
ಸಿದ್ದರಾಮೋತ್ಸವ ಜಯಂತಿ ನಡೆಸುವ ವಿಚಾರ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳೀದ್ದೇನು..?
ಬೆಂಗಳೂರು: ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಜಯಂತಿ ನಡೆಸುವ ವಿಚಾರದ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಸದಾಶಿವ ನಗರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರ 75ನೇ ಹುಟ್ಟುಹಬ್ಬ ಪ್ರಯುಕ್ತ ಮಾಡ್ತಿದ್ದಾರೆ. ಕಾರ್ಯಕರ್ತರು, ಅಭಿಮಾನಿಗಳು ಸೇರಿಕೊಂಡು ಮಾಡ್ತಿದ್ದಾರೆ. ನನ್ನ ಹುಟ್ಟುಹಬ್ಬ ಕೇದಾರನಾಥ ಸನ್ನಿಧಿಯಲ್ಲಿ ಆಚರಿಸಿಕೊಂಡೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಆಚರಣೆ ಮಾಡ್ತಾರೆ ಎಂದರು.
ಇನ್ನೂ ಚುನಾವಣೆ ಸಮೀಕ್ಷೆ ಕುರಿತು ಪ್ರತಿಕ್ರಿಯಿಸಿದ ಅವರು, ಹಲವು ಭಾರಿ ಸಮೀಕ್ಷೆ ನಡೆಸಿದ್ದೇವೆ. ನಾನೂ ಕೂಡ ಸಮೀಕ್ಷೆ ನಡೆಸುತ್ತಿ ದ್ದೇನೆ. ವಿದ್ಯಾವಂತರ ಜೊತೆ ಪ್ರಜ್ಞಾವಂತರು ಮತ ಹಾಕಿದ್ದಾರೆ. ಮೊದಲ ಬಾರಿಗೆ ಪದವೀಧರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದೇವೆ. ಸಮೀಕ್ಷೆ ತೀರ್ಮಾನ ಸರಿ ಅಂತ ನಾನು ಹೇಳೋದಿಲ್ಲ. ಆದರೆ, ಲೆಕ್ಕಾಚಾರ ಇಟ್ಟುಕೊಂಡೇ ಸಮೀಕ್ಷೆ ನಡೆಯುತ್ತೆ. ಕೆಲವೊಮ್ಮೆ ಸಮೀಕ್ಷೆ ನಿಜ ಆಗುತ್ತೆ. ಮಗದೊಮ್ಮೆ ಅದು ಸುಳ್ಳಾಗಬಹುದು. ಆದರೂ ಜನರ ಒಲವು ನಮ್ಮ ಪಕ್ಷದ ಕಡೆ ಇರುವುದು ನಿಜ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.