ಸಾಯಿ ಪಲ್ಲವಿ ಅಭಿನಯದ “ಗಾರ್ಗಿ’ ಸಿನಿಮಾಗೆ ಸಾಥ್ ಕೊಟ್ಟ ನಟ ರಕ್ಷಿತ್ ಶೆಟ್ಟಿ

ಚಲನಚಿತ್ರ

ಖ್ಯಾತ ನಟಿ ಸಾಯಿ‌ ಪಲ್ಲವಿ ಅಭಿನಯದ “ಗಾರ್ಗಿ’ ಚಿತ್ರ ಇದೇ ಜುಲೈ ಹದಿನೈದರಂದು ದೇಶಾದ್ಯಂತ ಬಿಡುಗಡೆಯಾಗುತ್ತಿದೆ. ಕನ್ನಡದ ಹೆಸರಾಂತ ಪರಮ್ ವಾ ಪಿಕ್ಚರ್ಸ್ ಕನ್ನಡದಲ್ಲಿ ಈ ಚಿತ್ರವನ್ನು ಪ್ರಸ್ತುತ ಪಡಿಸಲಿದೆ. ಇದು ನಟ ರಕ್ಷಿತ್ ಶೆಟ್ಟಿ ಅವರ ಸಂಸ್ಥೆ ಎನ್ನುವುದು ವಿಶೇಷ. ಅಲ್ಲದೇ,  ಕೆ.ಆರ್.ಜಿ ಸ್ಟುಡಿಯೋಸ್ ಮೂಲಕ ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಗೌತಮ್ ರಾಮಚಂದ್ರನ್ ನಿರ್ದೇಶನದ ಈ ಚಿತ್ರ ತಮಿಳಿನಲ್ಲಿ ನಿರ್ಮಾಣವಾಗಿದ್ದು, ಕನ್ನಡ ಹಾಗೂ ತೆಲುಗಿಗೆ ಡಬ್ ಆಗಿದೆ. ರವಿಚಂದ್ರನ್ ರಾಮಚಂದ್ರನ್, ಐಶ್ವರ್ಯ ಲಕ್ಷ್ಮೀ, ಥಾಮಸ್ ಜಾರ್ಜ್ ಹಾಗೂ ಗೌತಮ್ ರಾಮಚಂದ್ರನ್ ನಿರ್ಮಿಸಿರುವ ಈ ಚಿತ್ರಕ್ಕೆ ಗೋಗಿಂದ್ ವಸಂತ ಸಂಗೀತ ನೀಡಿದ್ದಾರೆ.

ಸ್ರೈಯಂತಿ ಹಾಗೂ ಪ್ರೇಮ್ ಅಕ್ಕಟ್ಟು ಛಾಯಾಗ್ರಹಣ, ಶಫಿಕ್ ಮೊಹಮದ್ ಆಲಿ ಅವರ ಸಂಕಲನ ಈ ಚಿತ್ರಕ್ಕಿದೆ. ಸಾಯಿಪಲ್ಲವಿ, ಕಾಳಿ ವೆಂಕಟ್, ಸರವಣನ್, ಜಯಪ್ರಕಾಶ್, ಆರ್ ಎಸ್ ಶಿವಾಜಿ, ಲಿವಿಂಗ್ ಸ್ಟನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ‌. ಈಗಾಗಲೇ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ರಿಲೀಸ್ ಆಗಿರುವ ಟ್ರೈಲರ್ ಭಾರೀ ಸದ್ದು ಮಾಡಿದೆ. ಈ ಸಿನಿಮಾದಲ್ಲಿ ಸಾಯಿ ಪಲ್ಲವಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Leave a Reply

Your email address will not be published.