ರಷ್ಯಾ-ಉಕ್ರೇನ್ ಯುದ್ಧದಿಂದ ಮದ್ಯ ಪ್ರಿಯರಿಗೆ ಶಾಕ್..! ಬಿಯರ್ ಬೆಲೆಯಲ್ಲಿ ಹೆಚ್ಚಳ ಸಾಧ್ಯತೆ

ರಾಷ್ಟ್ರೀಯ

ನವದೆಹಲಿ : ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧ ಆತಂಕ ವಿಶ್ವದ ಬಹುತೇಕಾ ಎಲ್ಲಾರಾಷ್ಟ್ರಗಳಿಗೆ ಹಬ್ಬಿದೆ. ತಮ್ಮ ನಾಗರೀ ಕರನ್ನು ಸುರಕ್ಷಿತವಾಗಿ ಕರೆದುಕೊಂಡು ಬರುವುದೇ ದೊಡ್ಡ ಚಿಂತೆಯಾಗಿದೆ. ಇದರ ನಡುವೆ ಭಾರತದ ಬಿಯರ್ ಪ್ರಿಯರಿಗೂ ಉಕ್ರೇನ್ ಮೇಲಿನ ದಾಳಿ ಬಹುದೊಡ್ಡ ಚಿಂತೆಯನ್ನೇ ಸೃಷ್ಟಿಸಿದೆ. ಇದಕ್ಕೆ ಕಾರಣ ಯುದ್ಧದಿಂದ ಭಾರತದಲ್ಲಿ ಬಿಯರ್ ಬೆಲೆ ಏರಿಕೆಯಾಗುವ ಸಾಧ್ಯತೆಗಳು ಕಾಣಿಸತೊಡಗಿದೆ.

ಪ್ರತಿ ಸಿಪ್ ಬಿಯರ್ ಇಳಿಸುವಾಗಲು ಚಿಂತೆಯ ನೆರಿಗೆಗಳು ಭಾರತದ ಬಿಯರ್ ಪ್ರಿಯರಲ್ಲಿ ಕಾಣಿಸಿಕೊಳ್ಳುತ್ತಿದೆ. ಉಕ್ರೇನ್ ಮೇಲೆ ರಷ್ಯಾ ದಾಳಿಯಿಂದ ಈಗಾಗಲೇ ಕೆಲ ದೇಶಗಳು ನೇರ ಪರಿಣಾಮ ಎದುರಿಸುತ್ತಿದೆ. ಭಾರತಕ್ಕೆ ಪರೋಕ್ಷ ಪರಿಣಾಮಗಳಿವೆ. ಇದರ ನಡುವೆ ಬಿಯರ್ ಬೆಲೆ ಕೂಡ ಸೇರಿಕೊಂಡಿದೆ. ಇದಕ್ಕೆ ಮುಖ್ಯ ಕಾರಣ ರಷ್ಯಾ ಹಾಗೂ ಉಕ್ರೇನ್ ಎರಡು ದೇಶಗಳು ಅತೀ ಹೆಚ್ಚು ಬಾರ್ಲಿ ಹಾಗೂ ಗೋಧಿ ರಫ್ತು ಮಾಡುವ ದೇಶವಾಗಿದೆ.  ಇದರಿಂದ ಭಾರತಕ್ಕೇನು ಸಮಸ್ಯೆ ಎಂದು ಭಾವಿಸುತ್ತಿದ್ದೀರಾ? ಬಿಯರ್ ತಯಾರಿಕೆಯಲ್ಲಿ ಪ್ರಮುಖ ಪಾತ್ರನಿರ್ವಹಿಸುವ ಬಾರ್ಲಿ ಹಾಗೂ ಗೋಧಿ ಪೂರೈಕೆ ಸಮಸ್ಯೆಯಾಗುತ್ತಿದೆ. ಇದರಿಂದ ಬಿಯರ್ ಬೆಲೆ ಹೆಚ್ಚಳವಾಗುವ ಸಾಧ್ಯತೆ ದಟ್ಟವಾಗಿದೆ.

