Home Cinema ಸಲಗ ಚಿತ್ರದ ಸಹ ನಟ ಆತ್ಮಹತ್ಯೆ.. ದುನಿಯಾ ವಿಜಿ ಹೇಳಿದ್ದೇನು ಗೊತ್ತಾ ?

ಸಲಗ ಚಿತ್ರದ ಸಹ ನಟ ಆತ್ಮಹತ್ಯೆ.. ದುನಿಯಾ ವಿಜಿ ಹೇಳಿದ್ದೇನು ಗೊತ್ತಾ ?

1208
0
SHARE

ಬೆಂಗಳೂರು. ಸುಶಾಂತ್ ಸಿಂಗ್ ರಜಪೂತ್ ಸೂಸೈಡ್ ಸಿಕ್ರೇಟ್ ಇನ್ನು ರಿವೀಲ್ ಆಗ್ಬೇಕಿದೆ. ಅಷ್ಟದಿಕ್ಕೂಗಳಲ್ಲೂ ಸುಶಾಂತ್ ಸಾವಿನ ಬಗ್ಗೆ ಚರ್ಚೆಗಳೂ ಆಗ್ತಿವೆ. ಆತ್ಮಹತ್ಯೆಯೊಂದೇ ಪರಿಹಾರವಲ್ಲ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಇನ್ನು, ಮಾನಸಿಕ ಖಿನ್ನತೆಯನ್ನ ಹೊಗಲಾಡಿಸುವ ನಿಟ್ಟಿನಲ್ಲಿ ಅನೇಕ ಪ್ರಯತ್ನಗಳೂ ಕೆಲವರಿಂದ ನಡೆಯುತ್ತಿವೆ. ಇದ್ರ ನಡುವೆ, ಕನ್ನಡ ಚಿತ್ರರಂಗದಲ್ಲಿ ಇನ್ನು ಬೆಳಿಬೇಕಿದ್ದ ಹುಡುಗನೊಬ್ಬ ಆತ್ಮಹತ್ಯೆ ಶರಣಾಗಿದ್ದಾನೆ.

ಹೀಗೆ ಆತ್ಮಹತ್ಯೆಗೆ ಶರಣಾದ ವ್ಯಕ್ತಿಯ ಹೆಸರು ಸುಶೀಲ್. ಸುಶೀಲ್ ಸಲಗ ಸಿನಿಮಾ ಮೂಲಕ ಮುನ್ನೆಲೆಗೆ ಬರ‍್ಬೇಕಿತ್ತು. ಆದ್ರೀಗ ಸಲಗ ಬಿಡುಗಡೆಗೂ ಮುನ್ನವೇ ಸುಶೀಲ್ ಉಸಿರು ಚೆಲ್ಲಿದ್ದಾರೆ. ಹಾಗಾಗಿಯೇ ದಿಗ್ಬ್ರಾಂತ ರಾಗಿರುವ ಸಲಗದ ನಿರ್ದೇಶಕ ಹಾಗೂ ನಾಯಕ ದುನಿಯಾ ವಿಜಿ ಆತ್ಮಹತ್ಯೆಯೊಂದೇ ಎಲ್ಲದಕ್ಕೂ ಪರಿಹಾರವಲ್ಲ. ಹಾಗೊಂದ್ವೇಳೆ ಅದೊಂದೆ ಪರಿಹಾರವಾಗಿದ್ದರೆ ಬಹುಶ ಭೂಮೀಲಿ ಯಾರೊಬ್ಬರು ಉಳಿಯುತ್ತಿರಲಿಲ್ಲ ಎಂದಿದ್ದಾರೆ. ತಮ್ಮ ಮನದಾಳದ ನೋವನ್ನೂ ಹೊರ ಹಾಕಿದ್ದಾರೆ. ನಾವೆಲ್ಲ ರಾಮ ಸೀತೆಯ ಕಥೆ ಕೇಳಿಯೇ ಬೆಳೆದಿರುತ್ತವೇವೆ. ದೇವರಾಗಿದ್ದರು ಮನುಷ್ಯ ರೂಪದಲ್ಲಿ ಎಷ್ಟೊಂದು ಕಷ್ಟ ಅನುಭವಿಸಬೇಕಾಗುತ್ತೆ ಅನ್ನೋದು ಅದರ ತಾತ್ಪರ್ಯ. ಅಂಥ ಕಷ್ಟ ನಮಗೆಲ್ಲ ಬಂದೇ ಇರುವದಿಲ್ಲ. ಆದರೂ ಬದುಕು ಸಾಕಾಗಿ ಬಿಡುತ್ತದೆ ಅನ್ನೋದೇ ವಿಪರ್ಯಾಸ ಅಂದಿದ್ದಾರೆ ದುನಿಯಾ ವಿಜಿ.

 

ಇನ್ನು ಸ್ಟಾರ್ ಆಗಿರುವ ಪ್ರತಿಯೊಬ್ಬರು ಒಂದಲ್ಲ ಒಮ್ಮೆ ಪಾತಾಳದಷ್ಟು ಕಷ್ಟ ಕಂಡೇ ಬಂದಿರ‍್ತಾರೆ. ಅಭಿಮನ್ಯು ತರಹ ಒಳಗೆ ಬರುವ ಕಥೆ ಮಾತ್ರ ತಿಳಿದು ಮುನ್ನುಗ್ಗಿ ಬಂದು ಕೂ ಚೆಲ್ಲಿದರೆ ಅದು ಸಾಧನೆ ಅಲ್ಲ ವೇದನೆ ಎಂದಿರುವ ವಿಜಿ ಈ ವರ್ಷದ ಸಾವುಗಳ ಸರಣಿ ಇಲ್ಲಿಗೆ ಮುಗಿಯೋದಿಲ್ಲ ಅನಿಸುತ್ತೆ ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ. ಸಿನಿಮಾದಲ್ಲಿ ಒಂದೊಳ್ಳೇಯ ಅವಕಾಶ ಸಿಕ್ಕ ಮೇಲೂ ಬಿಡುಗಡೆಗೂ ಕಾಯದೇ ಆತ್ಮಹತ್ಯೆ ಮಾಡಿಕೊಂಡರೇ ಹೇಗೆ..? ಎಂಬ ಪ್ರಶ್ನೆಯೂ ಕೇಳಿದ್ದಾರೆ. ಕೊನೆಯದಾಗಿ ಸುಶೀಲ್ ಆತ್ಮಕ್ಕೆ ಶಾಂತಿ ಸಿಗಲಿ ಆದರೆ ಮುಂದೆ ಯಾವ ತಂದೆ ತಾಯಿಗೂ ಇಂಥಹ ದು:ಖ ಎದುರಿಸುವ ಸಂದರ್ಭ ಬಾರದಿರಲಿ ಎಂಬ ಪ್ರಾರ್ಥನೆಯನ್ನೂ ಮಾಡಿದ್ದಾರೆ ದುನಿಯಾ ವಿಜಿ.

 

LEAVE A REPLY

Please enter your comment!
Please enter your name here