Home Cinema ಪ್ರೀತಿ,ವಿಶ್ವಾಸ,ನಂಬಿಕೆ..! ಅಭಿನಯ ಚಕ್ರವರ್ತಿಯ ಸ್ನೇಹಪೂರ್ವಕ ನಡೆ ; ಸೂಸುತಿದೆ ’ಮಾಡೆಲ್ ಆಫ್ ಸಿಂಪ್ಲಿಸಿಟಿ’ಯ ಆರ್ಭಟ ಕರುನಾಡಿನೆಲ್ಲೇಡೆ

ಪ್ರೀತಿ,ವಿಶ್ವಾಸ,ನಂಬಿಕೆ..! ಅಭಿನಯ ಚಕ್ರವರ್ತಿಯ ಸ್ನೇಹಪೂರ್ವಕ ನಡೆ ; ಸೂಸುತಿದೆ ’ಮಾಡೆಲ್ ಆಫ್ ಸಿಂಪ್ಲಿಸಿಟಿ’ಯ ಆರ್ಭಟ ಕರುನಾಡಿನೆಲ್ಲೇಡೆ

317
0
SHARE

ಬೆಂಗಳೂರು. ಕಿಚ್ಚ ಸುದೀಪ್ ಹಾಗೂ ಶಿವರಾಜ್‌ಕುಮಾರ್ ಸ್ವೀಟ್ ಫ್ರೆಂಡ್‌ಶಿಪ್‌ಗೆ ಹಿಡಿದ ಕೈಗನ್ನಡಿಯಿದು. ಸಾಮಾನ್ಯವಾಗಿ ಒಬ್ಬ ನಟನ ಹುಟ್ಟುಹಬ್ಬದ ಸಂಭ್ರಮಕ್ಕೆ ಅಭಿಮಾನಿಗಳು ಸಾಕ್ಷಿಯಾಗೋದು ರೂಢಿ. ಆದರೆ ಕರುನಾಡ ಚಕ್ರವರ್ತಿಯ ಬರ್ತಡೇ ಸೆಲೆಬ್ರೆಷನ್ ಈ ಸಲ ಬೇರೆಯಾದೇ ರೀತಿಯಲ್ಲಿರುತ್ತೆ ಎನ್ನುವ ಜರ್ಬದಸ್ತ್ ಹಿಂಟ್ ಸಿಕ್ಕಿದೆ. ಶಿವಣ್ಣನ ಬರ್ತಡೇ ಸಂತೋಷವನ್ನ ಡಬಲ್ ಮಾಡಿರೋದು ಕಿಚ್ಚ ಸುದೀಪ್ ಎನ್ನುವ ವಿಷಯ ಈಗ ಅಭಿಮಾನಿಗಳಲ್ಲಿ ಹೊಸ ಪುಳಕ ಹುಟ್ಟಿಸಿಬಿಟ್ಟಿದೆ.

ಶಿವರಾಜ್ ಕುಮಾರ್ ಜುಲೈ.12ಕ್ಕೆ ತಮ್ಮ ಅಭಿಮಾನಿಗಳು ಯಾವ ರೇಂಜ್‌ಗೆ ಹುಟ್ಟುಹಬ್ಬವನ್ನ ಆಚರಿಸ್ತಾರೆ ಎನ್ನುವ ಯೋಚನೆಯಲ್ಲೇ ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ರು. ಪರಿಸ್ಥಿತಿ ಸುಧಾರಿಸಿದ ಮೇಲೆ ಎಲ್ಲರೂ ಸೇರೊಣ ಎನ್ನುತ್ತ ಆಡಂಬರದ ಸೆಲೆಬ್ರೆಷನ್‌ಗೆ ಫುಲ್ ಸ್ಟಾಪ್ ಎಳೆದ್ರು. ಈಗ ಕಿಚ್ಚ ಸುದೀಪ್ ತಮ್ಮ ಟ್ವಿಟರ್ ಖಾತೆಯಲ್ಲಿ ಶಿವಣ್ಣರ ಒಂದು ಸೂಪರ್‌ಡೂಪರ್ ಕಾಮನ್ ಡಿಪಿಯನ್ನ ರಿಲೀಸ್ ಮಾಡಿದ್ದಾರೆ. ಶಿವರಾಜ್‌ಕುಮಾರ್ 58ನೇ ವಸಂತಕ್ಕೆ ಕಾಲಿಡ್ತಿರೋ ಕ್ಷಣವನ್ನ ಇನ್ನಷ್ಟು ಮೆಮೊರೆಬಲ್ ಆಗಿ ಕ್ರಿಯೆಟ್ ಮಾಡಿದ್ದಾರೆ. ಸುದೀಪ್ ಈ ಕಾಮನ್ ಡಿಪಿಯನ್ನ ರಿಲೀಸ್ ಮಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿದೆ.

