ನಾವು ಕೋಮುವಾದ ಮಾಡುವವರಲ್ಲ ಜನಪರ ಹೋರಾಟ ಮಾಡುವವರು: ವಿಪಕ್ಷ ನಾಯಕ ಸಿದ್ದರಾಮಯ್ಯ

ರಾಜಕೀಯ

ಬೆಂಗಳೂರು: ಬಿಜೆಪಿಯವರು ಸುಳ್ಳು ತಯಾರು ಮಾಡುವ ಫ್ಯಾಕ್ಟರಿಯವರು ಎಂದು ಆಡಳಿತ ಪಕ್ಷದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿಯವರು  ಜಾಹೀರಾತುಗಳಲ್ಲೂ ಸುಳ್ಳೇ ಕೊಡ್ತಾರೆ. ಕಾರಜೋಳ ನೀರಾವರಿ ಸಚಿವರಿದ್ದಾರೆ. ಇಷ್ಟೊಂದು ಸುಳ್ಳು ಹೇಳ್ತಾರೆ ಅಂದುಕೊಂಡಿರಲಿಲ್ಲ. ಕರಾವಳಿಯಲ್ಲಿ‌ ಬೆಂಕಿ‌ ಹತ್ತಿ ಉರಿಯುತ್ತಿದೆ. ನಮ್ಮ ಕಾಲದಲ್ಲಿ ಅಲ್ಲಿ ಸಾಮರಸ್ಯವಿತ್ತು. ಕೋಮುವಾದಕ್ಕೆ ಉಡುಪಿ, ಮಂಗಳೂರು ಲ್ಯಾಬೋರೆಟರಿ ಇದ್ದ ಹಾಗೆ. ಹಿಂದೂ-ಮುಸ್ಲಿಂ‌ ಹತ್ಯೆಯಾಗುತ್ತೆ.

ಈಶ್ವರಪ್ಪ ಅಲ್ಲಿ‌ ಮೆರವಣಿಗೆ ಮಾಡ್ತಾರೆ. ಅಂತವರ ಮೇಲೆ ಯಾವ ಕೇಸ್ ಹಾಕಲ್ಲ. ನಮ್ಮ ಮೇಲೆ ಇವರು ಕೇಸ್ ಹಾಕ್ತಾರೆ. ನಾವು ಕೋಮುವಾದ ಮಾಡುವವರಲ್ಲ. ನಾವು ಜನಪರ ಹೋರಾಟ ಮಾಡುವವರು. ಇವರದ್ದು ಹೇಡಿಗಳ‌ ಸರ್ಕಾರ. ಮೋದಿ ಮುಂದೆ ನಿಂತು ಕೇಳುವ‌ ಧಮ್​ ಇವರಿಗಿಲ್ಲ. ನಾವು ನಿಮ್ಮ ಮೇಲೂ‌ ರಾಜಕೀಯ ಹೋರಾಟ ಮಾಡ್ತೇವೆ. ನಾವೇನು ಸನ್ಯಾಸಿಗಳಲ್ಲ, ಮುಂದೆ ರಾಜಕೀಯ ಹೋರಾಟವನ್ನೂ ಮಾಡ್ತೇವೆ. ನಾವೇನು ಕದ್ದು ಮುಚ್ಚಿ ಹೋರಾಟ ಮಾಡಲ್ಲ. ನೇರವಾಗಿಯೇ ರಾಜಕೀಯ ಹೋರಾಟ ಮಾಡ್ತೇವೆ ಎಂದರು.

Leave a Reply

Your email address will not be published.