ಬೆಂಗಳೂರು; ಸ್ಯಾಂಡಲ್ವುಡ್ ಕಾ ಮಾಜಿ ಕ್ವೀನ್ ರಮ್ಯಾ ಆವಾಗ ಬರ್ತಾರೆ, ಈವಾಗ ಬರ್ತಾರೆ, ಮತ್ತೆ ಸಿನಿಮಾಗಳಲ್ಲಿ ಆಕ್ಟ್ ಮಾಡ್ತಾರೆ ಎನ್ನುವ ಗುಸುಗುಸು ಕಾಮನ್ ಆಗೇ ಗಾಂಧಿನಗರದಿಂದ ಪ್ರತಿಸಲವೂ ಕೇಳಿಬಂದಿತ್ತು. ಅಕಸ್ಮಾತ್ ರಮ್ಯಾ ಏನಾದ್ರೂ ಈಗ ಚಿತ್ರರಂಗಕ್ಕೆ ರೀ ಎಂಟ್ರಿ ಪಡೆದುಕೊಂಡ್ರು ಖಂಡಿತ ಮತ್ತೆ ಚಿತ್ರರಸಿಕರ ಮನಗೆದ್ದು ಟಾಪ್ಗೆ ಹೋಗ್ತಾರೆ ಎನ್ನುವ ರಮ್ಯಾ ಅಭಿಮಾನಿಗಳ ನಂಬಿಕೆಯಾಗಿದೆ. ರಮ್ಯಾ ಮತ್ತೆ ಪರದೆಮೇಲೆ ಪ್ರತ್ಯಕ್ಷವಾಗಿ ಕನ್ನಡಿಗರ ಮನರಂಜಿಸಬೇಕು ಎನ್ನುವ ಮಹಾದಾಸೆ ಕೆಲವು ನಿರ್ಮಾಪಕರದ್ದು ಹೌದು. ರಾಜಕೀಯ ಹಾಗೂ ಸಿನಿಮಾರಂಗಗಳ ಮೆಟ್ಟಿಲು ಹತ್ತಿಇಳಿದ ರಮ್ಯಾ ಈಗ ಮತ್ತೊಂದು ದಾರಿಯನ್ನ ಹುಡುಕಿಹೊರಟಿದ್ದಾರೆ. ಇಲ್ಲಿ ಯಾವ ಆಡಂಬರವೂ ಇಲ್ಲ, ತೋರಿಕೆಯೂ ಇಲ್ಲ. ಎಲ್ಲವೂ ನೈಜ್ಯಜೀವನದ ಬೆಳಕಿನ ಹಾದಿ. ರಮ್ಯಾ ಈಗ ಮತ್ತೆ ಚರ್ಚೆಯಾಗುತ್ತಿರೋದೆ ಇದೇ ವಿಚಾರಕ್ಕೆ.
ರಮ್ಯಾ ಸ್ಯಾಂಡಲ್ವುಡ್ನಲ್ಲಿ ಹೆಸರು ಸಂಪಾದಿಸಿ ನಂತರ ಪೊಲಿಟಿಕಲ್ ಫೀಲ್ಡ್ ಗೆ ಪ್ರವೇಶ ಪಡೆದು ಸ್ವಲ್ಪ ಸಮಯದ ನಂತರ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆಯಾಗಿ ಕೆಲಸ ಮಾಡಿದ್ದು ಈಗ ಭೂತಕಾಲ. ಇವೆಲ್ಲವೂ ಕಳೆದ ನಂತರ ಸ್ವಲ್ಪ ಸಮಯ ರಮ್ಯಾ ಏಕಏಕಿ ಗಾಯಬ್ ಆಗಿಬಿಟ್ರು. ಯಾಕೋ ಪಬ್ಲಿಕ್ ಲೈಫ್ ಬೋರ್ ಹೊಡೆದಾಂತಾಗಿತ್ತು. ಇವುಗಳಿಂದ ಒಂದು ಲಾಂಗ್ ಗ್ಯಾಪ್ ತೆಗೆದುಕೊಳ್ಳೂವ ನಿರ್ಧಾರ ತೆಗೆದುಕೊಂಡಿದ್ರು ಸ್ಯಾಂಡಲ್ವುಡ್ ಕಾ ಪದ್ಮಾವತಿ.
