Home Latest ಸಚಿನ್ ರಿಂದಾಗಿ ನಾಯಕತ್ವದ ಪಟ್ಟವನ್ನು ತಪ್ಪಿಸಿಕೊಂಡ ಅಜಯ್ ಜಡೇಜಾ: ಅದಕ್ಕೆ ಕಾರಣರಾದವರು ಇವರೆ.

ಸಚಿನ್ ರಿಂದಾಗಿ ನಾಯಕತ್ವದ ಪಟ್ಟವನ್ನು ತಪ್ಪಿಸಿಕೊಂಡ ಅಜಯ್ ಜಡೇಜಾ: ಅದಕ್ಕೆ ಕಾರಣರಾದವರು ಇವರೆ.

165
0
SHARE
ಯುವಿಷ್ಕಾ ರವಿಕುಮಾರ್ ಗೌಡ

ಜುಲೈ 28,1999 ಮಹಾರಾಷ್ಟ್ರದ ನಾಗಪುರದಲ್ಲಿ ನಡೆದ ಕ್ರಿಕೆಟ್ ಆಯ್ಕೆ ಸಮಿತಿ ಸಭೆ ಭಾರತ ತಂಡಕ್ಕೆ ಹೊಸ ನಾಯಕನನ್ನು ಆಯ್ಕೆ ಮಾಡಿತ್ತು .ಅವತ್ತು ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದವರು ಮಾಜಿ ಭಾರತ ತಂಡದ ಆಟಗಾರ ಅಜಿತ್ ವಾಡೇಕರ್ .ಹನ್ನೊಂದು ಗಂಟೆಗೆ ಸಭೆ ಸೇರಿದ ಆಯ್ಕೆ ಮಂಡಳಿ ಕೇವಲ ಎರಡೇ ನಿಮಿಷದಲ್ಲಿ ತಂಡದ ನಾಯಕನ ಹೆಸರನ್ನು ಘೋಷಣೆ ಮಾಡಿತ್ತು.

ಇಷ್ಟು ಕಡಿಮೆ ಸಮಯದಲ್ಲಿ ಭಾರತ ಕ್ರಿಕೆಟ್ ಇತಿಹಾಸದಲ್ಲಿ ಒಬ್ಬ ನಾಯಕನನ್ನು ಆಯ್ಕೆ ಮಾಡಿದ್ದು ಇದೇ ಮೊದಲು. ಅವತ್ತು ಭಾರತ ತಂಡಕ್ಕೆ ನಾಯಕನಾಗಿ ಆಯ್ಕೆಯಾದವರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ .

ಸಿಡಿಲಬ್ಬರದ ಬ್ಯಾಟ್ಸ್ಮನ್. ಭಾರತ ತಂಡದ ಸಂಜೀವಿನಿ .ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕೇವಲ ಎರಡು ನಿಮಿಷ  ನಡೆದ ಸಭೆಯಲ್ಲಿ ಭಾರತದ ಸಾರಥ್ಯವನ್ನು ವಹಿಸಿಕೊಂಡರು . ಆದರೆ ಒಳಗಿನ ಗುಟ್ಟೇ ಬೇರೆ ಎಂದು ಕೆಲವು ಮೂಲಗಳು ಹೇಳುತ್ತಿವೆ. ಅವತ್ತು ಆಯ್ಕೆ ಸಮಿತಿಯ ಮುಂದೆ ಅಜರ್ ರನ್ನು ಬಿಟ್ಟರೆ ಸಚಿನ್ ಹಾಗೂ ಜಡೇಜ ಇಬ್ಬರೂ ಇದ್ದರು. ಸಚಿನ್ ತಾನು ನಾಯಕನಾಗಲು ಸಿದ್ಧನಿಲ್ಲ ಎಂದು ಮೊದಲೇ ಹೇಳಿದ್ದರ ಹಿನ್ನೆಲೆಯಲ್ಲಿ ಆಯ್ಕೆ ಸಮಿತಿ ಜಡೇಜರನ್ನು ನಾಯಕನಾಗಿ ಮಾಡಲು ಯೋಚಿಸಿದರು .

ಆದರೆ ಆಯ್ಕೆ ಸಮಿತಿಯಲ್ಲೂ ಹಲವಾರು ಲಾಬಿಗಳು ಇರುವುದರಿಂದ ಜಡೇಜ ವಿರುದ್ಧ ಸಣ್ಣ ಕೂಗು ಎದ್ದು ಸಚಿನ್ ಗೆ ನಾಯಕ ಪಟ್ಟ ಕೊಡಬೇಕೆಂದು ಕೊನೆಗೆ ತೀರ್ಮಾನವಾಗಿತ್ತು.

