ವಾಟ್ಸಾಪ್ ನಲ್ಲಿ Red Heat Emoji ಕಳುಹಿಸಿದರೆ ₹20 ಲಕ್ಷ ದಂಡ..!

ಅಂತರಾಷ್ಟ್ರೀಯ

ಸೌಧಿ ಅರೇಬಿಯಾ: ವಾಟ್ಸಾಪ್​ನಲ್ಲಿ ಕೆಂಪು ಹಾರ್ಟ್​ನ ಇಮೋಜಿ ಕಳುಹಿಸುವುದು ಅಪರಾಧಕ್ಕೆ ಸಮಾನ ಎಂದು ಸೌಧಿ ಅರೇಬಿಯಾದ ಆ್ಯಂಟಿ ಫ್ರಾಡ್ ಅಸೋಸಿ ಯೇಷನ್​​ನ ಸದಸ್ಯ ಅಲ್​ ಮೊಟಾಜ್ ಕುಟ್ಜಿ ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ಇನ್ನುಮುಂದೆ ವಾಟ್ಸಾಪ್​ನಲ್ಲಿ ಹಾರ್ಟ್ ಇಮೋಜಿ ಕಳುಹಿಸಿದರೆ 20 ಲಕ್ಷ ರೂಪಾಯಿ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಕಿರುಕುಳ ವಿರೋಧಿ ವ್ಯವಸ್ಥೆಯ ಪ್ರಕಾರ,

ಕಿರುಕುಳವನ್ನು ಆಧುನಿಕ ತಂತ್ರಜ್ಞಾನ ಸೇರಿದಂತೆ ಯಾವುದೇ ವಿಧಾನದಿಂದ ಅವನ/ಅವಳ ದೇಹ ಅಥವಾ ಗೌರವಕ್ಕೆ ಧಕ್ಕೆ ತರುವ ಅಥವಾ ಅವನ/ಆಕೆಯ ನಮ್ರತೆಯನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಯೊಂದಿಗೆ ಲೈಂಗಿಕ ಅರ್ಥದೊಂದಿಗೆ ವರ್ತಿಸುವುದು ಅಥವಾ ಸನ್ನೆ ಮಾಡುವುದು ಎಂದು ವ್ಯಾಖ್ಯಾನಿಸಲಾಗಿದೆ. ಇದು ಕೆಂಪು ಹೃದಯಗಳು ಮತ್ತು ಕೆಂಪು ಗುಲಾಬಿಗಳಂತಹ ಸಮಾಜದ ಪದ್ಧತಿಯ ಪ್ರಕಾರ ಲೈಂಗಿಕ ಅರ್ಥಗಳೊಂದಿಗೆ ಸಂಬಂಧಿಸಿದ ಇಮೋಜಿಗಳ ಒಳಗೊಂಡಿರುತ್ತದೆ ಎಂದು ಕುಟ್ಬಿ ಉಲ್ಲೇಖಿಸಿದ್ದಾರೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.

Leave a Reply

Your email address will not be published.