ಬಾರ್ಲಿ ರಫ್ತು ಮಾಡು ವಿಶ್ವದ ಎರಡನೇ ಅತೀ ದೊಡ್ಡ ದೇಶ ರಷ್ಯಾ. ಇತ್ತ ಗೋಧಿಯನ್ನು ರಫ್ತು ಮಾಡುವ ವಿಶ್ವದ ನಾಲ್ಕನೇ ಅತೀ ದೊಡ್ಡ ದೇಶ ಉಕ್ರೇನ್. ಬಿಯರ್ ತಯಾರಿಕೆಯಲ್ಲಿ ಎರಡು ಅಷ್ಟೇ ಮುಖ್ಯ.  ಯುದ್ಧದಿಂದ ರಷ್ಯಾ ಹಾಗೂ ಉಕ್ರೇನ್‌ನಿಂದ ಬಾರ್ಲಿ ಹಾಗೂ ಗೋಧಿ ರಫ್ತಾಗುತ್ತಿಲ್ಲ. ಇದರಿಂದ ಅಂತಾರಾಷ್ಟ್ರೀಯ  ಮಾರುಕಟ್ಟೆಯಲ್ಲಿ ಬಾರ್ಲಿ ಹಾಗೂ ಗೋಧಿ ಬೆಲೆ ಏರಿಕೆ ದಿನ ದೂರವಿಲ್ಲ. ಭಾರತದ ಬಿಯರ್ ಉತ್ಪಾದನೆ ಕಂಪನಿಗಳು ದೇಶದಲ್ಲಿ ಬೆಳೆಯುವ ಬಾರ್ಲಿ ಹಾಗೂ ಗೋಧಿ ಮೇಲೆ ಅವಲಂಬಿತವಾಗಿದೆ. ಆದರೆ ಬೆಲೆ ಏರಿಕೆ ಬಿಸಿ ಭಾರತಕ್ಕೂ ತಟ್ಟಲಿದೆ.

ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧ ಪರಿಸ್ಥಿತಿ ಹೀಗೆ ಮುಂದುವರಿದರೆ ಬಾರ್ಲಿ ಗೋಧಿ ಪೂರೈಕೆ ಸಮಸ್ಯೆಯಾಗಲಿದೆ. ಅಂತಾರಾ ಷ್ಟ್ರೀಯ ಮಾರುಕಟ್ಟೆಯಲ್ಲಿ ಗೋಧಿ ಹಾಗೂ ಬಾರ್ಲಿ ಬೆಲೆ ಏರಿಕೆಯಾದರೆ ಭಾರತದಲ್ಲೂ ಬೆಲೆ ಏರಿಕೆಯಾಗಲಿದೆ. ಇದರಿಂದ ಬಿಯರ್ ಕಂಪನಿಗಳ ಬಿಯರ್ ಉತ್ಪಾದನಾ ವೆಚ್ಚ ಹೆಚ್ಚಾಗಲಿದೆ. ಅಮೆರಿಕ, ಕೆನಾಡದಲ್ಲಿ ರಷ್ಯಾದ ವೋಡ್ಕಾ, ಮದ್ಯಗಳನ್ನು ಬಹಿಷ್ಕರಿಸಿದ್ದಾರೆ. ಇತ್ತ ರಷ್ಯಾ ಹಾಗೂ ಉಕ್ರೇನ್‌ನಿಂದ ಮದ್ಯ ಪೂರೈಕೆ, ಕಚ್ಚಾ ವಸ್ತುಗಳ ಪೂಕೈಗೂ ಅಡ್ಡಿಯಾಗಿದೆ. ಹೀಗಾಗಿ ಅಮೆರಿಕ, ಕೆನಡಾ ಸೇರಿ ದಂತೆ ಕೆಲ ರಾಷ್ಟ್ರಗಳಲ್ಲಿ ಮದ್ಯದ ಬೆಲೆ ಹೆಚ್ಚಳವಾಗಿದೆ.

Leave a Reply

Your email address will not be published.