ಪಂಜಾಬ್ ಕಿಂಗ್ಸ್ ತಂಡದ ಹೊಸ ನಾಯಕನಾಗಲು ಸಿದ್ಧರಾದ ಶಿಖರ್ ಧವನ್

ಕ್ರೀಡೆ

ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ಹರಾಜಿನಲ್ಲಿ ಟೀಮ್ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ಪಂಜಾಬ್ ಕಿಂಗ್ಸ್ ತಂಡದ ಹೊಸ ನಾಯಕನಾಗಲು ಸಿದ್ಧರಾಗಿದ್ದಾರೆ. ಈ ಹಿಂದೆ ಕನ್ನಡಿಗ ಕೆಎಲ್ ರಾಹುಲ್ ಪಂಜಾಬ್ ತಂಡದ ಮಾಜಿ ನಾಯಕನಾಗಿದ್ದರು. ಆದರೆ ರಾಹುಲ್ ಅವರೀಗ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಬಿಡ್ ಆಗಿದ್ದಾರೆ. ಈ ಹಿನ್ನೆಲೆ ಪಂಜಾಬ್ ತಂಡವು ನಾಯಕನನ್ನು ಬದಲಾಯಿಸಲು ನಿರ್ಧರಿಸಿದೆ

ಐಪಿಎಲ್ 2021 ರಲ್ಲಿ ಪಾಯಿಂಟ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದ ಕೆಎಲ್ ರಾಹುಲ್ ಬದಲಿಗೆ ಭಾರತೀಯ ಆಟಗಾರನನ್ನು ಚುಕ್ಕಾಣಿ ಹಿಡಿಯಲು ಪಂಜಾಬ್ ತಂಡವು ಉತ್ಸುಕವಾಗಿದೆ. ಅವರು ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಅವರನ್ನು 12 ಕೋಟಿ ರೂ. ನೀಡಿ ತಂಡದಲ್ಲಿಯೇ ಉಳಿಸಿಕೊಂಡಿದೆ. ಮಯಾಂಕ್ ಅವರಿಗೆ ಅಷ್ಟೇನು ಹೆಚ್ಚಿನ ನಾಯಕತ್ವದ ಅನುಭವವಿಲ್ಲ. ಐಪಿಎಲ್ 2022ರ ಮೆಗಾ ಹರಾಜಿನ ಸಮಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಪೈಪೋಟಿ ನೀಡಿ, ಧವನ್ ಅವರನ್ನು 8.25 ಕೋಟಿ ರೂ. ನೀಡಿ ಖರೀದಿಸಲು ಪಿಬಿಕೆಎಸ್ ಯಶಸ್ವಿಯಾಗಿದೆ.

Leave a Reply

Your email address will not be published.