Home District SIDDU ಹೋಗುವ ತನಕ ಕಾರೇ ಇಳಿಯದ HDK..?! SIDDI-HDK ಮಧ್ಯೆ ಮತ್ತೆ ಶೀತಲ ಸಮರ..?! ಮುಖಾಮುಖಿಯಾದರೂ...

SIDDU ಹೋಗುವ ತನಕ ಕಾರೇ ಇಳಿಯದ HDK..?! SIDDI-HDK ಮಧ್ಯೆ ಮತ್ತೆ ಶೀತಲ ಸಮರ..?! ಮುಖಾಮುಖಿಯಾದರೂ ಮಾತನಾಡದ ಸಿದ್ದು-ಹೆಚ್ಡಿಕೆ

930
0
SHARE

ಮಾಜಿ ಸಿಎಂ ಹಾಗೂ ಹಾಲಿ ಸಿಎಂ ಇಂದು ಸಂಗೊಳ್ಳಿ ರಾಯಣ್ಣನ ಕಾರ್ಯಕ್ರಮದಲ್ಲಿ ಪರಸ್ಪರ ಎದುರಾದ್ರೂ,ಮಾತನಾಡದೇ ತೆರಳಿದ ಪ್ರಸಂಗ ನಡೀತು..ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ 221ನೇ ಜಯಂತೋತ್ಸವ ಹಿನ್ನಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಹಾಲಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ರಾಯಣ್ಣ ಪ್ರತಿಮೆಗೆ ಮಾಲರ್ಾಪಣೆ ಮಾಡಿದ್ರು.

ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಾರ್ಯಕ್ರಮಕ್ಕೆ ತಡವಾಗಿ ಬಂದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ರಾಯಣ್ಣ ಪ್ರತಿಮೆಗೆ ಮಾಲರ್ಾಪಣೆ ಮಾಡಿದ್ದರು..ಸಿದ್ದರಾಮಯ್ಯ ಭಾಷಣ ಮುಗಿಸಿ ಹೊರಡುವ ವೇಳೆ,ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಗಮಿಸಿದ್ರು..

ಉಭಯ ನಾಯಕರು ಪರಸ್ಪರ ಎದುರಾದರೂ ಮಾತನಾಡದೇ ಮಾಜಿ ಸಿಎಂ ಸಿದ್ದರಾಮಯ್ಯ ತೆರಳಿದ್ರು..ಸಿದ್ದರಾಮಯ್ಯ ಹೊರಡುವ ವೇಳೆ ಕುಮಾರಸ್ವಾಮಿ ತಮ್ಮ ಕಾರನಲ್ಲೇ ಕುಳಿತಿದ್ರು..

ಸಿದ್ದರಾಮಯ್ಯ ಹೋದ ಬಳಿಕ ಸಿಎಂ ಎಚ್.ಡಿ.ಕುಮಾರಸ್ವಾಮಿ ರಾಯಣ್ಣ ಪ್ರತಿಮೆಗೆ ಮಾಲರ್ಾಪಣೆ ಮಾಡಿದ್ದರು..ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ,ಬ್ರಿಟಿಷರ್ ವಿರುದ್ಧ ರಾಯಣ್ಣ ಹೋರಾಟ ಮಾಡಿದ್ದರು..ಆದ್ರೆ, ನಮ್ಮವ್ರೇ ಬ್ರಿಟಿಷರಿಗೆ ಮಾಹಿತಿ ನೀಡಿ ರಾಯಣ್ಣನನ್ನ ಸೆರೆಹಿಡಿಯೋದಕ್ಕೆ ಸಹಾಯ ಮಾಡಿದ್ರು ಎಂದ್ರು..

LEAVE A REPLY

Please enter your comment!
Please enter your name here