ತಿಪ್ಪಗೊಂಡನಹಳ್ಳಿ & ಹೆಸರಘಟ್ಟ ಜಲಾಶಯಗಳಲ್ಲಿ ದಾಖಲೆ ಮಟ್ಟದ ನೀರು ಸಂಗ್ರಹ..!

ಬೆಂಗಳೂರು

ಬೆಂಗಳೂರು: ಬೆಂಗಳೂರಿಗೆ ಕುಡಿಯುವ ನೀರು ಒದಗಿಸುತ್ತಿದ್ದ ತಿಪ್ಪಗೊಂಡನಹಳ್ಳಿ ಹಾಗೂ ಹೆಸರಘಟ್ಟ ಜಲಾಶಯಗಳಲ್ಲಿ ದಶಕದ ನಂತರ ದಾಖಲೆ ಮಟ್ಟಕ್ಕೆ ನೀರು ತುಂಬಿದೆ. ಜುಲೈ ಹಾಗೂ ಆಗಸ್ಟ್‌ ಮೊದಲ ವಾರದಲ್ಲಿ ಸುರಿದ ಮಳೆಯಿಂದಾಗಿ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಆ.5ರ ಅವಧಿಯಲ್ಲಿ 46.5 ಅಡಿ ನೀರು ಸಂಗ್ರಹ ವಾಗಿದೆ. ಇದರ ಗರಿಷ್ಠ ಮಟ್ಟ 69 ಅಡಿ. ಹೆಸರಘಟ್ಟ ಜಲಾಶಯದಲ್ಲಿ 19 ಅಡಿ ನೀರಿದೆ. ತಿಪ್ಪಗೊಂಡನಹಳ್ಳಿಗೆ ಆ.5ರ ಶುಕ್ರವಾರ ಒಂದೇ ದಿನ 4.5 ಅಡಿ ನೀರು ಬಂದಿದೆ.

ಮಳೆ ಮುಂದುವರಿದಿದ್ದು, ಜಲಾಶಯಕ್ಕೆ ನೀರು ಬರುತ್ತಲೇ ಇದೆ. ಆಗಸ್ಟ್‌ ಮೊದಲನೇ ವಾರದಲ್ಲಿ ಇಷ್ಟು ನೀರು ತುಂಬಿರುವುದು ಸುಮಾರು 12 ವರ್ಷಗಳಿಂದೀಚೆಗೆ ಇದೇ ಮೊದಲು. ಸೆಪ್ಟೆಂಬರ್‌- ಅಕ್ಟೋಬರ್‌ ವೇಳೆಯಲ್ಲಿ ಸುಮಾರು 50 ಅಡಿಯಷ್ಟು ಗರಿಷ್ಠ ಸಂಗ್ರಹವನ್ನು ಕಾಣುತ್ತಿತ್ತು. ಆದರೆ, ಈ ಬಾರಿ ಆಗಸ್ಟ್‌ ಆರಂಭದಲ್ಲೇ ಹೆಚ್ಚು ನೀರು ಸಂಗ್ರಹವಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

Leave a Reply

Your email address will not be published.