ಮೊನ್ನೆಯಷ್ಟೇ ಪತ್ರಿಕೆಗೆ ನೀಡಿದ ಸಂದರ್ಶನವೊಂದರಲ್ಲಿ ರಮ್ಯಾ ತಮ್ಮ ಜೀವನ ಎತ್ತ ಹೋಗುತ್ತಿದೆ ಎನ್ನುವುದರ ಬ್ಲೂಪ್ರಿಂಟ್ ತೋರಿಸಿದ್ದಾರೆ. ತಮ್ಮ ನಿರ್ಣಯಗಳ ಬಗ್ಗೆಯೂ ಮುಕ್ತವಾಗಿ ಮಾತನಾಡಿದ್ದಾರೆ. ತಾವು ಯಾಕೆ ಕೆಲವೊಂದು ಡಿಸಿಶನ್ಗಳನ್ನ ತೆಗೆದುಕೊಂಡೆ ಎಂಬುದರ ಕ್ಲಾರಿಟಿ ಕೊಟ್ಟಿದ್ದಾರೆ. ಎಲ್ಲರ ಜೀವನದಲ್ಲೂ ಸುಖ-ದುಃಖ, ನೋವು-ನಲಿವು ಬರೋದು ಸಹಜ. ಆದರೆ ಅದನ್ನ ಹೇಗೆ ಸೂಕ್ತವಾಗಿ ಬ್ಯಾಲೆನ್ಸ್ ಮಾಡಬಹುದು ಎಂಬುದರ ಬಗ್ಗೆ ತಮ್ಮ ಮನದಾಳದ ಮಾತುಗಳನ್ನ ಹಂಚಿಕೊಂಡಿದ್ದಾರೆ.
ನನ್ನನ್ನ ತುಂಬಾ ಇಷ್ಟಪಟ್ಟವರನ್ನ ತುಂಬಾ ನೋಯಿಸಿದ್ದೇನೆ. ಪ್ರೀತಿಸಿದವರಿಗೆ ಮನನೋಯಿಸಿದ್ದೇನೆ. ನನ್ನ ಜರ್ನಿಯಲ್ಲಿ ನನಗೆ ಸಹಾಯ ಮಾಡಲು ಬಂದವರನ್ನೂ ದೂರ ತಳ್ಳಿದ್ದೇನೆ. ಇದೇ ಜೀವನದ ನಿಜವಾದ ಸ್ಟ್ರಗಲ್. ಇದರಿಂದ ತುಂಬಾ ಕಲಿತಿದ್ದೇನೆ. ನಾವು ವರ್ತಮಾನ ಕಾಲದಲ್ಲಿ ಬದುಕಬೇಕು. ಈಗೀನ ಕ್ಷಣವನ್ನ ಬದುಕುವುದೇ ರಿಯಲ್ ಲೈಫ್ ಎಂಬ ಸ್ಟೈಟ್ ಮೇಸೆಜ್ ನೀಡಿದ್ದಾರೆ ದಿಲ್ ಕಿ ರಾಣಿ ರಮ್ಯಾ.
ನಾವು ಒಮ್ಮೊಮ್ಮೆ ನಮ್ಮದೇ ಜಗತ್ತನ್ನ ನೋಡಿ ಒಮ್ಮೊಮ್ಮೆ ಬೇಸರವ್ಯಕ್ತಪಡಿಸಿಕೊಳ್ಳುತ್ತೇವೆ. ಜೀವನದಲ್ಲಿ ಕೆಲವು ಪರಿಸ್ಥಿತಿಗಳಿಗೆ ತಗುಲಿಹಾಕಿಕೊಂಡು ನೋವನ್ನ ಅನುಭವಿಸುತ್ತೇವೆ. ಒಂದೊಂದು ಸ್ಟೆಪ್ಗೂ ಕೆಲವರಿಂದ ದೂರವಾಗುತ್ತೇವೆ. ನಾವು ಯಾರು? ಇಲ್ಲಿಗೆ ಯಾಕೆ ಬಂದಿದ್ದೇವೆ? ಇದಕ್ಕೆಲ್ಲ ಕಾರಣವೇನು? ಎನ್ನುತ್ತ ಸಾಲುಸಾಲು ಪ್ರಶ್ನೆಗಳನ್ನ ತಮ್ಮಲ್ಲೇ ಕೇಳಿಕೊಳ್ಳುತ್ತೇವೆ. ಈ ಆತ್ಮವಲೋಕನದಿಂದ ಪ್ರಪಂಚದಿಂದ ಬೇರೆಬೇರೆ ಆಗುತ್ತೇವೆ. ಲೈಫ್ನಲ್ಲಿ ಉತ್ಸಾಹ ಕಳೆದುಕೊಳ್ಳುತ್ತೇವೆ. ಸ್ಪಿರಿಚ್ಯುಲ್ ದಾರಿಯಲ್ಲೇ ಇದಕ್ಕೆಲ್ಲ ಉತ್ತರ ಸಿಗುತ್ತೆ ಎನ್ನುವ ಭಾವನೆ ಅಂತ ಜೀವನವನ್ನ ಬೇರೆಯಾದೇ ದೃಷ್ಟಿಕೋನದಲ್ಲಿ ನೋಡತೊಡಗಿದ್ದಾರೆ.
ಈ ಮಾತುಗಳನ್ನ ಕೇಳ್ತಿದ್ರೆ ಎಲ್ಲರಿಗೂ ಒಂದುಕ್ಷಣ ಆಶ್ಚರ್ಯವಾಗೋದು ಗ್ಯಾರಂಟಿ. ಯಾಕಂದ್ರೆ ಈ ರೀತಿಯ ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ ರಮ್ಯಾ ಎಂದೂ ಮಾತನಾಡಿದವರಲ್ಲ. ಸೆಲೆಬ್ರೆಟಿಗಳ ಬಾಯಲ್ಲಿ ಇಂತಹ ವಿಚಾರಧಾರೆಗಳು ಹೊರಬಿದ್ದಾಗ ಎಲ್ಲರಿಗೂ ಒಮ್ಮೆ ಅರಗಿಸಿಕೊಳ್ಳೊದು ಕಷ್ಟವಾಗುತ್ತೆ. ರಾಜಕೀಯದ ಚದುರಂಗದಾಟವನ್ನ ಅರ್ಥೈಸಿಕೊಳ್ಳದೇ ಹಿಂದೆಬಿದ್ದ ರಮ್ಯಾ ಹೀಗೆ ಮಾತನಾಡಿದ್ದರಾ ಎನ್ನುವ ಅನುಮಾನವೂ ಇಲ್ಲಿ ಹೊಗೆಯಾಡುತ್ತೆ. ಹಾಗೆಯೇ ರಮ್ಯಾರ ಈ ಆಧ್ಯಾತ್ಮಿಕ ಹುಡುಕಾಟವನ್ನ ನೋಡಿದ ಚಿತ್ರಪ್ರಿಯರು ಸದ್ಯಕ್ಕೆ ಏನೂ ಮಾತನಾಡುತ್ತಿಲ್ಲ. ಆದರೆ ರಮ್ಯಾರ ಮನಸ್ಸಿನ ದೃಷ್ಟಿಕೋನ ಬೇರೆ ಏನನ್ನೋ ಹೇಳೊಕೆ ಹೊರಟಿದೆ ಎನ್ನುವುದಂತೂ ಫಿಕ್ಸ್. ಜೀವನ ಹಾಗೂ ಸಮಾಜವನ್ನ ಹೇಗೆ ನಾನು ನೋಡ್ತಿನಿ ಎನ್ನುವ ಅಂಶವನ್ನ ರಮ್ಯಾ ಇಲ್ಲಿ ಎಳೆಎಳೆಯಾಗಿ ಬಿಚ್ಚಿಡೋಕೆ ಪ್ರಯತ್ನಿಸಿದ್ದಾರೆ.
