
ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ ಹಾಜರಾಗದ ವಿದ್ಯಾರ್ಥಿಗಳಿಗೆ ಶಾಕ್..!
ಬೆಂಗಳೂರು: ರಾಜ್ಯಾದ್ಯಂತ ಇಂದಿನಿಂದ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳು ಆರಂಭವಾಗಲಿವೆ. ಹಿಜಾಬ್ ವಿವಾದದಿಂದ ವಿದ್ಯಾರ್ಥಿನಿಯರು ಪರೀಕ್ಷೆಗೆ ಗೈರಾದರೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ಇಲ್ಲ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಸ್ಪಷ್ಟ ಪಡಿಸಿದೆ. ಈ ನಿಟ್ಟಿನಲ್ಲಿ ಇಲಾಖೆ ಈಗಾಗಲೇ ಪ್ರಾಕ್ಟಿಕಲ್ ಪರೀಕ್ಷೆಯ ವೇಳಾಪಟ್ಟಿ ಪ್ರಕಟಿಸಿದ್ದು, ಅದರಂತೆಯೇ ಪಿಯು ಕಾಲೇಜು ಗಳಲ್ಲಿ ಪರೀಕ್ಷೆಗಳು ನಡೆಯಲಿವೆ. ಹಿಜಾಬ್ ವಿವಾದಿಂದಾಗಿ ಕೆಲವು ಕಾಲೇಜುಗಳಲ್ಲಿ ಗೊಂದಲ ಏರ್ಪಟ್ಟಿದೆ.
ಈ ಮಧ್ಯೆಯೇ ನಿಗದಿತ ವೇಳಾಪಟ್ಟಿಯಂತೆಯೇ ಪರೀಕ್ಷೆಗಳನ್ನು ಇಲಾಖೆ ನಡೆಸುತ್ತಿದೆ. ಥಿಯರಿ 70 ಅಂಕಗಳಿಗೆ ಮಾತ್ರ ಪರೀಕ್ಷೆ ಎದು ರಿಸಬೇಕು. ಉತ್ತೀರ್ಣವಾಗಲು ಥಿಯರಿ ಪರೀಕ್ಷೆಯಲ್ಲಿ 70 ಅಂಕಕ್ಕೆ 35 ಅಂಕ ಪಡೆಯಬೇಕು. CET ಪರೀಕ್ಷೆ ಎದುರಿಸಬೇಕು ಅಂದ್ರೆ ಕನಿಷ್ಠ 45 ಅಂಕ ಪಡೆದಿರಬೇಕು. ಥಿಯೇರಿ 70 ಅಂಕಗಳಲ್ಲಿಯೇ 45 ಅಂಕ ಪಡೆದ್ರೆ ಮಾತ್ರ CET ಗೆ ಅವಕಾಶ ಇರುತ್ತದೆ. ಶೈಕ್ಷಿಕಣ ಭವಿಷ್ಯದ ದೃಷ್ಟಿಯಿಂದ ಪ್ರಾಯೋಗಕ ಅಂಕ ಮುಖ್ಯವಾಗುತ್ತದೆ. ಪ್ರಾಯೋಗಿಕ ಅಂಕ ಪಡೆದ್ರೆ ಮಾತ್ರ ಉತ್ತಮ ಫಲಿತಾಂಶ ಪಡೆಯ ಬಹದು. ಪ್ರಾಯೋಗಿಕ ಗಳಿಸಿದರೆ ಸುಲಭವಾಗಿ ಪಾಸ್ ಆಗಬಹುದು.