ಶೂಟಿಂಗ್ ಸೆಟ್ ನಲ್ಲಿ ಮೋಹಕ ತಾರೆ: ‘’ಹೊಯ್ಸಳ’’ ಸೀನ್ ಗಳನ್ನ ನೋಡಿ ದಂಗಾದ ರಮ್ಯಾ

ಚಲನಚಿತ್ರ

ಬಡವ ರಾಸ್ಕಲ್’ ಚಿತ್ರದ ಸಕ್ಸಸ್ ನಂತರ ನಟರಾಕ್ಷಸ ಡಾಲಿ ಸದ್ಯ ‘ಹೊಯ್ಸಳ’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಡಾಲಿ ಮತ್ತು ಚಿತ್ರತಂಡಕ್ಕೆ ಮೋಹಕ ತಾರೆ ರಮ್ಯಾ ಸಾಥ್ ನೀಡಿದ್ದಾರೆ. ಡಾಲಿ ಧನಂಜಯ್ ಮತ್ತು ಅಮೃತಾ ನಟನೆಯ ಹೊಯ್ಸಳ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಕಳೆದ ಬಾರಿ ಟೀಂ ಇಂಡಿಯಾ ಆಟಗಾರ್ತಿ ವೇದ ಕೃಷ್ಣಮೂರ್ತಿ ಭೇಟಿ ನೀಡಿರೋ ಬೆನ್ನಲ್ಲೇ ಸ್ಯಾಂಡಲ್‌ವುಡ್‌ ಕ್ವೀನ್ ರಮ್ಯಾ ಕೂಡ ಭೇಟಿ ಕೊಟ್ಟಿದ್ದಾರೆ.

 

ಇದೀಗ ‘ಹೊಯ್ಸಳ’ ಚಿತ್ರೀಕರಣ ನಡೆಯುತ್ತಿರುವ ಸ್ಥಳಕ್ಕೆ ನಟಿ ರಮ್ಯಾ ಭೇಟಿ ನೀಡಿ, ಚಿತ್ರತಂಡದ ಬಳಿ ಮಾತನಾಡುತ್ತಿರುವ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ. ಮೊದಲೇ ರಮ್ಯಾ ಕಂಬ್ಯಾಕ್ ಕುರಿತು ಸದ್ದು ಮಾಡ್ತಿರೋ ಬೆನ್ನಲ್ಲೇ ಭೇಟಿ ಕೊಟ್ಟಿರೋದನ್ನ ನೋಡಿ ರಮ್ಯಾ ಡಾಲಿಗೆ ಜೊತೆಯಾಗುತ್ತೀದ್ದಾರಾ ಅಂತಾ ಪ್ರಶ್ನಿಸುತ್ತಿದ್ದಾರೆ. ಕೆಆರ್‌ಜಿ ಬ್ಯಾನರ್ ಅಡಿ ನಿರ್ಮಾಣವಾಗುತ್ತಿರುವ ಹೊಯ್ಸಳ ಚಿತ್ರದಲ್ಲಿ ಡಾಲಿ ಜೊತೆ ರಮ್ಯಾ ನಟಿಸುತ್ತಿದ್ದಾರಾ ಈ ಎಲ್ಲಾ ಪ್ರಶ್ನೆಗಳಿಗೂ ಚಿತ್ರತಂಡದ ಅಧಿಕೃತ ಘೋಷಣೆ ಆಗುವವರೆಗೂ ಕಾದುನೋಡಬೇಕಿದೆ..

Leave a Reply

Your email address will not be published.