
Russia Ukraine War..ರಷ್ಯಾದಿಂದ ಕದನ ವಿರಾಮ ಉಲ್ಲಂಘನೆ; ಮರಿಪೊಲ್ ನಲ್ಲಿ ಮತ್ತೆ ಗುಂಡಿನ ದಾಳಿ
ಉಕ್ರೇನ್ :ಉಕ್ರೇನ್ ಮೇಲೆ ನಡೆಸುತ್ತಿದ್ದ ಯುದ್ಧಕ್ಕೆ ಇಂದು ತಾತ್ಕಾಲಿಕ ಕದನ ವಿರಾಮಕ್ಕೆ ರಷ್ಯಾ ಒಪ್ಪಿಗೆ ನೀಡಿದ ಕೆಲವೇ ಗಂಟೆಗಳಲ್ಲಿ ರಷ್ಯಾದ ಪಡೆಗಳು ಮತ್ತೆ ಉಕ್ರೇನ್ನ ಹಲವು ನಗರಗಳಲ್ಲಿ ಶೆಲ್ ದಾಳಿ ನಡೆಸತೊಡಗಿವೆ. ಇದರಿಂದಾಗಿ ಯುದ್ಧದಿಂದ ತೀವ್ರ ಹಾನಿ ಗೊಳಗಾಗಿದ್ದ ಉಕ್ರೇನ್ನ ಬಂದರು ನಗರವಾದ ಮರಿಪೋಲ್ನಿಂದ ನಾಗರಿಕರ ಸ್ಥಳಾಂತರಿಸುವಿಕೆಯನ್ನು ಮತ್ತೆ ಸ್ಥಗಿತಗೊಳಿ ಸಲಾಯಿತು. ರಷ್ಯಾದ ಸೇನಾಪಡೆ ಕದನ ವಿರಾಮವನ್ನು ಘೋಷಿಸಿದ್ದರೂ ಮರಿಪೋಲ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶದ ಮೇಲೆ ಗುಂಡಿನ ದಾಳಿಯನ್ನು ಮುಂದುವರೆಸಿದೆ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಕಚೇರಿಯ ಉಪ ಮುಖ್ಯಸ್ಥ ಕೈರಿಲೊ ಟಿಮೊಶೆಂಕೊ ಹೇಳಿದ್ದಾರೆ.