ತೆರೆಗೆ ಬರಲು ಸಜ್ಜಾದ ‘ಧಮ್’ : ಇದು ಸುದೀಪ್ ಸಿನಿಮಾವಲ್ಲ, ಹೊಸಬರ ಚಿತ್ರ

ಚಲನಚಿತ್ರ

ಕಿಚ್ಚ ಸುದೀಪ್ ನಟನೆಯ 2002ರಲ್ಲಿ ತೆರೆಗೆ ಬಂದ ಸೂಪರ್ ಹಿಟ್ ಸಿನಿಮಾ ಧಮ್. ಎಂ.ಎಸ್.ರಮೇಶ್ ನಿರ್ದೇಶನದ ಮಾಡಿದ್ದ ಈ ಸುದೀಪ್ ವರದನಾಗಿ ಬಣ್ಣ ಹಚ್ಚಿದ್ದು ಅಭಿಮಾನಿಗಳು ಚಿತ್ರವನ್ನು ಮೆಚ್ಚಿಕೊಂಡಿದ್ದರು. ಇದೀಗ ಇದೇ ಹೆಸರಿನಲ್ಲಿ ಹೊಸಬರ ಸಿನಿಮಾವೊಂದು ತೆರೆಗೆ ಬರ್ತಿದ್ದು ಸದ್ಯ ಚಿತ್ರತಂಡ ಟ್ರೈಲರ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡಿದೆ.

ವಿಆರ್ ಆರ್ ನಿರ್ದೇಶನದ ಧಮ್ ಸಿನಿಮಾದಲ್ಲಿ ನಾಯಕನಾಗಿ ಶ್ರೀಜಿತ್ ಕಾಣಿಸಿಕೊಂಡಿದ್ದಾರೆ. ಅಂದಹಾಗೆ ಈ ಮೊದಲು ಚಿತ್ರದಲ್ಲಿ ಸಂಚಾರಿ ವಿಜಯ್ ರನ್ನು ನಾಯಕನಾಗಿ ಆಯ್ಕೆ ಮಾಡಿಕೊಳ್ಳಬೇಕು ಎಂಬ ಮಾತುಕತೆ ನಡೆದಿತ್ತು. ಆದರೆ ಸಂಚಾರಿವ ವಿಜಯ್ ನಿಧನದ ಬಳಿಕ ಆ ಜಾಗಕ್ಕೆ ಶ್ರೀಜಿತ್ ರನ್ನು ಕರೆ ತರಲಾಗಿದೆ. ಶ್ರೀಜಿತ್ ಗೆ ಇದು ಎರಡನೇ ಸಿನಿಮಾ. ಈ ಮೊದಲು ರಂಗ್ ಬಿ ರಂಗ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಶ್ರೀಜಿತ್ ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.

ಧಮ್ ಸಿನಿಮಾದ ಮೂಲಕ ಎರೀನ್ ಅಧಿಕಾರಿ ನಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟಿದ್ದಾರೆ. ಈ ಹಿಂದೆ ಬಂಗಾಳಿ, ತೆಲುಗು, ಹಿಂದಿ ಚಿತ್ರಗಳಲ್ಲಿ ನಟಿಸಿದ ಅನುಭವ ಇದು ಇದು ಅವರ ಕನ್ನಡದ ಮೊದಲ ಸಿನಿಮಾ.

‘ನಾನು ಬಾಲನಟನಾಗಿ ‘ಹಾತಿ ಮೇರೆ ಸಾತಿ’ ಸೇರಿದಂತೆ ಸುಮಾರು ನೂರೈವತ್ತಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಹದಿನಾರು ಚಿತ್ರಗಳನ್ನು ನಿರ್ದೇಶಿಸಿದ್ದೇನೆ. ನನ್ನ ತಾಯಿ ಮೈಸೂರಿನವರು‌. ಅವರಿಗೆ ನಾನು ಕನ್ನಡ ಚಿತ್ರವೊಂದಕ್ಕೆ ನಿರ್ದೇಶನ ಮಾಡಬೇಕು ಎಂಬ ಆಸೆಯಿತ್ತು. ಅದು ‘ಧಮ್​’ ಮೂಲಕ ಈಡೇರಿದೆ’ ಎಂದು ನಿರ್ದೇಶಕ ವಿಆರ್​ಆರ್​ ಹೇಳಿದ್ದಾರೆ.

 

Leave a Reply

Your email address will not be published.