ರಾಕ್ ಸ್ಟಾರ್ ಇಶಾನ್ ಗೆ ಆಕ್ಷನ್ ಕಟ್ ಹೇಳಲಿದ್ದಾರೆ ‘’ಜೇಮ್ಸ್’’ ಚಿತ್ರದ ಸಾರಥಿ

ಚಲನಚಿತ್ರ

ಬಹದ್ದೂರ್, ಭರ್ಜರಿ, ಭರಾಟೆ, ಜೇಮ್ಸ್ ನಂತಹ ಮಾಸ್ ಕಮರ್ಷಿಯಲ್ ಸಿನಿಮಾಗಳನ್ನು ಸಿನಿಪ್ರಿಯರಿಗೆ ಉಣಬಡಿಸಿರುವ ಡೈರೆಕ್ಟರ್ ಕಂ ಲಿರಿಕ್ಸ್ ರೈಟರ್, ಡೈಲಾಗ್ ರೈಟರ್ ಚೇತನ್ ಕುಮಾರ್ ಹೊಸ ಸಿನಿಮಾ ಅನೌನ್ಸ್ ಆಗಿದೆ. ಅಪ್ಪು ನಟನೆಯ ಕೊನೆಯ ಸಿನಿಮಾ ಜೇಮ್ಸ್ ಬಳಿಕ ಚೇತನ್ ಮುಂದಿನ ಹೆಜ್ಜೆ ಬಗ್ಗೆ ಸಿನಿಲೋಕದಲ್ಲಿ ಕುತೂಹವಿತ್ತು. ಚೇತನ್ ಯಾವ್ ಹೀರೋಗೆ ಆಕ್ಷನ್ ಕಟ್ ಹೇಳ್ತಾರೆ ಎಂಬ ಪ್ರಶ್ನೆಗೀಗ ಉತ್ತರ ಸಿಕ್ಕಿದೆ.

 ಪುರಿ ಜಗನ್ನಾಥ್ ಸಾರಥ್ಯದಲ್ಲಿ ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲಿ ಮೂಡಿ ಬಂದಿದ್ದ ರೋಗ್ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಅಡಿ ಇಟ್ಟಿದ್ದ ಇಶಾನ್ ಗೆ ಚೇತನ್ ನಿರ್ದೇಶನ ಮಾಡಲಿದ್ದಾರೆ. ಪವನ್ ಒಡೆಯರ್ ನಿರ್ದೇಶನದ ಮ್ಯೂಸಿಕಲ್ ಲವ್ ಸ್ಟೋರಿ ರೇಮೋ ಸಿನಿಮಾ ರಿಲೀಸ್ ಗೆ ಎದುರು ನೋಡ್ತಿರುವ ಇಶಾನ್ ಈ ಚಿತ್ರ ಬಿಡುಗಡೆಗೂ ಮುನ್ನವೇ ಚೇತನ್ ಜೊತೆ ಕೈ ಜೋಡಿಸಿದ್ದಾರೆ. ಸದ್ಯ ಇಷ್ಟೇ ಮಾಹಿತಿ ಬಿಟ್ಟುಕೊಟ್ಟಿರುವ ಚೇತನ್ ಮುಂದಿನ ದಿನಗಳಲ್ಲಿ ಇನ್ನಷ್ಟು ಅಪ್ ಡೇಟ್ ನೀಡುವುದಾಗಿ ತಿಳಿಸಿದ್ದಾರೆ. 

 ಚೇತನ್ ಹಾಗೂ ಇಶಾನ್ ಕಾಂಬೋದ ಹೊಸ ಸಿನಿಮಾ ಯಾವಾಗ ಶುರುವಾಗಲಿದೆ? ಪ್ರೊಡಕ್ಷನ್ ಹೌಸ್ ಯಾವುದು? ನಿರ್ಮಾಪಕರು ಯಾರು? ನಾಯಕಿ ಯಾರು? ಯಾವ ಜಾನರ್ ಸಿನಿಮಾ? ಇನ್ನಿತರ ಅಪ್ ಡೇಟ್ ನ್ನು ಶೀಘ್ರದಲ್ಲಿ ಸಿನಿಮಾ ಟೀಂ ರಿವೀಲ್ ಮಾಡಲಿದೆ. ಸದ್ಯ ಚೇತನ್ ನಿರ್ದೇಶನದ, ಅಪ್ಪು ಕೊನೆಯ ಸಿನಿಮಾ ಜೇಮ್ಸ್ ಸಿನಿಮಾ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇದೇ ಜುಲೈ 17ರಿಂದ ಪ್ರಸಾರವಾಗ್ತಿದೆ. ಅಪ್ಪು ಹುಟ್ಟುಹಬ್ಬಕ್ಕೆ ರಿಲೀಸ್ ಆಗಿದ್ದ ಜೇಮ್ಸ್ ಚಿತ್ರವನ್ನು ಪ್ರೇಕ್ಷಕಪ್ರಭು ಹಬ್ಬದಂತೆ ಸಂಭ್ರಮಿಸಿದ್ದರು.

Leave a Reply

Your email address will not be published.