ರಷ್ಯಾ- ಉಕ್ರೇನ್ ಯುದ್ಧಕ್ಕೆ ಕೌಂಟ್ ಡೌನ್..! ರಷ್ಯಾ ಮೇಲೆ ಹಣಕಾಸು ಸೇರಿ ವಿವಿಧ ನಿರ್ಬಂಧ ಹೇರಿದ ಅಮೆರಿಕ

ಅಂತರಾಷ್ಟ್ರೀಯ

ವಾಷಿಂಗ್ಟನ್: ರಷ್ಯಾ, ಉಕ್ರೇನ್ ವಿರುದ್ಧ ಯುದ್ದ ಕಹಳೆ ಕೂಗಿದ್ದು, ರಷ್ಯಾದ ಸೈನ್ಯ ಉಕ್ರೇನ್‍ನಲ್ಲಿದೆ. ಈ ಹಿನ್ನೆಲೆ ಅಮೆರಿಕ, ರಷ್ಯಾ ಮೇಲೆ ಹಣಕಾಸು ಸೇರಿ ವಿವಿಧ ನಿರ್ಬಂಧಗಳನ್ನು ಹೇರಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಎನ್‍ಎಟಿಒ ಒಪ್ಪಂದದಡಿ ರಷ್ಯಾದ ಮೇಲೆ ಕೆಲವೊಂದು ನಿರ್ಬಂಧ ಹೇರಲಾಗಿದೆ. ಉಕ್ರೇನ್ ನ ಮತ್ತು ಅಮೆರಿಕದ ಯಾವುದೇ ಪ್ರದೇಶಗಳ ಮೇಲೆ ನಿರ್ಧಾರ ಕೈಗೊಳ್ಳುವ,

ಯಾವುದೇ ವ್ಯಕ್ತಿ ಮೇಲೆ ನಿರ್ಬಂಧ ಹೇರಲಾಗಿದೆ ಎಂದು ತಿಳಿಸಿದರು. ಉಕ್ರೇನ್‍ನ ಡಿಎನ್‍ಆರ್ ಮತ್ತು ಎಲ್‍ಎನ್‍ಆರ್ ಎಂದು ಕರೆಯಲ್ಪ ಡುವ ಡೊನಸ್ಕ್ ಮತ್ತು ಲಂಗಸ್ಕ್ ಪ್ರದೇಶದಲ್ಲಿ ಅಮೆರಿಕದ ಪ್ರಜೆಗಳು ಯಾವುದೇ ಹೊಸ ಹೂಡಿಕೆ, ವ್ಯಾಪಾರ ಮತ್ತು ಹಣಕಾ ಸು ನೆರವು ನೀಡುವುದನ್ನು ನಿಷೇಧಿಸಲಾಗಿದೆ ಎಂದು ಶ್ವೇತಭವನದಲ್ಲಿ ಹೇಳಿದರು.

Leave a Reply

Your email address will not be published.