ಜಡೇಜರಿಗೆ ಹೋಲಿಸಿದರೆ ಸಚಿನ್ ಎಲ್ಲ ವಿಧದಲ್ಲೂ ಅತ್ಯುತ್ತಮ ನಾಯಕನಾಗಬಲ್ಲನೆಂಬ ಕಾರಣದಿಂದ ಜಡೇಜ ಪರ ಇದ್ದ ಆಯ್ಕೆ ಸಮಿತಿಯ ಲಾಬಿ ಅನಿರ್ವಾಯವಾಗಿ ತಣ್ಣಗಾಯಿತು  ಸಚಿನ್ ನಾಯಕನಾಗಲು ನಿರಾಕರಿಸಿದ್ದರಿಂದ ಜಡೇಜಾಗೆ ನಾಯಕ ಪಟ್ಟ ಕಟ್ಟಬೇಕೆಂದು ಆಯ್ಕೆ ಸಮಿತಿಯ ಉತ್ತರ ಭಾರತ ಲಾಬಿ ಪ್ರಯತ್ನ ಪಟ್ಟಿತು ಆದರೆ ಸಚಿನ್ ಗೆ ನಾಯಕತ್ವ ಕೊಟ್ಟು ಅದನ್ನು ನಿರ್ವಹಿಸಬೇಕೆಂದು ಒತ್ತಾಯಿಸಿದರೆ ಆತ ಅದನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ತರ್ಕಿಸಿದ ಆಯ್ಕೆ ಸಮಿತಿ ಕೊನೆಗೂ ಅದನ್ನೇ ನಿರ್ಧರಿಸಿ ಸಚಿನ್ ಗೆ ನಾಯಕನ ಪಟ್ಟವನ್ನು ಕಟ್ಟಿತ್ತು .

ಹೀಗಾಗಿ ಜಡೇಜ ನಾಯಕ ಪಟ್ಟವನ್ನು ಸ್ವಲ್ಪದರಲ್ಲೇ ಕೈ ತಪ್ಪಿದಂತಾಯಿತು. ಜಡೇಜರನ್ನು ನಾಯಕನನ್ನಾಗಿ ಮಾಡುವುದಕ್ಕೆ ಭಾರಿ ವಿರೋಧವೇನೂ ಇಲ್ಲದಿದ್ದರೂ ಸಚಿನ್ ಪ್ರಶ್ನೆ ಬಂದಾಗ ಅವರನ್ನು ಹಿಂದಿಕ್ಕೆ ಇಡುವುದು ಆಯ್ಕೆ ಸಮಿತಿಗೆ ಅನಿವಾರ್ಯವಾಯಿತು ನಾಯಕನನ್ನಾಗಿ ಸಚಿನ್‌ ರನ್ನ  ಆಯ್ಕೆ ಮಾಡಿದ್ದ ಆಯ್ಕೆ ಸಮಿತಿ, ಸಚಿನ್ ಆ ಬಗ್ಗೆ ಏನು ಹೇಳಬಹುದೆಂದು ಊಹೆಯಲ್ಲಿ ಇತ್ತು .

ಸಚಿನ್ ತೆಂಡೂಲ್ಕರ್ ಈ ಬಗ್ಗೆ ಪ್ರತಿಕ್ರಿಯೆ ನೀಡಲು ಅವತ್ತು ಯಾರಿಗೂ ಸಿಗದೇ ಹೋದದ್ದು ಅಂದಿನ ದೊಡ್ಡ ತಮಾಷೆಯೆನಿಸಿತು. ಕೆಲವರು ಸಚಿನ್ ಪುಟ್ಟಪರ್ತಿಗೆ ಹೋಗಿದ್ದಾರೆ ಎಂದರೆ. ಮತ್ತೆ ಕೆಲವರು ಇಲ್ಲ …ಇಲ್ಲ ಆತ ಮುಂಬೈನಲ್ಲಿ ಅವರ ಮನೆಯಲ್ಲೇ ಇದ್ದಾರೆ ಎಂದು ಮಾತನಾಡಿದರು .

LEAVE A REPLY

Please enter your comment!
Please enter your name here