ಕಷ್ಟ ಎನ್ನೋದು ಎಲ್ಲರಿಗೂ ಬರುತ್ತೆ ನಿಜ. ಆದರೆ ಇವುಗಳಿಂದ ಹೊರನಿಂತು ಜೀವನವನ್ನ ಆಸ್ವಾದಿಸಬೇಕು ಎನ್ನುವುದೇ ರಮ್ಯಾ ಮಾತುಗಳ ಒಟ್ಟಾರೆ ಸಾರಂಶ. ಜೀವನದಲ್ಲಿ ಏನೇ ಎದುರಾದ್ರು ಅದನ್ನ ಧೈರ್ಯವಾಗಿ ಫೈಟ್ ಮಾಡಬೇಕು ಎನ್ನುವ ಸಂದೇಶ ಕೂಡ ರಮ್ಯಾರ ಮಾತುಗಳಲ್ಲಿ ಕಾಣಿಸ್ತಿದೆ. ಜೀವನ ಒಂದು ಹೋರಾಟ. ಈ ಹೋರಾಟದಲ್ಲಿ ತಮಗೆ ಗೊತ್ತಿಲ್ಲದಂತೆ ಹಲವರನ್ನ ದೂರತಳ್ಳುತ್ತೇವೆ ಅಂತ ಯಾರ ಹೆಸರನ್ನೂ ಸೂಚಿಸದೇ ರಮ್ಯಾ ಕೆಲವು ಸತ್ಯಗಳನ್ನ ಆಧ್ಯಾತ್ಮಿಕ ದೃಷ್ಟಿಕೋನದಲ್ಲಿ ಹೇಳಿದ್ದಾರೆ. ರಮ್ಯಾ ಜೀವನದಲ್ಲಿ ಅಂತಹ ಬದಲಾವಣೆ ತಂದವರು ಯಾರು? ರಮ್ಯಾರ ಈ ಬದಲಾದ ಜೀವನಶೈಲಿಗೆ ಕಾರಣ ಯಾರು? ಇವಕ್ಕೆಲ್ಲ ರಮ್ಯಾರ ಬಳಿಯೇ ಉತ್ತರವಿದೆ.
ಸದ್ಯಕ್ಕೆ ರಮ್ಯಾ ಬ್ಯಾಲೆನ್ಸ್ ಎಂಬ ಕೀಗೋಸ್ಕರ ಕಾಯುತ್ತಿದ್ದು, ಜೀವನವನ್ನ ತಮ್ಮದೇ ಸ್ಟೈಲ್ನಲ್ಲಿ ಜೀವಿಸೋಕೆ ರೆಡಿಯಾಗಿಬಿಟ್ಟಿದ್ದಾರೆ. ತುಂಬಾ ದೂರ ಹೋಗಲು ರಮ್ಯಾಗೆ ಇಷ್ಟವಿಲ್ಲ. ಅಂದ್ರೇ ಹತ್ತರವಿರಲು ಮನಸ್ಸು ಒಪ್ಪದು. ಅಂತೂ ಇಷ್ಟುದಿನ ಜನ-ಜೀವನದಿಂದ ಊಹಿಸಲಾಗದಷ್ಟು ದೂರಹೋಗಿದ್ದ ರಮ್ಯಾ ಫೇಸ್ಬುಕ್ ಖಾತೆಗೆ ರೀ-ಎಂಟ್ರಿ ಪಡೆದುಕೊಂಡಿದ್ದಾರೆ. ಮುಂದೆ ಕೂಡ ಯಾವುದಾದರೂ ಹೊಸ ಸರ್ಪ್ರೈಸ್ ಕೊಡಬಹುದಾ ಎನ್ನುವ ಆಸೆಯಲ್ಲೇ ರಮ್ಯಾ ಅಭಿಮಾನಿಗಳು ವೈಟ್ ಮಾಡ್ತಿದಾರೆ. ಎನಿವೇ, ರಮ್ಯಾರ ಅನುಭವಗಳು ರಮ್ಯಾ ನಡೆಯುತ್ತಿರೋ ಹೊಸದಾರಿಯನ್ನ ತೋರಿಸಿಕೊಟ್ಟಿದೆ ಎನ್ನುವುದಷ್ಟೇ ಸದ್ಯದ ಬಿಸಿಬಿಸಿ ಸುದ್ಧಿ.