ಶಿವಣ್ಣನ ಹುಟ್ಟುಹಬ್ಬ ಬಂದ್ರೇ ಸಾಕು. ಇಡೀ ಸ್ಯಾಂಡಲ್‌ವುಡ್ ಭರ್ಜರಿಯಾಗೇ ಸೆಲೆಬ್ರೆಟ್ ಮಾಡುತ್ತೆ. ಸ್ಟಾರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭಕೋರುವ ಮೂಲಕ ತಮ್ಮ ನದಾಳದ ವಿಶಸ್ ತಿಳಿಸ್ತಾರೆ. ಬಟ್, ಪರಿಸ್ಥಿತಿ, ಸಂದರ್ಭ ಯಾವಾಗಲೂ ಒಂದೇ ರೀತಿಯಲ್ಲಿ ಇರಲ್ಲವಲ್ಲ. ಹಾಗಾಗಿಯೇ ಕೊರೋನಾ ಟೈಮ್‌ನಲ್ಲಿ ಶಿವಣ್ಣ ಒಂದು ಸಮಯೋಚಿತ ನಿರ್ಧಾರವನ್ನ ತೆಗೆದುಕೊಂಡಿದ್ದಾರೆ. ಎಲ್ಲರ ಆರೋಗ್ಯಗಳನ್ನ ಗಮನದಲ್ಲಿಟ್ಟುಕೊಂಡೇ ತಮ್ಮ ಹುಟ್ಟುಹಬ್ಬದ ಆಡಂಬರದ ಆಚರಣೆಗೆ ಬಿಗ್ ಬ್ರೇಕ್ ಹಾಕಿದ್ದಾರೆ. ಆದರೆ ಕೊರೋನಾ ಪರಿಸ್ಥಿತಿಯಲ್ಲೂ ಹ್ಯಾಟ್ರಿಕ್ ಹೀರೊ ಫ್ಯಾನ್ಸ್ ತಮ್ಮ ಅಭಿಮಾನದ ಪರಕಾಷ್ಟೆ ಮೆರೆದಿದ್ದಾರೆ. ಶಿವಣ್ಣ ಮಹೋತ್ಸವಕ್ಕೆ ತಮ್ಮದೇ ಸ್ಟೈಲ್‌ನಲ್ಲಿ ಸಜ್ಜಾಗುತ್ತಿದ್ದಾರೆ.

ಶಿವಣ್ಣ ಮಹೋತ್ಸವ ಎಂಬ ಹೆಸರಿನಲ್ಲಿ ಈ ಕಾಮನ್ ಡಿಪಿ ಬಿಡುಗಡೆಯಾಗಿದೆ. ಎವರಿಥಿಂಗ್ ಫಾರ್ ಶಿವಣ್ಣ, ಎನಿಥಿಂಗ್ ಫಾರ್ ಶಿವಣ್ಣ ಎಂಬ ಸಾಲುಗಳು ಸೆಂಚುರಿಸ್ಟಾರ್ ಮೇಲಿನ ಅಭಿಮಾನವನ್ನ ಪ್ರದರ್ಶಿಸುತ್ತಿದೆ. ಶಿವಣ್ಣರಿಗೆ ಮಾಡೆಲ್ ಆಫ್ ಸಿಂಪ್ಲಿಸಿಟಿ ಎನ್ನುವ ಬಿರುದು ಸಿಕ್ಕಿದೆ. ಅಲ್ಲದೇ ಈ ಡಿಪಿಯಲ್ಲಿ ಎಲ್ಲರ ಗಮನ ಸೆಳಿತಿರೋದೆ ಶಿವರಾಜ್‌ಕುಮಾರ್‌ರ ಗೋಲ್ಡನ್ ಪ್ರತಿಮೆಯ ಝಲಕ್. ಇದು ಕಾಲ್ಪನಿಕವಾದ್ರೂ ಫ್ಯಾನ್ಸ್‌ ಗೆ ಸಕತ್ ಮಜಾ ಕೊಡ್ತಿದೆ. ಅಭಿಮಾನದ ಸೆಳೆತದಲ್ಲೇ ಈ ಕಾಮನ್ ಡಿಪಿ ತಯಾರಾಗಿರೋದು ಸ್ಪಷ್ಟವಾಗಿ ಗೋಚರವಾಗ್ತಿದೆ.

