ತನಿಖೆಗೂ ಮುನ್ನ ನಾನು ಏನೂ ಹೇಳಲ್ಲ. ಕೊಲೆಗೆ ಕಾರಣ ಗೊತ್ತಾಗಲಿ: ಪ್ರಧಾನ ಕಾರ್ಯದರ್ಶಿ ಸಿಟಿ ರವಿ

ಬೆಂಗಳೂರು

ಬೆಂಗಳೂರು: ಹಿಂದೂ ಕಾರ್ಯಕರ್ತನ ಕೊಲೆಯಲ್ಲಿ ಮುಸ್ಲಿಂ ಗೂಂಡಾಗಳ ಕೈವಾಡ ಇದೆ ಎಂಬ ಈಶ್ವರಪ್ಪ ಹೇಳಿಕೆಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ನಡೆದ ಕೊಲೆ ಖಂಡನೀಯ. ಆದಷ್ಟೂ ಶೀಘ್ರವಾಗಿ ಕೊಲೆ ಮಾಡಿದವರನ್ನು ಬಂಧಿಸಬೇಕು. ಅವರು ಸ್ಥಳೀಯ ಜನ ಪ್ರತಿನಿಧಿ. ಹೀಗಾಗಿ ಈಶ್ವರಪ್ಪ ಅವರು ಮುಸ್ಲಿಂ ಗೂಂಡಾಗಳು ಕೊಲೆ ಮಾಡಿದ್ದಾರೆ ಎಂದು ಹೇಳಿರಬಹುದು ಎಂದು ತಿಳಿಸಿದ್ದಾರೆ. ನಿನ್ನೆ ರಾತ್ರಿ ಸಕ್ರಿಯವಾಗಿದ್ದ ಕಾರ್ಯಕರ್ತ ಹರ್ಷನ ಕೊಲೆ ಮಾಡಿದ್ದಾರೆ. ಕೊಲೆಗೆ ಕಾರಣರಾದವರ ಬಂಧನ ಆಗಬೇಕು. ಇದು ಮೇಲ್ನೋಟಕ್ಕೆ ಪೂರ್ವಯೋಜಿತ ಕೊಲೆ ಥರ ಕಾಣ್ತಿದೆ. ತನಿಖೆಗೂ ಮುನ್ನ ನಾನು ಏನೂ ಹೇಳಲ್ಲ. ಕೊಲೆಗೆ ಕಾರಣ ಗೊತ್ತಾಗಲಿ ಎಂದು ಸಿಟಿ ರವಿ ಹೇಳಿದ್ದಾರೆ.

Leave a Reply

Your email address will not be published.