ನೋಡ ನೋಡ್ತಿದ್ದಂತೆ ಧರೆಗೆ ಬಿತ್ತು ಭಾರೀ ಗಾತ್ರದ ಮರ: CCTVಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ

ಬೆಂಗಳೂರು

ನೋಡ ನೋಡ್ತಿದ್ದಂತೆ ಭಾರೀ ಗಾತ್ರದ ಮರ ಬಿದ್ದು 20 ಕ್ಕೂಹೆಚ್ಚು ಜನರಿಗೆ ಗಂಭಿರ ಗಾಯವಾಗಿರುವ ಘಟನೆ ಬೆಂಗಳೂರಿನ ಬಿಟಿಎಂ ಲೇಔಟ್ ನಲ್ಲಿ ನಡೆದಿದೆ. ಸೋಮವಾರ ಸಂಜೆ 7:30ರ ಸಮಯದಲ್ಲಿ ದೊಡ್ಡ ಆಲದ ಮರದ ಬಿದ್ದಿದ್ದು, ಮರ ಬಿದ್ದ ರಭಸಕ್ಕೆ ಕರೆಂಟ್ ಟ್ರಾನ್ಸ್ಫ್ರಾಮರ್ ಕೂಡ ಜಖಂ ಆಗಿದೆ. ಇನ್ನೂ ಮರ ಬೀಳುವ ಸಂದರ್ಭದಲ್ಲಿ ರಸ್ತೆಯಲ್ಲಿದ್ದ 20 ಕ್ಕೂಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅದರಲ್ಲಿ ಮಹಿಳೆಯೊಬ್ಬರಿಗೆ ಬೆನ್ನು ಮೂಳೆ ಮುರಿದಿದ್ದು, ICU ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅದಲ್ಲದೆ ದೊಡ್ಡ ಆಲದ ಮರ ಬೀಳುವ ದೃಶ್ಯಗಳು ಸಿಸಿ ಕ್ಯಾಮರ ದಲ್ಲಿ ಸೆರೆಯಾಗಿದ್ದು, ಮುನ್ನಚ್ಚರಿಕೆ ನೀಡಿದರೂ ಬಿಬಿಎಂಪಿ ಸಿಬ್ಬಿಂದಿಗಳು ನಿರ್ಲಕ್ಷ್ಯ ತೋರಿದ ಕಾರಣ ಈ ಅವಘಡ ಸಂಭವಿಸಿದೆ. ಇನ್ನೂ ಏನಾದ್ರೂ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ಸ್ಥಳೀಯ ನಿವಾಸಿಗಳು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

Leave a Reply

Your email address will not be published.