ರಾಜೀನಾಮೆ ಕೊಟ್ಟು ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ: ಬಾಬುರಾವ ಚಿಂಚನಸೂರ್

ಜಿಲ್ಲೆ

ಯಾದಗಿರಿ : ನಾನೇ ಗುರಮಿಠಕಲ್ ಕ್ಷೇತ್ರದ ಬಿಜೆಪಿ ಕ್ಯಾಂಡಿಡೇಟ್ ಎಂದು ವಿಧಾನಪರಿಷತ್ ಸದಸ್ಯ ಬಾಬುರಾವ್ ಚಿಂಚನಸೂರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.  ಬಾಬುರಾವ ಚಿಂಚನಸೂರ್ ಅವರು ಇತ್ತೀಚೆಗೆ ವಿಧಾನಪರಿಷತ್ ಸ್ಥಾನಕ್ಕೆ ಆಯ್ಕೆ ಆಗಿದ್ದರು.   ಆದ್ರೆ ಇದೀಗ ರಾಜೀನಾಮೆ ನೀಡಿ ಚುನಾವಣೆಗೆ ನಿಲ್ಲುವ ಮಾತುಗಳನ್ನಾಡಿದ್ದಾರೆ. ಯಾದಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಾಬುರಾವ ಚಿಂಚನಸೂರ್, ರಾಜೀನಾಮೆ ಕೊಟ್ಟು ವಿಧಾನಸಭೆ ಸ್ಪರ್ದೆ ಮಾಡುತ್ತೇನೆ.

ಗುರಮಿಠಕಲ್ ಮತಕ್ಷೇತ್ರದಿಂದ ನಾನೇ ಸ್ಪರ್ದೆ ಮಾಡುತ್ತೇನೆ. ಪಟ್ಟಭದ್ರ ಹಿತಾಸಕ್ತಿಗಳು ಬಾಬುರಾವ್ ಚುನಾವಣೆ ನಿಲ್ಲುವುದಿಲ್ಲ ಎಂದು ಸುಳ್ಳು ಅಪಪ್ರಚಾರ ಮಾಡುತ್ತಿದ್ದಾರೆ.ಕಲ್ಯಾಣ ಕರ್ನಾಟಕದ ಭಾಗದಲ್ಲಿ ಕೊಲಿ ಸಮಾಜಕ್ಕೆ ಸ್ಥಾನ ಮಾನ  ಬಿಜೆಪಿ ನೀಡಿದೆ.ಕಲ್ಯಾಣ ಕರ್ನಾಟಕ 46 % ಕೊಲಿ ಸಮಾಜವಿದೆ ಅದು ನನ್ನ ಜೊತೆಗಿದೆ.2023ರ ಚುನಾವಣೆಯಲ್ಲಿ 25  ಸೀಟುಗಳನ್ನು ಬಿಜೆಪಿಗೆ ತಂದು ಕೊಡುತ್ತೇನೆ ಎಂದು ಹೇಳಿದ್ದಾರೆ.

Leave a Reply

Your email address will not be published.