ಬೆಂಗಳೂರು. ಇದೊಂದು ಅಭಿಮಾನಿಯ ಅಭಿಮಾನದ ಕಥೆ. ಒಬ್ಬ ಸ್ಟಾರ್ನ ಮೀಟ್ ಆಗೋಕೆ ಸಾಮಾನ್ಯವಾಗಿ ಅಭಿಮಾನಿಗಳು ಹಾತೊರೆಯುತ್ತಾರೆ. ಆದರೆ ಸ್ಯಾಂಡಲ್ವುಡ್ನ ಡಿಂಪಲ್ ಕ್ವೀನ್ ರಚಿತಾರಾಮ್ ತಮ್ಮ ಅಭಿಮಾನಿಯ ಹೆಸರು ತಿಳಿದುಕೊಳ್ಳಲು ಬಯಸುತ್ತಿದ್ದಾರೆ. ತಮ್ಮ ಇನ್ಸ್ಟ್ರಾಗ್ರಾಮ್ ಅಕೌಂಟ್ನಲ್ಲಿ ಈ ವಿಚಾರವಾಗಿ ಪೋಸ್ಟ್ ಹಾಕಿರೋ ಬುಲ್ಬುಲ್ ಬೆಡಗಿ ಈಗ ತಮ್ಮ ಅಭಿಮಾನಿಯ ತಲಾಶ್ನಲ್ಲಿದ್ದಾರೆ.
ನಡೆದಿಷ್ಟಿಷ್ಟು, ರಚಿತಾರಾಮ್ರನ್ನ ನೋಡಬೇಕು ಎನ್ನುವ ಹಂಬಲದಿಂದ 3 ಜನ ತಮ್ಮ ಆಟೋವನ್ನ ತೆಗೆದುಕೊಂಡು ರಚಿತಾ ನಿವಾಸಕ್ಕೆ ಬಂದಿದ್ರು. ರಚಿತಾ ತಾಯಿ ಅಭಿಮಾನಿಗಳನ್ನ ನೋಡಿ ರಚಿತಾಗೆ ಬೆಳಿಗ್ಗೆಯಿಂದ ಕಾಯಿತ್ತಿರೋ ಇವರ ಬಗ್ಗೆ ಹೇಳಿದ್ರು. ಕೂಡಲೇ ರಚಿತಾ ಅವರೊಂದಿಗೆ ಸೆಲ್ಫಿ ತೆಗೆಸಿಕೊಂಡಿದ್ದಾರೆ. ಆದರೆ ಅವರ ಹೆಸರು ಕೇಳಲು ಮರೆತ ರಚಿತಾ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಧೀರ್ಘವಾದ ಪತ್ರವೊಂದನ್ನ ಬರೆದುಕೊಂಡಿದ್ದಾರೆ. ಆಟೋ ಮೇಲೆ ‘ಡಿಂಪಲ್’ ಎಂದು ಸ್ಟಿಕರ್ ಇರೋ ಈ ಆಟೋ ಈಗ ಸಿಕ್ಕಪಟ್ಟೆ ಲೈಕ್ ಹಾಗೂ ಕಾಮೆಂಟ್ಗಳನ್ನ ಗಿಟ್ಟಿಸಿಕೊಳ್ಳುತ್ತಿದೆ.
ರಚಿತಾ ಈ ಪೋಸ್ಟ್ ನಲ್ಲಿ ಅಭಿಮಾನಿಗಳೇ ದೇವರು ಎನ್ನುವ ಅಣ್ಣಾವ್ರ ಮಾತುಗಳನ್ನ ನೆನಪಿಸಿಕೊಂಡಿದ್ದಾರೆ. ಅಲ್ಲದೇ ಅಭಿಮಾನಿಯ ಪಾತ್ರ ಒಬ್ಬ ಸ್ಟಾರ್ನ ಜೀವನದಲ್ಲಿ ಎಷ್ಟು ಮುಖ್ಯ ಅಂತಾನೂ ವಿವರಿಸಿದ್ದಾರೆ. ಬುಲ್ಬುಲ್ ಬೆಡಗಿ ರಚಿತಾರ ಈ ಮಾತುಗಳನ್ನ ನೋಡಿದ ಆ ಅಭಿಮಾನಿ ತಮ್ಮ ಹೆಸರನ್ನ ಇನ್ಸ್ಟಾಗ್ರಾಮ್ನಲ್ಲಿ ಹಾಕುವಂತೆ ಮನವಿ ಮಾಡಿದ್ದಾರೆ. ಒಟ್ಟಿನಲ್ಲಿ ರಚಿತಾರ ಈ ಅಭಿಮಾನಿಯ ಅಭಿಮಾನ ಕೊಂಚ ಭಿನ್ನವಾಗಿಯೇ ಗಮನ ಸೆಳೆದಿದೆ.