
ಹರ್ಷ ಕೊಲೆ ಆರೋಪಿಗಳನ್ನ ಶಿವಮೊಗ್ಗ ಜೈಲಿನಲ್ಲಿ ಇರಿಸುವುದು ಡೌಟ್..! ರಾಜ್ಯದ ಇತರೆ ಸೆಲ್ ಗಳಲ್ಲಿಡಲು ಚಿಂತನೆ
ಶಿವಮೊಗ್ಗ: ಸಿಗೇಹಟ್ಟಿಯ ಹರ್ಷನ ಕೊಲೆ ಆರೋಪಿಗಳ ಪೊಲೀಸ್ ಕಸ್ಟಡಿ ಅವಧಿ ಇವತ್ತಿಗೆ ಅಂತ್ಯಗೊಳ್ಳುತ್ತದೆ. ಅವರನ್ನ ಕೋರ್ಟ್ ಮುಂದೆ ಹಾಜರುಪಡಿಸಿ ಬಳಿಕ, ಪೊಲೀಸರು ಮತ್ತೆ ವಶಕ್ಕೆ ಕೇಳುವ ಸಾದ್ಯತೆ ಇದೆ. ಇಲ್ಲವಾದರೆ ನ್ಯಾಯಾಂಗ ಬಂಧನಕ್ಕೆ ಒಳಪಡುತ್ತಾ ರೆ.ಈ ನಡುವೆ ಆರೋಪಿಗಳನ್ನ ಶಿವಮೊಗ್ಗ ಕಾರಾಗೃಹವಲ್ಲದೆ ಬೇರೆ ಬೇರೆ ಜೈಲುಗಳಿಗೆ ಶಿಫ್ಟ್ ಮಾಡುವುದು ಒಳ್ಳೆಯದು ಎಂಬ ಮಾತು ಕೇಳಿ ಬರುತ್ತಿದೆ.
ಶಿವಮೊಗ್ಗ ಜೈಲಿನಲ್ಲಿ ಆರೋಪಿಗಳನ್ನ ಇಟ್ಟರೇ, ಅಲ್ಲಿನ ಕೈದಿಗಳ ಜೊತೆ ಸಂಘರ್ಷ ಏರ್ಪಡುವ ಸಾಧ್ಯತೆಗಳಿವೆ. ಈ ಹಿಂದೇ ನಡೆದ ಘಟನೆಗಳು ಇದಕ್ಕೆ ಸಾಕ್ಷಿಯಾಗಿದ್ದು, ಆರೋಪಿಗಳ ಸುರಕ್ಷತೆಯ ದೃಷ್ಟಿಯಿಂದಲೂ ಅವರುಗಳನ್ನ ಬೇರೆ ಬೇರೆ ಜೈಲುಗಳಿಗೆ ಶಿಫ್ಟ್ ಮಾ ಡುವುದು ಉತ್ತಮ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಇನ್ನೂ ಇದೇ ಅಭಿಪ್ರಾಯ ಶಿವಮೊಗ್ಗದಲ್ಲಿ ಕೆಲಸ ಮಾಡಿರುವ ಅಧಿಕಾರಿಗಳ ವಲಯದಲ್ಲಿಯು ಕೇಳಿಬರುತ್ತಿದೆ. ಹೀಗಾಗಿ ಆರೋಪಿಗಳನ್ನ ಬೇರೆ ಕಾರಾಗೃಹಗಳಿಗೆ ವರ್ಗಾಯಿಸುವ ಸಾಧ್ಯತೆಗಳು ದಟ್ಟವಾಗಿದೆ.ಸದ್ಯ ಕೇಸ್ನ ಆರೋಪಿಗಳ ವಿರುದ್ಧ ಯುಎಪಿಎ ಆಕ್ಟ್ ಕೂಡ ಅನ್ವಯಿಸಲಾಗಿದೆ. ಪೊಲೀಸರು ಹಲವು ಆಯಾಮಗಳಲ್ಲಿ ಪ್ರಕರಣದ ತನಿಖೆ ನಡೆಸ್ತಿದ್ದು, ಸದ್ಯದಲ್ಲಿಯೇ ಘಟನೆಯ ಸತ್ಯಾಸತ್ಯತೆ ತಿಳಿದುಬರಲಿದೆ.