ಶ್ರೇಯಸ್ ಅಜೇಯ ಅರ್ಧಶತಕ; ಟಿ20 ಸರಣಿ ಗೆದ್ದು ವಿಶ್ವ ದಾಖಲೆ ಬರೆದ ಟೀಂ ಇಂಡಿಯಾ..!

ಕ್ರೀಡೆ

ಶ್ರೇಯಸ್​ ಅಯ್ಯರ್​ ಅವರ ಅಮೋಘ ಅರ್ಧಶತಕದ ನೆರವಿನಿಂದ ಭಾರತ ತಂಡ ಕೊನೆಯ ಪಂದ್ಯವನ್ನು 5 ವಿಕೆಟ್​ಗಳಿಂದ ಗೆದ್ದು ಟಿ20 ಸರಣಿಯನ್ನು 3-0ಯಲ್ಲಿ ಕ್ಲೀನ್ ಸ್ವೀಪ್ ಸಾಧಿಸಿದೆ.ಕೊನೆಯ ಟಿ20 ಪಂದ್ಯದಲ್ಲಿ ಶ್ರೀಲಂಕಾ ನೀಡಿದ್ದ 147 ರನ್​ಗಳ ಸಾಧಾರಣ ಗುರಿಯನ್ನು ಭಾರತ ತಂಡ ಕೇವಲ 16.5 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು ತಲುಪಿತು. ಈ ಮೂಲಕ 3 ಪಂದ್ಯಗಳ ಸರಣಿಯನ್ನು 3-0ಯಲ್ಲಿ ವಶಪಡಿಸಿಕೊಂಡಿತು.

ತಮ್ಮ ಅಮೋಘ ಫಾರ್ಮ್​ ಮುಂದುವರಿಸಿದ ಶ್ರೇಯಸ್​ ಅಯ್ಯರ್​ 45 ಎಸೆತಗಳಲ್ಲಿ 9 ಬೌಂಡರಿ ಮತ್ತು 1 ಸಿಕ್ಸರ್​ ಸಹಿತ ಅಜೇಯ 73 ರನ್​ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು. ಜಡೇಜಾ 15 ಎಸೆತಗಳಲ್ಲಿ ಅಜೇಯ 22 ರನ್​ಗಳಿಸಿದರು. ಆರಂಭಿಕರಾಗಿ ಬಡ್ತಿ ಪಡೆದಿದ್ದ ಸಂಜು ಸಾಮ್ಸನ್​ 18, ರೋಹಿತ್ ಶರ್ಮಾ 5, ದೀಪಕ್ ಹೂಡ 21 ಮತ್ತು ವೆಂಕಟೇಶ್​ ಅಯ್ಯರ್ 5 ಗಮನಾರ್ಹ ಪ್ರದರ್ಶನ ನೀಡುವಲ್ಲಿ ವಿಫಲರಾದರು.

ಶ್ರೀಲಂಕಾ ಪರ ಲಹಿರು ಕುಮಾರ 32ಕ್ಕೆ 2, ಚಮಿಕಾ ಕರುಣರತ್ನೆ 31ಕ್ಕೆ1, ದುಷ್ಮಂತ ಚಮೀರಾ 19ಕ್ಕೆ1 ವಿಕೆಟ್ ಪಡೆದರು.ಇದಕ್ಕೂ ಮುನ್ನ ಟಾಸ್​ ಗೆದ್ದ ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ತಂಡ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 146 ರನ್​ಗಳಿಸಿದ್ದರು. ಶನಕ 38 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್​ ಸಹಿತ 74 ರನ್​ಗಳಿಸಿದ್ದರು. ಭಾರತದ ಪರ ಅದ್ಭುತ ಬೌಲಿಂಗ್ ದಾಳಿ ನಡೆಸಿದ ಆವೇಶ್ ಖಾನ್​ 23ಕ್ಕೆ 2, ರವಿ ಬಿಷ್ಣೋಯ್​ 32ಕ್ಕೆ1, ಹರ್ಷಲ್ ಪಟೇಲ್ 29ಕ್ಕೆ1, ಮೊಹಮ್ಮದ್ ಸಿರಾಜ್ 22ಕ್ಕೆ1 ವಿಕೆಟ್​ ಪಡೆದರು.

Leave a Reply

Your email address will not be published.