
ಪ್ರಧಾನಿಗೆ ಗಟ್ಸ್ ಇರುವುದಕ್ಕೆ ರಿಸ್ಕ್ ತೆಗೆದುಕೊಂಡು ದೇಶದ ಜನರನ್ನು ಉಕ್ರೇನ್ ನಿಂದ ರಕ್ಷಿಸುತ್ತಿದ್ದಾರೆ: ಸಂಸದ ಪ್ರತಾಪ್ ಸಿಂಹ
ಮೈಸೂರು: ರಕ್ಷಣಾ ಕಾರ್ಯ ಬಹಳ ಚುರುಕಾಗಿ ನಡೆಯುತ್ತಿದೆ. ಉಕ್ರೇನ್ ಗಡಿ ದಾಟಿದ ಕೂಡಲೇ ಅಲ್ಲಿಂದ ಸುರಕ್ಷಿತವಾಗಿ ಕರೆದು ಕೊಂಡು ಬರುತ್ತಿದ್ದೇವೆ. ಮೂರು ಬಾರಿ ಸಲಹೆ ಕೊಟ್ಟಿದ್ದೆವು ಉಕ್ರೇನ್ನಿಂದ ಹೊರಡಿ ಎಂದು. ಆದರೆ ಯಾರು ಕೇಳಲಿಲ್ಲ. ತೆರಿಗೆ ಹಣದಿಂದ ಅವರನ್ನು ವಿಮಾನದಲ್ಲಿ ಕರೆದುಕೊಂಡು ಬರಲಾಗಿದೆ. ಕೆಲವರು ಕೃತಜ್ಞತೆ ಇಲ್ಲದೆ ಮಾತಾಡಿದ್ದಾರೆ. ಅವರ ಮಟ್ಟಕ್ಕೆ ಇಳಿದು ನಾನು ಅವರನ್ನು ಟೀಕೆ ಮಾಡಲ್ಲ. ಮೋದಿ ಅವರಿಗೆ ಗಟ್ಸ್ ಇರುವುದಕ್ಕೆ ರಿಸ್ಕ್ ತೆಗೆದುಕೊಂಡು ದೇಶದ ಜನರನ್ನು ಉಕ್ರೇನ್ನಿಂದ ರಕ್ಷಿಸುತ್ತಿದ್ದಾರೆ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ.