ರಸ್ತೆ ಬದಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ: ಕಾರ್ಮಿಕರಿಬ್ಬರು ಸ್ಥಳದಲ್ಲೇ ಸಾವು

ಜಿಲ್ಲೆ

ಶಿವಮೊಗ್ಗ :ಶಿವಮೊಗ್ಗ ಹೊರವಲಯದ ಅಬ್ಬಲಗೆರೆ ಬಳಿ ಭೀಕರ ಅಪಘಾತ ಸಂಭವಿಸಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ನ್ಯಾಮತಿ ಮೂಲದ ರಾಮ್ ಕುಮಾರ್22 ಹಾಗು ಮಲ್ಲಿಕಾರ್ಜುನ30 ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಐಪಿಸಿ ಕಂಪನಿಯಲ್ಲಿ ಕಾರ್ಮಿಕ ರಾಗಿರುವ ಇವರಿಬ್ಬರು ರಾತ್ರಿ ಪಾಳಿ ಕೆಲಸ ಮಾಡಿ, ಮುಂಜಾನೆ ಶಿಫ್ಟ್ ಮುಗಿಸಿಕೊಂಡು ಮನೆಗೆ ವಾಪಸ್ಸಾಗಲು ಅಣಿಯಾಗಿದ್ದಾರೆ. ಬೈಕ್ ಚಲಾಯಿಸುತ್ತಿದ್ಸವರು ಮಂಪರಿನಲ್ಲಿದ್ದಾರೆ.

ಇದೇ ಸಂದರ್ಭದಲ್ಲಿ ಅಬ್ವಲಗೆರೆ ಬಳಿ  ಡಿಸೇಲ್ ಖಾಲಿಯಾಗಿ ಲಾರಿಯೊಂದು ರಸ್ತೆ ಬದಿ ನಿಂತಿತ್ತು. ಬೈಕ್ ನಲ್ಲಿ ಬಂದವರಿಗೆ ತಕ್ಷಣಕ್ಕೆ ಎದುರಾದ ವಾಹನ ತಪ್ಪಿಸಲು ಹೋಗಿ ನೇರವಾಗಿ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಇಬ್ಬರು ಸ್ಥಳದಲ್ಲಿ ಸಾವನ್ಬಪ್ಪಿದ್ದಾರೆ. ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ

Leave a Reply

Your email address will not be published.