ರಸ್ತೆ ಬದಿಯಲ್ಲಿ ಬಿದ್ದಿದ ಇಟ್ಟಿಗೆಯನ್ನು ಬದಿಗಿಟ್ಟ ಫುಡ್ ಡೆಲಿವರಿ ಬಾಯ್..! ದುಬೈ ರಾಜನಿಂದ ಸಿಕ್ತು ಮೆಚ್ಚುಗೆ

ಅಂತರಾಷ್ಟ್ರೀಯ

ದುಬೈಸಮಾಜಕ್ಕೆ ಒಳಿತಾಗುವ ಸಣ್ಣ ಕೆಲಸವು ಅತೀ ದೊಡ್ಡ ಪರಿಣಾಮ ಬೀರಲಿದೆ ಅನ್ನೋ ಮಾತಿದೆ. ಇದಕ್ಕೆ ದುಬೈನಲ್ಲಿನ ಫುಡ್ ಡೆಲಿವರಿ ಬಾಯ್ ಉತ್ತಮ ಉದಾಹರಣೆ. ತಾನು ಆಹಾರ ವಿತರಣೆ ಮಾಡುವ ದಾರಿಯಲ್ಲಿ ಎರಡು ಇಟ್ಟಿಗೆ ಬಿದ್ದಿರುವುದನ್ನು ಗಮಮಿಸಿದ ಫುಡ್ ಡೆಲಿವರಿ ಬಾಯ್, ಅದನ್ನು ತೆಗೆದು ರಸ್ತೆ ಬದಿಗೆ ಹಾಕಿದ್ದಾನೆ. ಈ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋ ಗಮನಿಸಿದ ದುಬೈ ರಾಜಕುಮಾರ ಈ ಫುಡ್ ಡೆಲಿವರಿ ಬಾಯ್ ಭೇಟಿಯಾಗುವುದಾಗಿ ಹೇಳಿದ್ದದಾರೆ.

ದುಬೈನ ಅತ್ಯಂತ ಬ್ಯುಸಿ ರಸ್ತೆ ಅದು. ಈ ರಸ್ತೆಯ ಮಧ್ಯ ಭಾಗದಲ್ಲಿ ಎರಡು ಇಟ್ಟಿಗೆಗಳು ಬಿದ್ದಿತ್ತು. ಎಲ್ಲಾ ವಾಹನಗಳು ವೇಗವಾಗಿ ಚಲಿಸುತ್ತಿರುವ ರಸ್ತೆಯಾದ ಕಾರಣ ಇಟ್ಟಿಗೆಯಿಂದ ಅಪಘಾತವಾಗುವ ಸಾಧ್ಯತೆ ಹೆಚ್ಚು. ಸಿಗ್ನಲ್‌ನಲ್ಲಿ ನಿಂತಿದ್ದ ಫುಡ್ ಡೆಲಿವರಿ ಬಾಯ್ ಅಬ್ದುಲ್ ಗಫೂರ್ ತನ್ನ ಬೈಕ್ ನಿಲ್ಲಿಸಿ ಓಡೋಡಿ ತೆರಳಿದ್ದಾನೆ. ಬಳಿಕ ಇಟ್ಟಿಗೆಗಳನ್ನು ತೆಗೆದು ರಸ್ತೆ ಬದಿಗೆ ಹಾಕಿದ್ದಾನೆ. ಈ ಘಟನೆಯನ್ನು ಹಿಂಭಾಗದಲ್ಲಿದ್ದ ಕಾರು ಚಾಲಕ ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ.

ಸಾಮಾಜಿಕ ಕಳಕಳಿಯ ಈ ವಿಡಿಯೋ ವೈರಲ್ ಆಗಿತ್ತು. ಇಷ್ಟೇ ಅಲ್ಲ ದುಬೈ ರಾಜಕುಮಾರ ಹಮಾದನ್ ಬಿನ್ ಮೊಹಮ್ಮದ್ ಕಣ್ಣಿಗೂ ಬಿದ್ದಿದೆ. ತಕ್ಷಣವೇ ಈ ವಿಡಿಯೋವನ್ನು ಟ್ವಿಟರ್ ಮೂಲಕ ಹಂಚಿಕೊಂಡ ಹಮಾದ್ ಬಿನ್ ಮೊಹಮ್ಮದ್, ದುಬೈನಲ್ಲಿ ನಡೆದ ಒಂದು ಒಳ್ಳೆ ಕಾರ್ಯವನ್ನು ಪ್ರಶಂಸಿಸಬೇಕಾದಿದೆ. ಯಾರಾದರೂ ಈ ವ್ಯಕ್ತಿಯನ್ನು ಗುರುತಿಸಿ ಹೇಳಬಹುದೇ ಎಂದು ರಾಜಕುಮಾರ ಟ್ವೀಟ್ ಮಾಡಿದ್ದರು. ಖುದ್ದು ರಾಜಕುಮಾರ ಟ್ವೀಟ್ ಮಾಡಿದ ಬೆನ್ನಲ್ಲೇ ಈ ಫುಡ್ ಡೆಲಿವರಿ ಬಾಯ್‌ಗೆ ಹುಡುಕಾಟ ಆರಂಭಗೊಂಡಿತ್ತು. ಅಷ್ಟೇ ವೇಗದಲ್ಲಿ ಈ ಫುಡ್ ಡೆಲಿವರಿ ಬಾಯ್ ಪತ್ತೆ ಹಚ್ಚಿ ದುಬೈ ರಾಜಕುಮಾರನಿಗ ಮಾಹಿತಿ ನೀಡಲಾಯಿತು.

 

ಮರುಕ್ಷಣದಲ್ಲೇ ಫುಡ್ ಡೆಲಿವರಿ ಬಾಯ್ ಅಬ್ದುಲ್ ಗಫೂರ್‌ಗೆ ಕರೆ ಧನ್ಯವಾದ ಹೇಳಿದ ರಾಜಕುಮಾರ್ ಶೀಘ್ರದಲ್ಲೇ ಭೇಟಿಯಾಗು ವುದಾಗಿ ಹೇಳಿದ್ದಾರೆ. ಟ್ವಿಟರ್ ಮೂಲಕ ಈ ಮಾಹಿತಿ ಹಂಚಿಕೊಂಡ ದುಬೈ ರಾಜಕುಮಾರ, ಒಳ್ಳೆಯ ವ್ಯಕ್ತಿಯನ್ನು ಪತ್ತೆ ಹಚ್ಚಲಾಗಿದೆ. ಧನ್ಯವಾದ ಅಬ್ದುಲ್ ಗಫೂರ್. ಶೀಘ್ರದಲ್ಲೇ ಭೇಟಿಯಾಗುತ್ತೇನೆ ಎಂದು ದುಬೈ ರಾಜಕುಮಾರ ಹೇಳಿದ್ದಾರೆ. ದುಬೈ ರಾಜಕುಮಾರ್ ಯಾರನ್ನೇ ಭೇಟಿಯಾದರೂ ಬರಿಗೈಯಲ್ಲಿ ಆಗಿಲ್ಲ. ಅವರಿಗೊಂದು ಸ್ಮರಣೀಯ ಹಾಗೂ ದುಬಾರಿ ಗಿಫ್ಟ್ ನೀಡಿದ್ದಾರೆ. ಹೀಗಾಗಿ ಇದೀಗ ಅಬ್ದುಲ್ ಗಫೂರ್‌ಗೂ ಭರ್ಜರಿ ಗಿಫ್ಟ್ ಸಿಗುವ ಸಾಧ್ಯತೆ ದಟ್ಟವಾಗಿದೆ.

Leave a Reply

Your email address will not be published.