ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಭಿನ್ನಮತ ಸ್ಫೋಟ!

ಜಿಲ್ಲೆ

ಶಿಡ್ಲಘಟ್ಟ: ಕಾಂಗ್ರೆಸ್ ಬ್ಯಾನರ್ ಅಡಿಯಲ್ಲಿ ನಡೆದಂತಹ ಕಾರ್ಯಕ್ರಮದಲ್ಲಿ ಶಾಸಕ ವಿ. ಮುನಿಯಪ್ಪ ಗೈರಾಗಿದ್ದು, ಸದ್ಯ ತಾಲ್ಲೂಕು ಕಾಂಗ್ರೆಸ್ ಪಾಳೆಯಯಲ್ಲಿ ಚರ್ಚೆಗೆ ಕಾರಣವಾಗಿದೆ. ತಾಲ್ಲೂಕಿನಲ್ಲಿ ಸಮಾಜ ಸೇವೆಗೆಂದು ಬಂದಿರುವ ಹೆಚ್ ಎ ಎಲ್ ನ ಮಾಜಿ ಅಧಿಕಾರಿ, ಬೆಂಗಳೂರಿನ ಆವಲಹಳ್ಳಿ ಮೂಲದ ದೇವರಾಜ್ ಕ್ರಿಕೆಟ್ ಸೇರಿದಂತೆ, ವಾಲಿಬಾಲ್, ಕಬ್ಬಡಿ ಟೂರ್ನಿ ಆಯೋಜಿಸಿದ್ದರು.

ಇನ್ನು ಈ ಕಾರ್ಯಕ್ರಮವನ್ನು ಶಾಸಕ ವಿ. ಮುನಿಯಪ್ಪ ಪಾಲ್ಗೊಂಡು ಉಧ್ಘಾಟಿಸಲಿದ್ದಾರೆ ಎಂಬ ಮಾಹಿತಿ ಇತ್ತಾದರೂ ಕೊನೆ ಕ್ಷಣದಲ್ಲಿ ಕಾರ್ಯಕ್ರಮದ ಬ್ಯಾನರ್ ಗಳಲ್ಲಿ ಯೂತ್ ಕಾಂಗ್ರೆಸ್ ನ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಕಾಣಿಸಿಕೊಂಡಿದ್ದರು. ಇನ್ನು ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದ ನಲಪಾಡ್ ನಿರುದ್ಯೋಗ ಸಮಸ್ಯೆ ಸೇರಿದಂತೆ ಪೆಟ್ರೋಲ್, ಅಡುಗೆ ಅನಿಲ ಬೆಲೆ ಏರಿಕೆ ಮುಂತಾದ ವಿಷಯಗಳ ಬಗ್ಗೆ ಬೆಜೆಪಿಯ ವಿರುದ್ದ ಗುಡುಗಿದರು.

ಇದೇ ಸಮಯದಲ್ಲಿ ಎನ್ ದೇವರಾಜ್ ಸೇವೆಯನ್ನು ಹಾಡಿ ಹೊಗಳಿದ ಅವರು ಕಾಂಗ್ರೆಸ್ ನ ಬ್ಯಾನರ್ ಅಡಿಯಲ್ಲಿ ಯಾರೇ ಕಾರ್ಯಕ್ರಮ ಮಾಡಿದರು ನಾನು ಬರುತ್ತೇನೆ ಅದು ನನ್ನ ಕರ್ತವ್ಯ ಎಂದರು. ಪಕ್ಷದಲ್ಲಿ ಯಾರಿಗೆ ಯಾವ ಕ್ಷೇತ್ರದಲ್ಲಿ ಟಿಕೆಟ್ ಕೊಟ್ಟರೂ ನಿಷ್ಟೆಯಿಂದ ಕಾರ್ಯಕರ್ತರು ದುಡಿಯಬೇಕು ಎಂದರು. ನಂತರ ಸುದ್ದಿ ಗಾರರೊಂದಿಗೆ ಮಾತನಾಡಿದ ಎನ್ ದೇವರಾಜ್ ಕಾರ್ಯಕ್ರಮಕ್ಕೆ ಶಾಸಕರು ಆಗಮಿಸಬೇಕಿತ್ತು ಆದರೆ ಆರೋಗ್ಯ ಸಮಸ್ಯೆಯಿಂದ ಬಂದಿರುವುದಿಲ್ಲ ಎಂದವರು ಮಾಧ್ಯಮ ಪ್ರತಿನಿಧಿಗಳಿಗೆ ಉತ್ತರಿಸುತ್ತಾ ಇಲ್ಲಿನವರೇ ಯಾರಾದರು ಅವರಿಗೆ ಮಿಸ್ ಗೈಡ್ ಮಾಡಿರಬಹುದು ಇಲ್ಲ ಅವರಾಗಿಯೇ ಕಾರ್ಯ ನಿಮಿತ್ತ ಬಾರದೇ ಇರಬಹುದು ಅವರಿಗೂ ವಯಸ್ಸಾಗಿದ್ದು, ಎಲ್ಲವನ್ನೂ ಗಣನೆಗೆ ತೆಗೆದು ಕೊಳ್ಳಬೇಕು ಎಂದರು.

ಶಾಸಕರು ಆಗಮಿಸದ ಹಿನ್ನೆಲೆಯಲ್ಲಿ ಸ್ತಳಿಯ ಜನ ಪ್ರತಿನಿಧಿಗಳು, ಕಾರ್ಯಕರ್ತರು ಸಹಜವಾಗಿ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಗೈರಾಗಿದ್ದರು. ಇದರಿಂದ ಕಾರ್ಯಕ್ರಮ ಜನರಿಲ್ಲದೇ ಬಣಗುಡುವಂತ್ತಿತ್ತು. ಒಟ್ಟಾರೆಯಾಗಿ ತಾಲ್ಲೂಕಿನ ಕಾಂಗ್ರೆಸ್ ನಲ್ಲಿ ಬಣಗಳು ಸೃಷ್ಟಿಯಾಗಿರುವುದು ಮೇಲ್ನೋಟಕ್ಕೆ ಕಾಣುವಂತಿತ್ತು.

Leave a Reply

Your email address will not be published.