ಸ್ಯಾಂಡಲ್ ವುಡ್ ನಿರ್ಮಾಪಕ ನಿರ್ಗೀಸ್ ಬಾಬು ನಿಧನ

ಚಲನಚಿತ್ರ

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸ್ಯಾಂಡಲ್ ವುಡ್ ಸಿನಿಮಾ ರಂಗದಲ್ಲಿ ಹಲವು ಸಿನಿಮಾಗಳನ್ನು ನಿರ್ಮಿಸಿದ್ದ ನಿರ್ಮಾಪಕ ನರ್ಗೀಸ್ ಬಾಬು ನಿಧನ ಹೊಂದಿದ್ದಾರೆ. ಅವರ ನಿಧನಕ್ಕೆ ಸ್ಯಾಂಡಲ್​ವುಡ್​ನ ಅನೇಕರು ಸಂತಾಪ ಸೂಚಿಸಿದ್ದಾರೆ.

ಶಿವರಾಜ್ ಕುಮಾರ್ ಹಾಗೂ ರಮ್ಯಾ ನಟನೆಯ 2014ರಲ್ಲಿ ತೆರೆಗೆ ಬಂದ ಆರ್ಯನ್ ಸೇರಿದಂತೆ ಹಲವು ಸಿನಿಮಾಗಳಿಗೆ ನರ್ಗೀಸ್ ಬಂಡವಾಳ ಹೂಡಿದ್ದರು. ಈ ಚಿತ್ರಕ್ಕೆ ನರ್ಗೀಸ್ ಪುತ್ರ ಅಮರ್ ಬಂಡವಾಳ ಹೂಡಿದ್ದು ಮಗನಿಗೆ ಬೆನ್ನುಲುಭಾಗಿ ನರ್ಗೀಸ್ ನಿಂತಿದ್ದರು. ಈ ಚಿತ್ರವನ್ನು ಡಿ. ರಾಜೇಂದ್ರ ಬಾಬು ಹಾಗೂ ಚಿ ಗುರು ದತ್​ ಅವರು ನಿರ್ದೇಶನ ಡಿದ್ದರು.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನರ್ಗೀಸ್ ಅವರು ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದರು. ಮನೆಗೆ ಮರಳಿಗೆ ಬಳಿಕ ಆರೋಗ್ಯ ಮತ್ತಷ್ಟು ಹದಗೆಟ್ಟಿದ್ದು ನಿನ್ನೆ ಮೃತಪಟ್ಟಿದ್ದಾರೆ. ನರ್ಗೀಸ್ ಪುತ್ರ ಅಮರ್ ಕೂಡ ಕೆಲ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

Leave a Reply

Your email address will not be published.