
Russia Ukraine War..ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಯು.ಟಿ. ಖಾದರ್
ಮಂಗಳೂರು: ಇದು ರಾತ್ರಿ ಹಗಲಿನ ನಡುವೆ ನಿರ್ಧಾರ ಆಗಿ ನಡೆದ ಯುದ್ಧವಲ್ಲ. ಒಂದು ತಿಂಗಳ ಮೊದಲೇ ಯುದ್ಧ ಆಗುತ್ತೆ ಎಂದು ಗೊತ್ತಿತ್ತು. ಎಂದು ಮಂಗಳೂರಿನಲ್ಲಿ ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಯು.ಟಿ.ಖಾದರ್ ವಾಗ್ದಾಳಿ ಮಾಡಿದ್ದಾರೆ.. ಮೊದಲೇ ಮಕ್ಕಳನ್ನು ರಕ್ಷಣೆ ಮಾಡಲು ಏಕೆ ಕ್ರಮ ಕೈಗೊಂಡಿಲ್ಲ ಎಂದು ಉಕ್ರೇನ್ನಲ್ಲಿ ಭಾರತೀಯ ವಿದ್ಯಾರ್ಥಿಗಳು ಸಿಲುಕಿರುವ ವಿಚಾರವಾಗಿ ವಿದ್ಯಾರ್ಥಿ ಗಳು ಕಷ್ಟಪಟ್ಟು ಬಾರ್ಡರ್ಗೆ ಬಂದು ಸೇರಿದ್ದಾರೆ. ಕಷ್ಟಪಟ್ಟು ಜೀವದ ಹಂಗು ತೊರೆದು ಗಡಿಗೆ ಬಂದಿದ್ದಾರೆ. ನಾವೇ ಕರೆತಂದೆವು ಎಂದು ಸರ್ಕಾರ ಪೋಸ್ ಕೊಡುತ್ತಿದೆ. ರಾಜತಾಂತ್ರಿಕತೆ, ವಿದೇಶಾಂಗ ವ್ಯವಹಾರದಲ್ಲಿ ಕೇಂದ್ರ ವಿಫಲವಾಗಿದೆ. ಆಚಾರದ ಸರ್ಕಾರವಲ್ಲ, ಇದು ಕೇವಲ ಪ್ರಚಾರದ ಸರ್ಕಾರ. ಮೋದಿ ಒಂದು ಫೋನ್ ಮಾಡಿದ್ರೆ ಯುದ್ಧ ನಿಲ್ಲುತ್ತದೆಯಂತೆ, ಆದ್ರೆ ಈಗ ಯಾಕೆ ಯುದ್ಧ ನಿಂತಿಲ್ಲ ಎಂದು ಖಾದರ್ ವ್ಯಂಗ್ಯವಾಡಿದ್ದಾರೆ.