ನವೀನ್ ನಿವಾಸಕ್ಕೆ ಸಿರಿಗೆರೆ ತರಳಬಾಳು ಮಠದ ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯರು ಭೇಟಿ

ಜಿಲ್ಲೆ

ಹಾವೇರಿ: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಲ್ಲಿ ಕನ್ನಡಿಗ ನವೀನ ಮೃತಪಟ್ಟ ಹಿನ್ನೆಲೆ, ನವೀನ ನಿವಾಸಕ್ಕೆ ಸಿರಿಗೆರೆ ತರಳ ಬಾಳು ಮಠದ ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯರು ಭೇಟಿ ನೀಡಿದ್ದಾರೆ. ನವೀನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸ್ವಾಮೀಜಿ ಹೂವು ಹಾಕಿದ್ದಾರೆ. ಮೃತ ನವೀನ ತಂದೆ ಶೇಖರಗೌಡ, ತಾಯಿ ವಿಜಯಲಕ್ಷ್ಮಿ ಹಾಗೂ ಅಣ್ಣ ಹರ್ಷ ಸೇರಿದಂತೆ ನವೀನ ಕುಟುಂಬಸ್ಥರಿಗೆ ಸ್ವಾಮೀಜಿ ಸಾಂತ್ವನ ಹೇಳಿದ್ದಾರೆ. ಬಳಿಕ ಉಕ್ರೇನ್​ನಲ್ಲಿ ಸಿಲುಕಿ ಊರಿನತ್ತ ಮರಳುತ್ತಿರುವ ಜಿಲ್ಲೆಯ ವಿದ್ಯಾರ್ಥಿಗಳನ್ನ ಸಂಪರ್ಕಿಸಿ ಸ್ವಾಮೀಜಿ ಧೈರ್ಯ ತುಂಬಿದ್ದಾರೆ.

Leave a Reply

Your email address will not be published.