ಯುದ್ಧ ಘೋಷಣೆ ಬೆನ್ನಲ್ಲೇ ಉಕ್ರೇನ್ ಮೇಲೆ ಕ್ಷಿಪಣಿ ದಾಳಿ ಆರಂಭಿಸಿದ ರಷ್ಯಾ

ಅಂತರಾಷ್ಟ್ರೀಯ

ಉಕ್ರೇನ್ ಮತ್ತು ರಷ್ಯಾ ನಡುವೆ ಉದ್ವಿಗ್ನತೆ ತಾರಕಕ್ಕೇರಿರುವ ಸಂದರ್ಭದಲ್ಲೇ ಇಸ್ರೇಲ್ ಸಿರಿಯಾದ ಮೇಲೆ ಕ್ಷಿಪಣಿ ದಾಳಿ ಮಾಡಿದೆ. ಮಾಧ್ಯಮ ವರದಿಗಳ ಪ್ರಕಾರ, ಈ ದಾಳಿಯಲ್ಲಿ ಹಲವು ಸೇನಾ ನೆಲೆಗಳು ಧ್ವಂಸಗೊಂಡಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ. ಜಾಗತಿಕ ರಾಷ್ಟ್ರಗಳು ಬೇರೆಡೆ ಗಮನ ಕೇಂದ್ರಿಕರಿಸಿದಾಗ ಇಸ್ರೇಲ್ ಇಂತಹ ದುಸ್ಸಾಹಸಕ್ಕೆ ಕೈ ಹಾಕುವ ತಂತ್ರವನ್ನು ಅನುಸರಿಸಿಕೊಂಡು ಬಂದಿದೆ. ಸದ್ಯ ಇಸ್ರೇಲ್ ಮಾಡಿರುವ ದಾಳಿಯಿಂದಾಗಿ ಸಿರಿಯಾದಲ್ಲಿ ಎಷ್ಟು ಹಾನಿಯಾಗಿದೆ ಎಂಬ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಕ್ಷಿಪಣಿಗಳನ್ನು ಇಸ್ರೇಲ್ ಆಕ್ರಮಿತ ಸಿರಿಯಾ ಪ್ರದೇಶವಾದ ಗೋಲನ್ ಹೈಟ್ಸ್‌ನಿಂದ ಹಾರಿಸಲಾಗಿದೆ ಎಂದು ಹೆಸರು ಹೇಳಲು ಇಚ್ಚಿಸದ ಸಿರಿಯಾದ ಮಿಲಿಟರಿ ಅಧಿಕಾರಿಯನ್ನು ಉಲ್ಲೇಖಿಸಿ ಸ್ಟೇಟ್ ಟಿವಿ ವರದಿ ಮಾಡಿದೆ. ಅಲ್ಲದೆ ಸಮೀಪದ ಕುನೇತ್ರಾ ಪಟ್ಟಣದ ಸುತ್ತಮು ತ್ತಲೂ ದಾಳಿಗಳು ನಡೆದಿವೆ. ಮಧ್ಯರಾತ್ರಿಯ ವೇಳೆ ದಿಢೀರ್ ದಾಳಿ ಬಳಿಕ ಸೇನಾ ನೆಲೆಗಳು ಧ್ವಂಸಗೊಂಡಿವೆ. ಆದರೆ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಸ್ಟೇಟ್ ಟಿವಿ ಹೇಳಿದೆ.

Leave a Reply

Your email address will not be published.