
ನೀರು ತರಲು ಹೋರಾಟ ಮಾಡೋರು ರಾಮನಗರದಲ್ಲಿ ಬಲೂನ್ ಹಾರಸ್ಕೊಂಡು ಕೂತಿದ್ದಾರೆ: ಎಚ್ ಡಿ ಕುಮಾರಸ್ವಾಮಿ ವ್ಯಂಗ್ಯ
ಬೆಂಗಳೂರು: ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಸಂಬಂಧ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮೇಕೆದಾಟು ಯೋಜನೆಗೆ ಕಾಂಗ್ರೆಸ್ ನಾಯಕರು ಪಾದಯಾತ್ರೆ ಮಾಡುತ್ತಿರುವುದು ಬಹಳ ಸಂತೋಷದ ವಿಚಾರವಾಗಿದೆ. ಪಾದಯಾತ್ರೆ ಹೆಸರಿನಲ್ಲಿ ರಾಮನಗರದಲ್ಲಿ ಬಲೂನ್ ಕಟ್ಟಿ, ನಾಯಕರ ದೊಡ್ಡ ದೊಡ್ಡ ಕಟೌಟ್ಗಳನ್ನ ಹಾಕಿದ್ದಾರೆ. ಬಲೂನ್ ಕಟ್ಟಿಕೊಂಡು ಯಾವುದೋ ಜಾತ್ರೆ ಮಾಡುತ್ತಿದ್ದಾರೆ. ಇವರು ಪಾದಯಾತ್ರೆ ಮಾಡಿ ನೀರು ತರಲು ಹೋರಾಟ ಮಾಡೋರು ರಾಮನಗರದಲ್ಲಿ ಬಲೂನ್ ಹಾರಸ್ಕೊಂಡು ಕೂತಿದ್ದಾರೆ. ಇದು ನೀರು ತರತಕ್ಕಂತ ಹೋರಾಟಾನಾ? ಇದೆಲ್ಲ ನೋಡಿದಾಗ ಇದು ನೀರು ತರತಕ್ಕಂತ ಪಾದಯಾತ್ರೆ ಅಲ್ಲ, ಇದು ಅವರ ಪಕ್ಷದ ಪ್ರಚಾರಕ್ಕೆ ಮೇಕೆದಾಟು ಹೆಸರು ಉಪಯೋಗ ಮಾಡಿಕೊಳ್ಳುತ್ತಿದ್ದಾರೆ ಅಂತ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.