ಯುರೋಪ್ ಸುರಕ್ಷತೆಗೆ ಪುಟಿನ್ ಅಜಾಗರೂಕ ಕ್ರಮಗಳಿಂದ ಬೆದರಿಕೆ ಹಾಕುತ್ತಿದ್ದಾರೆ: ಇಂಗ್ಲೆಂಡ್ ಪ್ರಧಾನಿ ಆಕ್ರೋಶ

ಅಂತರಾಷ್ಟ್ರೀಯ

ಇಂಗ್ಲೆಂಡ್ :ರಷ್ಯಾ ಪರಮಾಣು ಸ್ಥಾವರಕ್ಕೆ ದಾಳಿ ನಡೆಸಿರುವ ಸಂಬಂಧ ಉಕ್ರೇನ್ ಅಧ್ಯಕ್ಷರ ಜತೆ ಇಂಗ್ಲೆಂಡ್ ಪ್ರಧಾನಿ ಜಾನ್ಸನ್ ಚರ್ಚೆ ನಡೆಸಿದ್ದಾರೆ. ಯುರೋಪ್ ಸುರಕ್ಷತೆಗೆ ಪುಟಿನ್ ಅಜಾಗರೂಕ ಕ್ರಮಗಳಿಂದ ಬೆದರಿಕೆ ಹಾಕುತ್ತಿದ್ದಾರೆ. ಪರಿಸ್ಥಿತಿ ಮತ್ತಷ್ಟು ಹದಗೆಡದಂತೆ ನಾವು ನೋಡಿಕೊಳ್ಳುತ್ತೇವೆ ಎಂದು ಇಂಗ್ಲಂಡ್ ಪ್ರಧಾನಿ ಝೆಲೆನ್​ಸ್ಕಿಗೆ ತಿಳಿಸಿದ್ದಾರೆ. ಇನ್ನೂ ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದು ವರೆಸಿದೆ. ಉಕ್ರೇನ್ ಮೇಲೆ ರಷ್ಯಾ ಸೇನೆಯಿಂದ ಇದುವರೆಗೆ 480 ಕ್ಷಿಪಣಿ ದಾಳಿ ನಡೆಸಲಾಗಿದ್ದು, ಈ ಪೈಕಿ 70 ಕ್ಷಿಪಣಿಗಳನ್ನ ಬೆಲಾರ ಸ್‌ನಿಂದ ಹಾರಿಸಿದ್ದಾರೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಹೇಳಿಕೆ ನೀಡಿದೆ.

Leave a Reply

Your email address will not be published.