
ಖ್ಯಾತ ನಟಿ ಶ್ರುತಿ ಹಾಸನ್ ಗೆ ಕೊರೊನಾ ಸೋಂಕು ದೃಢ
ಖ್ಯಾತ ನಟಿ, ಶ್ರುತಿ ಹಾಸನ್ ಗೂ ಕೊರೊನಾ ಸೋಂಕು ಅಂಟಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅವರು ಬರೆದುಕೊಂಡಿದ್ದಾರೆ. ನೆಚ್ಚಿನ ನಟಿಗೆ ಕೊವಿಡ್ ಅಂಟಿರುವುದರಿಂದ ಸಹಜವಾಗಿಯೇ ಅವರ ಅಭಿಮಾನಿಗಳು ಕೊಂಚ ಆತಂಕಗೊಂಡಿದ್ದಾರೆ. ಆದರೆ, ನಟಿಗೆ ಯಾವುದೇ ತೊಂದರೆ ಆಗಿಲ್ಲ. ‘ಎಲ್ಲರಿಗೂ ನಮಸ್ಕಾರ. ಎಲ್ಲಾ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡ ಹೊರತಾಗಿಯೂ ಕೋವಿಡ್ ಪಾಸಿಟಿವ್ ಆಗಿದೆ. ನಾನು ಗುಣಮುಖನಾಗುತ್ತಿದ್ದೇನೆ. ಶೀಘ್ರವೇ ಹಿಂದಿರುಗುತ್ತೇನೆ.
ಧನ್ಯವಾದಗಳು ಮತ್ತು ಶೀಘ್ರದಲ್ಲೇ ನಿಮ್ಮನ್ನು ಭೇಟಿ ಮಾಡುತ್ತೇನೆ’ ಎಂದು ಶ್ರುತಿ ಹಾಸನ್ ಬರೆದುಕೊಂಡಿದ್ದಾರೆ. ಈ ಪೋಸ್ಟ್ಗೆ ನೂರಾರು ಕಮೆಂಟ್ಗಳು ಬಂದಿವೆ. ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಅವರು ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತಿದ್ದಾರೆ. ‘ಶ್ರುತಿ ಅವರೇ ಬೇಗ ಗುಣಮುಖರಾಗಿ ಹಿಂದಿರುಗಿ’ ಎಂದು ಸಿದ್ದಾರ್ಥ್ ಮಲ್ಹೋತ್ರಾ ಬರೆದುಕೊಂಡಿದ್ದಾರೆ. ‘ಬೇಗ ಗುಣಮುಖರಾಗಿ. ನಿನಗೆ ನನ್ನ ಅಪ್ಪುಗೆ’ ಎಂದು ಗಾಯಕಿ ಸೋಫಿ ಚೌದರಿ ಪ್ರಾರ್ಥಿಸಿದ್ದಾರೆ.