Home Crime ಖತರ್ನಾಕ್ ಮನೆಗಳ್ಳನ ಬಂಧನ; ಆರೋಪಿಯಿಂದ 25 ಲಕ್ಷ ಮೌಲ್ಯದ ಚಿನ್ನಾಭರಣಗಳು ವಶ

ಖತರ್ನಾಕ್ ಮನೆಗಳ್ಳನ ಬಂಧನ; ಆರೋಪಿಯಿಂದ 25 ಲಕ್ಷ ಮೌಲ್ಯದ ಚಿನ್ನಾಭರಣಗಳು ವಶ

129
0
SHARE

ರಾಮನಗರ: ಕುಖ್ಯಾತ ಮನೆಗಳ್ಳನನ್ನ ಬಂಧಿಸಿ, ಬಂಧಿತನಿಂದ 25 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನ ವಶಪಡಿಸಿಕೊಳ್ಳುವಲ್ಲಿ ರಾಮನಗರ ಜಿಲ್ಲೆ ಮಾಗಡಿ ಪೊಲೀಸ್ರು ಯಶಸ್ವಿಯಾಗಿದ್ದಾರೆ. ಉದಯ್‍ಕುಮಾರ್ ಅಲಿಯಾಸ್ ಅಶೋಕ ಬಂಧಿತ ಆರೋಪಿಯಾಗಿದ್ದು,  ಈತ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದವನು. ಈ ಆರೋಪಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸುಮಾರು 18 ಮನೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಬಂಧಿತನಿಂದ 560 ಗ್ರಾಂ ಚಿನ್ನಾಭರಣಗಳು, 3 ಕೆ.ಜಿ ಬೆಳ್ಳಿ ಸಾಮಾಗ್ರಿಗಳು, ಕೃತ್ಯಕ್ಕೆ ಬಳಸುತ್ತಿದ್ದ ಒಂದು ಕಾರು, ಎರಡು ದ್ವಿಚಕ್ರ ವಾಹನಗಳನ್ನ ವಶಪಡಸಿಕೊಳ್ಳಲಾಗಿದೆ. ಬಂಧಿತ ಆರೋಪಿ ಮಾರ್ಚ್ ತಿಂಗಳಲ್ಲಿ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಹರ್ತಿ ಗ್ರಾಮದ ರೇಣುಕಮ್ಮ ಅವರ ಮನೆ ಬೀಗ ಒಡೆದು 1,20,000 ಬೆಲೆ ಬಾಳುವ ಚಿನ್ನಾಭರಣಗಳನ್ನ ಕಳವು ಮಾಡಿ ಪರಾರಿಯಾಗಿದ್ದ. ಈ ಕಾರಣ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಖೆಗೆ ಇಳಿದ ಸಿಪಿಐ ಮಂಜುನಾಥ್ ಹಾಗೂ ಅವರ ತಂಡ ಆರೋಪಿ ಉದಯ್‍ಕುಮಾರನ್ನ ಬಂಧಿಸಿ ತನಿಕೆ ನಡೆಸಿದಾಗ ಇನ್ನಷ್ಟು ಕಳ್ಳತನದ ಪ್ರಕರಣಗಳು ಹೊರ ಬಂದಿವೆ. ಮಾಗಡಿ ಸರಹದ್ದಿನಲ್ಲಿ 2 , ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ 15 ಮನೆ ಕಳ್ಳತನದ ಪ್ರಕರಣಗಳು ಹಾಗೂ ತುಮಕೂರು ಜಿಲ್ಲೆಯ 9 ಪ್ರಕರಣಗಳು ಬೆಳಕಿಗೆ ಬಂದಿವೆ. ಬಂಧಿತ ಆರೋಪಿಯು ಈ ಹಿಂದೆ ತುಮಕೂರು ಜಿಲ್ಲೆಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣದಲ್ಲಿ ಬಂಧನವಾಗಿ ಕಾರಗೃಹದಲ್ಲಿದ್ದು 2019ನೇ ಇಸವಿಯಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದು ಹೊರ ಬಂದಿದ್ದ. ಜೈಲಿನಿಂದ ಹೊರ ಬಂದ ಮೇಲು ಈತ ತನ್ನ ಹಳೇ ಚಾಳಿಯನ್ನ ಬಿಟ್ಟಿರಲಿಲ್ಲ.

ಈ ಆರೋಪಿ ಹಗಲು ಸಮಯದಲ್ಲೆ ಬೀಗ ಹಾಕಿದ ಮನೆಗಳನ್ನ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ. ಕಳ್ಳತನದಿಂದ ಬಂದ ಹಣದಲ್ಲಿ ಐಷರಾಮಿ ಜೀವನ ನಡೆಸುತ್ತಿದ್ದ. ಇಂತಹ ಖತನಾರ್ಕ್ ಮನೆಗಳ್ಳನನ್ನ ಬಂಧಿಸಿದ ಮಾಗಡಿ ಪೊಲೀಸ್ರಿಗೆ ಎಸ್‍ಪಿ ಅನೂಪ್ ಎ.ಶೆಟ್ಟಿ ಅಭಿನಂದನೆ ಸಲ್ಲಿಸಿದರು.

LEAVE A REPLY

Please enter your comment!
Please enter your name here