ಮಾರಕಾಸ್ತ್ರ ತೋರಿಸಿ ರಾಬರಿ ಮಾಡುತ್ತಿದ್ದ ಆರೋಪಿ: ಕೋಣನಕುಂಟೆ ರೌಡಿಶೀಟರ್ ನಾಯಿ ಸಂತೋಷ್ ಬಂಧನ

ಅಪರಾಧ

ಬೆಂಗಳೂರು: ಮಾರಕಾಸ್ತ್ರ ತೋರಿಸಿ ಚಿನ್ನಾಭರಣ ದೋಚುತ್ತಿದ್ದ ರೌಡಿಶೀಟರ್ ನಾಯಿ ಸಂತೋಷನನ್ನು ಬೆಂಗಳೂರು ಸಿಸಿಬಿ ಪೊಲೀ ಸರು ಬಂಧಿಸಿದ್ದಾರೆ. ಕೋಣನಕುಂಟೆ ರೌಡಿಶೀಟರ್ ಸಂತೋಷ್ ಕುಮಾರ್ ಅಲಿಯಾಸ್ ನಾಯಿ ಸಂತೋಷ್ ಬಂಧಿತನಾಗಿದ್ದು, ಈತ ನಗರದ ಹುಳಿಮಾವು ವ್ಯಾಪ್ತಿಯ ಗಾರ್ಡೇನಿಯಾ ಬಳಿ ದಾರಿಹೋಕರನ್ನು ರಾಬರಿ ಮಾಡಿದ್ದ. ಈ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಅಲ್ಲದೇ ರೌಡಿಶೀಟರ್ ನಾಯಿ ಸಂತೋಷ್ ಕೋಣನಕುಂಟೆ ಠಾಣಾ ವ್ಯಾಪ್ತಿಯ ಜೋಡಿ ಕೊಲೆಯ ಪ್ರಮುಖ ಆರೋಪಿ ಎಂದು ತಿಳಿದು ಬಂದಿದೆ.

Leave a Reply

Your email address will not be published.