಿತ್ರ ಹಿಂಸೆ ತಾಳಲಾರದೆ ಸುಮಾರು 15ಕ್ಕೂ ಹೆಚ್ಚು ಮಕ್ಕಳು ಹಾಸ್ಟೆಲ್ ಇಂದ ಓಡಿ ಹೋಗಿದ್ದಾರೆ… ಹಾಸ್ಟೆಲ್ ನ ಎಲ್ಲಾ ವಿದ್ಯಾರ್ಥಿಗಳೆಲ್ಲರು ಸೇರಿ ನಿರ್ಧಾರ ಮಾಡಿ ಮೂರು ಜನ ಮಕ್ಕಳನ್ನ ಶೌಚಾಲಯದ ಕಿಟಕಿ ಇಂದ ಮಧ್ಯರಾತ್ರಿ ಹೊರಗೆ ಕಳಿಸಿ ಈ ವಿಷಯವನ್ನು ಮಾದ್ಯಮದವರಿಗೆ ತಿಳಿಸುವಂತೆ ಚೀಟಿ ಬರೆದು ಕೊಟ್ಟು ಕಳುಹಿಸಿದ್ದಾರೆ.

ಜಿ. ಪಂ. ಸದಸ್ಯ ಸುರೇಶ್ ಸ್ವಾಮಿ ರಾವ್ ಮಾತನಾಡಿ ಹಾಸ್ಟೆಲ್ ನಿಂದ ತಪ್ಪಿಸಿಕೊಂಡ ಬಂದ ಮೂವರು ವಿದ್ಯಾರ್ಥಿಗಳು ಮಧ್ಯರಾತ್ರಿ ರಸ್ತೆ ಬದಿ ಓಡಾಡುತ್ತಿದ್ದನ್ನ ಕಂಡ ಸ್ಥಳೀಯರು ಅನುಮಾನಗೊಂಡು ವಿಚಾರಿಸಿದಾಗ ವಿದ್ಯಾಲಯದ ನರಕ ಸದೃಶ್ಯ ವಾತಾವರಣ ಬೆಳಕಿಗೆ ಬಂದಿದೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಜಿಲ್ಲಾ ಪಂಚಾಯಿತಿ ಸದಸ್ಯ ಸುರೇಶ್ ಸ್ವಾಮಿ ರಾವ್ ಮತ್ತು ಪಟ್ಟಣ ಪಂಚಾಯಿತಿ ಸದಸ್ಯ ಸುರೇಂದ್ರ ಕೋಟ್ಯಾನ್ ಶಾಲೆಯ ವಿರುಧ್ಧ ಕಠಿಣ ಕೈಗೊಳ್ಳುವಂತೆ ಬಿಇಓಗೆ ಆಗ್ರಹಿಸಿದ್ದಾರೆ ಎಂದರು.

ಸ್ಥಳೀಯರು ಮತ್ತು ಬಿಇಓ ಖುದ್ದು ಶಾಲೆಗ ಆಗಮಿಸಿದ್ದಾರೆ. ವಿದ್ಯಾರ್ಥಿಗಳನ್ನ ಮಾತನಾಡಿಸಿದಾಗ ಶಾಲೆಯ ನೈಜ ಸ್ಥಿತಿ ಬೆಳಕಿಗೆ ಬಂದಿದೆ. ವಿದ್ಯಾರ್ಥಿಗಳು ತಮ್ಮ ನೋವನ್ನ ಬಿಇಓ ಮುಂದೆ ಹೇಳಿಕೊಂಡಿದ್ದಾರೆ. ಶಾಲೆ ಆಡಳಿತ ಮಂಡಳಿಯ ವಿರುದ್ಧ ಕಠಿಣ ಕ್ರಮಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ.

1 COMMENT

LEAVE A REPLY

Please enter your comment!
Please enter your name here