Russia Ukraine Crisis: ಉಕ್ರೇನ್‌ ನಲ್ಲಿದ್ದ ಮತ್ತೊರ್ವ ಭಾರತೀಯ ವಿದ್ಯಾರ್ಥಿ ದುರ್ಮರಣ

ಅಂತರಾಷ್ಟ್ರೀಯ

ಕೀವ್: ಯುದ್ಧಪೀಡಿತ ಉಕ್ರೇನ್‌ನಲ್ಲಿ ಭಾರತದ ಮತ್ತೊಬ್ಬ ವಿದ್ಯಾರ್ಥಿ ಮೃತಪಟ್ಟಿದ್ದಾರೆ. ಮೃತ ವಿದ್ಯಾರ್ಥಿ ಪಂಜಾಬ್‌ ಮೂಲದವನು ಎಂದು ಗುರುತಿಸಲಾಗಿದೆ. ಪಂಜಾಬ್‌ನ ಬರ್ನಾಲಾ ಮೂಲದ ಚಂದನ್‌ ಜಿಂದಾಲ್‌ (22), ಉಕ್ರೇನ್‌ನಲ್ಲಿ ಮಿದುಳು ಪಾರ್ಶ್ವವಾಯು ವಿನಿಂದ (ಬ್ರೈನ್‌ ಸ್ಟ್ರೋಕ್‌) ಮೃತಪಟ್ಟಿದ್ದಾನೆ.  ಚಂದನ್‌ ಜಿಂದಲ್‌, ವಿನ್ನಿಟ್ಸಿಯಾ ಉಕ್ರೇನ್‌ನಲ್ಲಿರುವ ಮೆಮೊರಿಯಲ್‌ ಮೆಡಿಕಲ್‌ ಯೂನಿವರ್ಸಿಟಿಯ ವಿನ್ನಿಟ್ಸಿಯಾ ನ್ಯಾಷನಲ್ ಪೈರೋಗೋವ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ.

ಮಿದುಳು ಪಾರ್ಶ್ವವಾಯುವಿಗೆ ಒಳಗಾದ ನಂತರ ಜಿಂದಾಲ್ ಅವರನ್ನು ವಿನ್ನಿಟ್ಸಿಯಾ ಆಸ್ಪತ್ರೆಗೆ ತುರ್ತು ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಹಿಂದಿನ ದಿನ ಅವರು ಕೊನೆಯುಸಿರೆಳೆದಿದ್ದಾರೆ. ಪುತ್ರನ ಪಾರ್ಥಿವ ಶರೀರವನ್ನು ವಾಪಸ್‌ ತರಲು ಕ್ರಮವಹಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮೃತನ ತಂದೆ ಪತ್ರ ಬರೆದಿದ್ದಾರೆ. ಈಚೆಗಷ್ಟೇ ಉಕ್ರೇನ್‌ನಲ್ಲಿ ರಷ್ಯಾ ನಡೆಸಿದ ಶೆಲ್‌ ದಾಳಿಗೆ ಕರ್ನಾಟಕದ ವೈದ್ಯಕೀಯ ವಿದ್ಯಾರ್ಥಿ ಬಲಿಯಾಗಿದ್ದಾನೆ. ಆತನ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ಕೇಂದ್ರ ಸರ್ಕಾರ ಕ್ರಮಕೈಗೊಂಡಿದೆ.

Leave a Reply

Your email address will not be published.