
ರಷ್ಯಾ ಯುದ್ಧ ಘೋಷಣೆ: ಉಕ್ರೇನ್ ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ವಾಪಾಸ್..!
ಉಕ್ರೇನ್ ನಲ್ಲಿರುವ ಭಾರತೀಯರನ್ನು ಕರೆತರಲು ಹೊರಟಿದ್ದ ಏರ್ ಇಂಡಿಯಾ ವಿಮಾನ ಉಕ್ರೇನ್ ವಾಯುಪ್ರದೇಶ ಮುಚ್ಚಿದ ಹಿನ್ನೆಲೆ ಯಲ್ಲಿ ದೆಹಲಿಗೆ ವಾಪಸಾಗಿದೆ. ಇದರಿಂದಾಗಿ ಸ್ವದೇಶಕ್ಕೆ ವಾಪಸಾಗಲು ಕಾಯುತ್ತಿದ್ದ ಸಾವಿರಾರು ಭಾರತೀಯರು ಉಕ್ರೇನ್ ನಲ್ಲಿಯೇ ಉಳಿಯುವಂತಾಗಿದೆ. ರಷ್ಯಾ ಉಕ್ರೇನ್ ಮೇಲೆ ಯುದ್ಧ ಆರಂಭಿಸಿದ ಹಿನ್ನೆಲೆಯಲ್ಲಿ ನಾಗರಿಕ ವಿಮಾನಯಾನಗಳಿಗೆ ಹಾನಿಯಾಗುವ ಸಾಧ್ಯತೆಗಳಿಂದಾಗಿ ತನ್ನ ವಾಯುಪ್ರದೇಶವನ್ನು ಮುಚ್ಚಿರುವುದಾಗಿ ಉಕ್ರೇನ್ ಹೇಳಿದೆ. .
ಉಕ್ರೇನ್ ಕಡೆ ಹೊರಟಿದ್ದ ಎಲ್ಲಾ ವಿಮಾನಗಳ ಪೈಲಟ್ ಗಳಿಗೆ ಈ ಮಾಹಿತಿ ರವಾನೆಯಾಗಿದ್ದು, ಉಕ್ರೇನ್ ನ ಕೀವ್ ನಲ್ಲಿನ ಭಾ ರತೀಯರನ್ನು ಕರೆತರಲು ಹೊರಟಿದ್ದ ಏರ್ ಇಂಡಿಯಾ ವಿಮಾನವೂ ವಾಪಸಾಗಿದೆ. ಸದ್ಯ ಟಾಟಾ ತೆಕ್ಕೆಯಲ್ಲಿರುವ ಏರ್ ಇಂಡಿಯಾ ಕಳೆದ ಒಂದು ವಾರದಲ್ಲಿ ಭಾರತೀಯರನ್ನು ಕರೆತರಲು ಉಕ್ರೇನ್ಗೆ ಕೆಲವು ಸುತ್ತಿನ ಹಾರಾಟ ನಡೆಸಿ ಹಲವು ಭಾರತೀಯರನ್ನು ಕರೆತಂದಿದೆ.