ಬಹು ಅಂಗಾಂಗ ವೈಫಲ್ಯದಿಂದ ಹಲವು ದಿನಗಳಿಂದ ಬಳಲುತ್ತಿದ್ದ ಕೊರಂಗು ಕೃಷ್ಣ ಇಂದು ಬೆಳಗ್ಗೆ ಚಿತ್ತೂರಿನ ನಿವಾಸದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಬೆಂಗಳೂರಿನ ಕೋದಂಡರಾಮಪುರದ ಮೂಲದವನಾದ ಕೊರಂಗು ಬಹಳ ಹಲವು ಕ್ರಿಮಿನಲ್ ಕೇಸ್ ಗಳಲ್ಲಿ ಭಾಗಿಯಾಗಿದ್ದ. ಎಂಬತ್ತರ ದಶಕದಲ್ಲಿ ಬೆಂಗಳೂರನ್ನು ನಡುಗಿಸಿದ ಕುಖ್ಯಾತ ರೌಡಿ ಬಲರಾಮನನ್ನು ಬೆಂಗಳೂರಿನ ಸೆಂಟ್ರಲ್ ಜೈಲಿನ ಒಳಗಡೆಯೇ ಕೊಂದು ಅಂಡರ್ ವರ್ಲ್ಡ್ ಲ್ಲಿ ಕುಖ್ಯಾತಿಯನ್ನು ಪಡೆದಿದ್ದ ಕೊರಂಗು ಕೃಷ್ಣ
ಕೊಲೆ ಕೊಲೆ ಪ್ರಯತ್ನ ಸುಲಿಗೆ ಇನ್ನಿತರ ಇಪ್ಪತ್ತಕ್ಕೂ ಹೆಚ್ಚು ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಕೊರಂಗು ಕೃಷ್ಣ ಕೃಷ್ಣನ ಮೇಲೆ ಶಿವಮೊಗ್ಗ ಮೂಲದ ಮತ್ತೊಬ್ಬ ರೌಡಿ ಹೆಬ್ಬೆಟ್ ಮಂಜ ಚಿತ್ರದುರ್ಗದ ಹಿರಿಯೂರು ಬಳಿ ಬೆಂಗಳೂರು ನಿಂದ ಕೋರ್ಟ್ ಮುಗಿಸಿ ಚಿತ್ರದುರ್ಗದ ಜೈಲಿಗೆ ಹೋಗುವ ಮಾರ್ಗ ಮಧ್ಯೆ ಡಾಬಾವೊಂದರ ಬಳಿ ದಾಳಿ ಮಾಡಿ ಕೊರಂಗು ಕೃಷ್ಣನ ಕೈ ಕತ್ತರಿಸಿ ಹಾಕಿದ್ದ .ಹೆಬ್ಬೆಟ್ ಮಂಜ ದಾಳಿ ಮಾಡಿದ ನಂತರ ಸಂಪೂರ್ಣವಾಗಿ ಬೆಂಗಳೂರನ್ನು ತೊರೆದ ಕೊರಂಗು ಕೃಷ್ಣ ತನ್ನ ಸ್ವಂತ ಊರಾದ ಆಂಧ್ರದ ಚಿತ್ತೂರಿನಲ್ಲಿ ನೆಲೆಗೊಂಡಿದ್ದ .
ರಾಜರಾಜೇಶ್ವರಿ ನಗರದ ಮಾಜಿ ಶಾಸಕ ಹಾಗೂ ನಿರ್ಮಾಪಕ ಮುನಿರತ್ನಂ ನಾಯ್ಡು ಅವರ ಸ್ವಂತ ಸಹೋದರನಾದ ಕೊರಂಗು ಕೃಷ್ಣ ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಯಾವುದೇ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಿರಲಿಲ್ಲ ವಯೊ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕೊರಂಗು ಕಳೆದ ತಿಂಗಳು ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೂಡ ಪಡೆದಿದ್ದ. ಇಂದು ಬೆಳಗ್ಗೆ ಸಾವನ್ನಪ್ಪಿದ್ದಾನೆ.