Home District ಯತ್ನಾಳ್, ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ; ವಾಗ್ದಾಳಿ ನಡೆಸಿದ ರೇಣುಕಾಚಾರ್ಯ

ಯತ್ನಾಳ್, ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ; ವಾಗ್ದಾಳಿ ನಡೆಸಿದ ರೇಣುಕಾಚಾರ್ಯ

414
0

ವರದಿ: ಬಸವರಾಜ್

ದಾವಣಗೆರೆ; ಶಾಸಕ ಬಸನಗೌಡ ಯತ್ನಾಳ್ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ.ಯತ್ನಾಳ ದುರಂತ, ಅವರೊಬ್ಬ ದುರಹಂಕಾರಿ ನಾಯಕ.ಅವರನ್ನು ಪಕ್ಷದಿಂದ ಉಚ್ಛಾಟನೆಗೊಳಿಸಲು 65 ಶಾಸಕರು ಸಹಿ ಮಾಡಿದ್ದಾರೆ. ಅವರನ್ನು ಪಕ್ಷಕ್ಕೆ ವಾಪಸ್ ಕರೆತಂದ ತಪ್ಪಿಗೆ ಬಿಎಸ್ ಯಡಿಯೂರಪ್ಪನವರಿಗೆ ಇಂಥ ಬಹುದೊಡ್ಡ ಗಿಫ್ಟ್ ಕೊಡುತ್ತಿದ್ದಾರೆ. ಯತ್ನಾಳ್ ಮೇಲೆ ಹರಿಹಾಯ್ದ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ. ಪದೇಪದೇ ಸಿಎಂ ಸ್ಥಾನಕ್ಕೆ ಸವಾಲು ಹಾಕ್ತಾರೆ. ಪ್ರತಿ ತಿಂಗಳು ಒಂದೊಂದು ಡೇಟ್ ಕೊಡ್ತಾರೆ. ಅವರು ದಿನನಿತ್ಯ ಅರಿವೆ ಹಾವು ಬಿಡ್ತಾರೆ ಅಷ್ಟೇ. ಮುಖ್ಯಮಂತ್ರಿ‌ ಬದಲಾವಣೆ ಆಗುತ್ತೆ ಅಂತಾರೆ ಎಲ್ಲವೂ ಠುಸ್ ಆಗಲಿದೆ. ಮೊದಲು ನಿಮ್ಮ ನಡವಳಿಕೆ ಸರಿ ಮಾಡಿಕೊಳ್ಳಿ. ಯತ್ನಾಳ್ ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಯತ್ನಾಳ್‌ ಹೇಳಿಕೆಗಳನ್ನು ಲೇವಡಿ ಮಾಡಿದ ರೇಣುಕಾಚಾರ್ಯ. ವಿಜಯೇಂದ್ರ, ಡಿ.ಕೆ. ಶಿವಕುಮಾರ್ ಸೇರಿ ಹೊಸ ಪಕ್ಷ ಕಟ್ಟುತ್ತಾರೆ ಎಂಬ ವಿಚಾರ. ವಿಜಯೇಂದ್ರ ಪಕ್ಷದ ರಾಜ್ಯ ಉಪಾಧ್ಯಕ್ಷರು.ರಾಜ್ಯಾದ್ಯಂತ ಓಡಾಡಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ವಿನಾಕಾರಣ ಅವರ ಮೇಲೆ ಆರೋಪಿಸುವುದು ಸರಿಯಲ್ಲ.

ಈಶ್ವರಪ್ಪ, ಯಡಿಯೂರಪ್ಪ ಮಧ್ಯೆ ವೈಮನಸ್ಸು ವಿಚಾರ. ಪಕ್ಷದ ಆರಂಭ ಹಂತದಿಂದ ಯಡಿಯೂರಪ್ಪ,ಅನಂತಕುಮಾರ್ ಪಕ್ಷ ಕಟ್ಟಿ ಬೆಳೆಸಿದ್ದಾರೆ.ಈಶ್ವರಪ್ಪನವರು‌ ಹಿರಿಯರು, ಅನುಭವಿಗಳು.ನಾಲ್ಕು ಗೋಡೆ ಮಧ್ಯೆ ಮಾತನಾಡಬೇಕಾದ ವಿಷಯವನ್ನು‌ ರಾಜ್ಯಪಾಲರ ಬಳಿ ಒಯ್ದಿದ್ದು‌ ತಪ್ಪು.ಅನಗತ್ಯವಾಗಿ ಕಾಂಗ್ರೆಸ್‌ನವರ ಕೈಗೆ ಅಸ್ತ್ರ ಕೊಟ್ಟಂತಾಗಿದೆ.ಉಪಚುನಾವಣೆ ಹೊತ್ತಲ್ಲ ಇದು ಸರಿಯಲ್ಲ.ವಿಶೇಷ ಅನುದಾನ ನೀಡುವ ಪರಮಾಧಿಕಾರ ಸಿಎಂ ಅವರಿಗಿದೆ.ಅವರ ವಿವೇಚನೆಯಂತೆ ಬಳಸಿದ್ದಾರೆ.ಈ ವಿಷಯವನ್ನು ಚರ್ಚಿಸಿ ಪರಿಹರಿಸಿಕೊಳ್ಳಬಹುದು.ಈಶ್ವರ, ಯಡಿಯೂರಪ್ಪ ಮಧ್ಯೆ ಯಾವುದೇ ಮನಸ್ಥಾಪವಿಲ್ಲ.ವರಿಷ್ಠರಿಗೆ ಈ ಬಗ್ಗೆ ಮಾಹಿತಿ ನೀಡಿದ್ದೇವೆ , ಎಲ್ಲವೂ ಸರಿಯಾಗುತ್ತದೆ ಎಂದು ರೇಣುಕಾಚಾರ್ಯ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

Previous articleಕೊರೋನಾ 2ನೇ ಅಲೆ ಭೀತಿಗೆ ತತ್ತರಿಸಿದ ಸಾರಿಗೆ.. ಪ್ರಯಾಣಿಕರಿಲ್ಲದೆ ಬಸ್ ಗಳು ಬಣ..ಬಣ.. : ಪ್ರಜಾಟಿವಿ ವಿಶೇಷ ವರದಿ
Next articleರಮೇಶ್ ಜಾರಕೀಹೊಳಿ ಟ್ವೀಟ್ ವಾರ್!; ಟ್ವಿಟರ್ ಮುಖಾಂತರ ಜಾರಕಿಹೊಳಿ ಹೇಳಿದ್ದೇನು?

LEAVE A REPLY

Please enter your comment!
Please enter your name here