ಜುಲೈ.12 ಶಿವಣ್ಣ ಮಹೋತ್ಸವ ಹೇಗೆ ಜರುಗಲಿದೆ ಎನ್ನುವುದರ ಸಣ್ಣ ಎಕ್ಸ್ಂಪಲ್ ಇದು. ಇದಕ್ಕೆ ಹೊಸಕಿಚ್ಚು ಹಚ್ಚಿರೋದು ಕಿಚ್ಚ ಎನ್ನುವುದೇ ಇಂದಿನ ಬಾಟಮ್ ಲೈನ್. ಸುದೀಪ್ ಹಾಗೂ ಶಿವಣ್ಣರ ಗೆಳೆತನದ ಪ್ರತಿಬಿಂಬ ಇಲ್ಲಿ ಹೈಲೇಟ್ ಆಗಿದೆ. ಯಾಕಂದ್ರೆ ಸಾಮಾನ್ಯವಾಗಿ ಬೇರೆನಟರ ಹುಟ್ಟುಹಬ್ಬದ ದಿನಗಳನ್ನ ನೆನಪಿಟ್ಟುಕೊಳ್ಳೊದೆ ಅಪರೂಪ. ಅಂತದ್ರಲ್ಲಿ ಸುದೀಪ್ ಒಂದು ಸ್ಟೆಪ್ ಮುಂದೆ ಹೋಗಿ ಶಿವಣ್ಣರ ಈ ಕಾಮನ್ ಡಿಪಿಯನ್ನ ರಿಲೀಸ್ ಮಾಡಿದ್ದಾರೆ. ಈ ಹಿಂದೆಯೂ ಸುದೀಪ್ ಸಮಯ ಸಿಕ್ಕಗಲೆಲ್ಲ ತಮ್ಮ ಹಾಗೂ ಶಿವಣ್ಣರ ಬಾಂಡಿಂಗ್ ಎಷ್ಟು ಗಟ್ಟಿಯಾಗಿದೆ ಅಂತ ಹೇಳಿಕೊಳ್ತಿದ್ರು. ಈಗ ಆ ಮಾತುಗಳು ವಾಸ್ತವದಲ್ಲೂ ಸಾಬೀತಾಗಿದೆ. ಕಿಚ್ಚನ ಈ ಕಾರ್ಯಕ್ಕೆ ಹ್ಯಾಟ್ರಿಕ್ ಹೀರೊ ಫ್ಯಾನ್ಸ್ ಫುಲ್ ಫಿದಾ ಆಗಿಬಿಟ್ಟಿದ್ದಾರೆ.

ಒಟ್ಟಿನಲ್ಲಿ ಈ ನಡೆ ಕನ್ನಡ ಚಿತ್ರರಂಗದಲ್ಲಿ ಮಾದರಿಯಾಗಿದೆ. ಬಿಕಾಸ್, ಯಾವಾಗಲೂ ಒಬ್ಬ ಹೀರೊನನ್ನ ಇನ್ನೊಬ್ಬ ಹೀರೊಗೆ ಹೋಲಿಸೋದು, ಸಿನಿಮಾಗಳ ಡೈಲಾಗ್‌ಗಳನ್ನ ವೈಯಕ್ತಿಕವಾಗಿ ಲಿಂಕ್ ಮಾಡೋದು, ಇಂತಹ ಬೇಡದ ಬೆಳವಣಿಗೆಗಳಿಗೆ ಸ್ಟಾರ್‌ಗಳ ಸ್ನೇಹದ ಫ್ರೂಫ್ ಫುಲ್ ಸ್ಟಾಪ್ ಇಡಲಿದೆ. ಸಿನಿಮಾಗಳ ಸ್ಪರ್ಧೆಯನ್ನ ಪಕ್ಕಕ್ಕಿಟ್ಟು ಸ್ಟಾರ್‌ಗಳು ಒಂದಾಗೋದು ಎಲ್ಲ ದೃಷ್ಟಿಕೋನದಿಂದಲೂ ಸ್ವಾಗತಾರ್ಹವೇ. ಯಾವುದೋ ಕೆಟ್ಟಘಳಿಗೆಯಲ್ಲಿ ಕೆಲವು ವಿಷಯಗಳಲ್ಲಿ ಸ್ಟಾರ್‌ಗಳ ಮಧ್ಯೆ ಭಿನ್ನಾಭಿಪ್ರಾಯಗಳು ಹುಟ್ಟಿಕೊಳ್ಳೊದು ಸಹಜ, ಆದರೆ ಅವುಗಳನ್ನ ಅಲ್ಲೇ ಮರೆತು ನಾವೆಲ್ಲರೂ ಒಂದೇ ಅಂತ ಸ್ನೇಹದ ಹಸ್ತ ಚಾಚೋದು ಸ್ಯಾಂಡಲ್‌ವುಡ್‌ನ ಸರ್ವತೋಮುಖ ಬೆಳವಣಿಗೆಗೆ ಅವಶ್ಯಕವಾಗಿದೆ. ಈ ವಿಚಾರದಲ್ಲಿ ಸುದೀಪ್ ಹಾಗೂ ಶಿವರಾಜ್‌ಕುಮಾರ್ ತುಂಬ ಮುಂದಕ್ಕೆ ಹೋಗಿದ್ದಾರೆ. ಅದೇ ಪ್ರೀತಿ,ವಿಶ್ವಾಸದಿಂದ ತಮ್ಮ ಸ್ನೇಹ ಶಾಶ್ವತ ಎಂದು ಸಾರಿಸಾರಿ ಹೇಳಿದ್ದಾರೆ.

 

LEAVE A REPLY

Please enter your comment!
Please enter your name here