Home District ಪಿಪಿಇ ಕಿಟ್ ಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕೆಂಬ ಕನಿಷ್ಟ ಜ್ಞಾನವೂ ಪಾಲಿಕೆ ಅಧಿಕಾರಿಗಳಿಗಿಲ್ಲವೇ ?

ಪಿಪಿಇ ಕಿಟ್ ಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕೆಂಬ ಕನಿಷ್ಟ ಜ್ಞಾನವೂ ಪಾಲಿಕೆ ಅಧಿಕಾರಿಗಳಿಗಿಲ್ಲವೇ ?

184
0
SHARE

ಶಿವಮೊಗ್ಗ. ಜಿಲ್ಲೆಯ ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತೊಂದು ಯಡವಟ್ಟನ್ನ ಮಾಡಿದ್ದಾರೆ. ವಿಶ್ವ ಸಂಸ್ಥೆಯ ಕೋವಿಡ್ ನಿಯಮ ಗಾಳಿಗೆ ತೂರಿ ಕೊರೊನಾ ಸೋಂಕಿನಿಂದ ಮೃತ ಪಟ್ಟ ವೃದ್ಧನ ಅಂತ್ಯಸಂಸ್ಕಾರ ಮಾಡಿದ್ದಾರೆ..ನಿನ್ನೆ ರಾತ್ರಿ ರೋಟರಿ ಶವಾಗಾರದಲ್ಲಿ ಕೊರೊನಾದಿಂದ ಮೃತಪಟ್ಟ ವೃದ್ಧನ ಶವವನ್ನ ಅಧಿಕಾರಿಗಳು ಅರ್ಧಂಬರ್ಧ ಸುಟ್ಟು ಬಂದಿದ್ದಾರೆ.

ಜನ ಗಲಾಟೆ ಆರಂಭಿಸಿದ ಮೇಲೆ ಮತ್ತೆ ರಾತ್ರಿ ಎರಡು ಗಂಟೆಗೆ ಹೋಗಿ ಶವವನ್ನು ಸಂಪೂರ್ಣವಾಗಿ ಸುಟ್ಟು ಬಂದಿದ್ದಾರೆ.ಈ ವೇಳೆ ಧರಿಸಿದ್ದ ಪಿಪಿಇ ಕಿಟ್ ಗಳನ್ನು ರೋಟರಿ ಚಿತಾಗಾರದ ಎದುರಿನ ರಸ್ತೆ ಪಕ್ಕದಲ್ಲೇ‌ ಅಧಿಕಾರಿಗಳು ಬಿಸಾಡಿದ್ದಾರೆ.ಪಿಪಿಇ ಕಿಟ್ ಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕೆಂಬ ಕನಿಷ್ಟ ಜ್ಞಾನವೂ ಮಹಾನಗರ ಪಾಲಿಕೆ ಅಧಿಕಾರಿಗಳಿಗಿಲ್ಲವೇ? ಎಂದು ಸ್ಥಳಿಯರು ಪ್ರಶ್ನಿಸಿದ್ದು ಅಧಿಕಾರಿಗಳ ನಡೆಗೆ ಜನ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಮಹಾನಗರ ಪಾಲಿಕೆ ವಿಪಕ್ಷ‌ ನಾಯಕ ಎಚ್.ಸಿ.ಯೋಗೀಶ್ ನೇತೃತ್ವದಲ್ಲಿ‌ ರಾಜೀವ್ ಗಾಂಧಿ ಬಡಾವಣೆ ಜನರು ಬಿ.ಎಚ್.ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here